ಶಿವಮೊಗ್ಗ ಲೈವ್.ಕಾಂ | SHIMOGA NEWS | 01 ಅಕ್ಟೋಬರ್ 2021
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
ಪತಿಯೊಂದಿಗೆ ಬೈಕ್’ನಲ್ಲಿ ತೆರಳುತ್ತಿದ್ದ ಮಹಿಳೆಯ ಚಿನ್ನದ ಸರ ಕಳ್ಳತನಕ್ಕೆ ಪ್ರಯತ್ನಿಸಲಾಗಿದೆ. ಈ ವೇಳೆ ಬೈಕುಗಳ ಮಧ್ಯೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಮಹಿಳೆಗೆ ಗಾಯವಾಗಿದೆ. ಕಳ್ಳರು ಪರಾರಿಯಾಗಿದ್ದಾರೆ.
ಹರಿಗೆ ಚಾನಲ್ ಏರಿಯಾದ ಜಯಮ್ಮ ಅವರು ಪತಿ ಲಕ್ಕೇಗೌಡ ಅವರೊಂದಿಗೆ ಬೈಕ್’ನಲ್ಲಿ ತೆರಳುತ್ತಿದ್ದರು. ಭದ್ರಾವತಿಯಲ್ಲಿರುವ ಸಹೋದರಿ ಮನೆಯಿಂದ ತಮ್ಮ ಮನೆಗೆ ಮರಳುತ್ತಿದ್ದಾಗ ಘಟನೆ ಸಂಭವಿಸಿದೆ.
ಹೇಗಾಯ್ತು ಘಟನೆ?
ಭದ್ರಾವತಿಯಿಂದ ದಂಪತಿ ರಾತ್ರಿ 9.30ರ ಹೊತ್ತಿಗೆ ಬೈಕ್’ನಲ್ಲಿ ಹಿಂತಿರುಗುತ್ತಿದ್ದರು. ಚುಂಚಾದ್ರಿ ಕೆರೆ ಬಳಿ ಯುವಕರಿಬ್ಬರು ಬೈಕ್’ನಲ್ಲಿ ಬಂದಿದ್ದಾರೆ. ಲಕ್ಕೇಗೌಡ ಅವರು ಚಲಾಯಿಸುತ್ತಿದ್ದ ಬೈಕ್’ನ ಸಮೀಪಕ್ಕೆ ಬಂದ ಯುವಕರು, ಜಯಮ್ಮ ಅವರ ಕೊರಳಿಗೆ ಕೈ ಹಾಕಿದ್ದಾರೆ. ಈ ಸಂದರ್ಭ ಬೈಕುಗಳ ನಡುವೆ ಡಿಕ್ಕಿಯಾಗಿ ಎರಡು ಬೈಕ್’ನಲ್ಲಿದ್ದವರು ಕೆಳಗೆ ಬಿದ್ದಿದ್ದಾರೆ.

ಜನ ಸೇರುವ ಮೊದಲೆ ಕಳ್ಳರು ತಮ್ಮ ಬೈಕ್’ನಲ್ಲಿ ಪರಾರಿಯಾಗಿದ್ದಾರೆ. ಜಯಮ್ಮ ಅವರಿಗೆ ಗಾಯವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸರ ಕದಿಯಲು ವಿಫಲ ಯತ್ನ ಮತ್ತು ಅಪಘಾತಪಡಿಸಿದ ಯುವಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ದಂಪತಿ ತುಂಗಾ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ ಮೂಲಕ ಸುದ್ದಿಗಾಗಿ 7411700200
LATEST NEWS
- ವರ್ಷ ಪೂರ್ತಿ ರಂಗ ಚಟುವಟಿಕೆ, ಉದ್ಘಾಟನೆಯ ದಿನಾಂಕ ಪ್ರಕಟ, ಏನಿದು ಕಾರ್ಯಕ್ರಮ?

- ಸರ್ಕಾರಿ ಮಹಿಳಾ ನೌಕರರ ಸಂಘ ಅಸ್ಥಿತ್ವಕ್ಕೆ, ಉದ್ದೇಶವೇನು? ರಾಜ್ಯಾಧ್ಯಕ್ಷೆ ಏನೆಲ್ಲ ಹೇಳಿದರು?

- ಅರ್ಧಕ್ಕರ್ಧ ಶಿವಮೊಗ್ಗ ಸಿಟಿಯಲ್ಲಿ ಫೆಬ್ರವರಿ 7ರಂದು ಇಡೀ ದಿನ ಕರೆಂಟ್ ಇರಲ್ಲ, ಯಾವ್ಯಾವ ಏರಿಯಾ? ಇಲ್ಲಿದೆ ಲಿಸ್ಟ್

- ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತಷ್ಟು ತಗ್ಗಿದ ತಪಮಾನ, ಯಾವ್ಯಾವ ತಾಲೂಕಿನಲ್ಲಿ ಎಷ್ಟಿದೆ?

- ಶಿವಮೊಗ್ಗ ಮಾರಿಕಾಂಬಾ ಜಾತ್ರೆ, ಪಂದ್ಯ ಗೆದ್ದವರಿಗೆ ಎರಡು ಟಗರು

About The Editor
ನಿತಿನ್ ಆರ್.ಕೈದೊಟ್ಲು






