ನೀರು ಕಾಯಿಸಿಲು ಇಟ್ಟಿದ್ದ ತಾಮ್ರದ ಹಂಡೆಯೇ ನಾಪತ್ತೆ

ಶಿವಮೊಗ್ಗ
LIVE

ಶಿವಮೊಗ್ಗ: ನೀರು ಕಾಯಿಸಲು ಮನೆಯ ಹಿಂಬದಿ ಇಟ್ಟಿದ್ದ ತಾಮ್ರದ ಹಂಡೆಯನ್ನೇ ಕಳ್ಳರು ಹೊತ್ತೊಯ್ದಿದ್ದಾರೆ. ಹಾಯ್‌ಹೊಳೆ ಸಮೀಪದ ಭಾರತಿ ನಗರದ ನಿವಾಸಿ ಮೀನಾಕ್ಷಿ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಅಂದಾಜು 15 ಕೆಜಿ ತೂಕದ ತಾಮ್ರದ ಹಂಡೆಯನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಈ ತಾಮ್ರದ ಹಂಡೆಯ ಅಂದಾಜು ಮೌಲ್ಯ ₹15,000 ಎಂದು ದೂರಿನಲ್ಲಿ ತಿಳಿಸಲಾಗಿದೆ. ಮನೆಯ ಹಿಂಭಾಗದ ತೆರೆದ ಜಾಗದಲ್ಲಿ ಮೀನಾಕ್ಷಿ ಅವರು ನೀರು ಕಾಯಿಸಲು ಹಂಡೆ ಇಟ್ಟಿದ್ದರು. ಕಳ್ಳತನವಾಗಿರುವ ಬಗ್ಗೆ ಗಮನಕ್ಕೆ ಬಂದ ನಂತರ ಕೂಡಲೆ ತುಂಗಾ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

crime name image

ಇದನ್ನೂ ಓದಿ » ಶಿವಮೊಗ್ಗದ ಮಹಿಳೆಯರೆ ಹುಷಾರ್‌, ದಾಖಲಾಯ್ತು ಮತ್ತೊಂದು ಕೇಸ್‌

2024ರಲ್ಲಿ ಮೀನಾಕ್ಷಿ ಅವರ ಹಳೆ ಮನೆಯ ಬೀಗ ಒಡೆದು ₹2,25,000 ಮೌಲ್ಯದ ಬಂಗಾರ, ಬೆಳ್ಳಿ ಮತ್ತು ನಗದು ಕಳ್ಳತನವಾಗಿತ್ತು. ಆ ಸಂದರ್ಭದಲ್ಲು ದೂರು ನೀಡದ್ದನ್ನು ಉಲ್ಲೇಖಿಸಿದ್ದಾರೆ. ತುಂಗಾ ನಗರ ಠಾಣೆ ಪೊಲೀಸರು ಕಳ್ಳರಿಗಾಗಿ ಶೋಧ ನಡೆಸುತ್ತಿದ್ದಾರೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment