ಶಿವಮೊಗ್ಗ ಲೈವ್
ಶಿವಮೊಗ್ಗ: ಹಿರಿಯ ನಾಗರಿಕರೊಬ್ಬರಿಗೆ KSRTC ಬಸ್ ಚಾಲಕ ಮತ್ತು ನಿರ್ವಾಹಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಶಿವಮೊಗ್ಗದಿಂದ ಹೊನ್ನಾಳಿಗೆ ತೆರಳುವ ಬಸ್ಸಿನಲ್ಲಿ ಘಟನೆ ಸಂಭವಿಸಿದೆ. (ಈ ಸುದ್ದಿಯನ್ನು ಇನ್ನು 30 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ನ್ಯಾಮತಿಯ ಕೇಶವಮೂರ್ತಿ ಎಂಬುವವರು ಹೊನ್ನಾಳಿಗೆ ತೆರಳುತ್ತಿದ್ದರು. ಕಂಡಕ್ಟರ್ ಟಿಕೆಟ್ ನೀಡುವಾಗ ಕೇಶವಮೂರ್ತಿ ಅವರು ಹಿರಿಯ ನಾಗರಿಕರ ಕಾರ್ಡ್ ನೀಡಿದ್ದಾರೆ. ಈ ಸಂದರ್ಭ ಕಂಡಕ್ಟರ್ ಅವಾಚ್ಯವಾಗಿ ನಿಂದಿಸಿದ್ದಾರೆ. ಶಿವಮೊಗ್ಗದ ಹೊನ್ನಾಳಿ ರಸ್ತೆಯ ಫ್ಲೈ ಓವರ್ ಬಳಿ ಬಸ್ ನಿಲ್ಲಿಸಿ ಚಾಲಕ ಮತ್ತು ನಿರ್ವಾಹಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಘಟನೆ ಸಂಭವಿಸಿದೆ.

ಇದನ್ನೂ ಓದಿ » ಗೂಗಲ್ ಪೇ, ಫೋನ್ ಪೇಗೆ ನೊಟೀಸ್, ಶಿವಮೊಗ್ಗದ ವ್ಯಾಪಾರಿಗಳಿಗೆ ಢವಢವ, ಸದ್ಯ ಹೇಗಿದೆ ಪರಿಸ್ಥಿತಿ?
