ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಈ ಮೇಲ್ (business email) ಹ್ಯಾಕ್ ಮಾಡಿದ ಸೈಬರ್ ವಂಚಕರು, ಕಚ್ಚಾ ವಸ್ತುಗಳ ಪೂರೈಕೆದಾರರ ಸೋಗಿನಲ್ಲಿ ಲಕ್ಷಾಂತರ ರೂಪಾಯಿ ಹಣ ದೋಚಿದ್ದಾರೆ. ಪೂರೈಕೆದಾರರ ಬ್ಯಾಂಕ್ ಖಾತೆ ಬದಲಾಗಿದೆ ಎಂದು ನಕಲಿ ಇಮೇಲ್ ಕಳುಹಿಸಿ ಶಿವಮೊಗ್ಗದ ಕಾರ್ಖಾನೆ ಒಂದರಿಂದ ₹8,89,950 ಹಣ ತಮ್ಮ ಖಾತೆಗೆ ವರ್ಗಾಯಿಸಿಕೊಂಡು ವಂಚನೆ ಎಸಗಿದ್ದಾರೆ.
ಶಿವಮೊಗ್ಗದ ಆಟೋಮೊಬೈಲ್ ಬಿಡಿಭಾಗಗಳ ತಯಾರಿಕೆ ಕಾರ್ಖಾನೆಗೆ ಬೆಂಗಳೂರಿನ ಪೂರೈಕೆದಾರ ಕಂಪನಿಯಿಂದ ಕಚ್ಚಾ ಸಾಮಗ್ರಿ ತರಿಸಿಕೊಳ್ಳಲಾಗುತ್ತಿತ್ತು. ಜನವರಿ 27 ರಂದು ಪೂರೈಕೆದಾರರ ಹೆಸರಿನಲ್ಲಿ ಈ ಮೇಲ್ ಬಂದಿತ್ತು. ನಮ್ಮ ಬ್ಯಾಂಕ್ ಖಾತೆ ಎಸ್ಬಿಐನಿಂದ ಸೌತ್ ಇಂಡಿಯನ್ ಬ್ಯಾಂಕಿಗೆ ಬದಲಾಯಿಸಿದ್ದೇವೆ, ಇನ್ನು ಮುಂದೆ ಇದೇ ಖಾತೆಗೆ ಹಣ ವರ್ಗಾಯಿಸಿ ಎಂದು ತಿಳಿಸಲಾಗಿತ್ತು. ಇದನ್ನು ನಂಬಿದ ಶಿವಮೊಗ್ಗದ ಕಾರ್ಖಾನೆ ಮ್ಯಾನೇಜರ್, ಜನವರಿ 28 ರಂದು ಹೊಸ ಖಾತೆಗೆ ಹಣ ವರ್ಗಾವಣೆ ಮಾಡಿದ್ದರು.

ನಂತರ ಪರಿಶೀಲಿಸಿದಾಗ, ಅನಾಮಧೇಯ ವ್ಯಕ್ತಿಗಳು ಪೂರೈಕೆದಾರ ಕಂಪನಿಯ ಇಮೇಲ್ ಐಡಿಯನ್ನು ಹ್ಯಾಕ್ ಮಾಡಿ ಈ ಕೃತ್ಯ ಎಸಗಿರುವುದು ಪತ್ತೆಯಾಗಿದೆ. ವಂಚಕರು ನಕಲಿ ಬ್ಯಾಂಕ್ ವಿವರಗಳನ್ನು ನೀಡಿ ಕಾರ್ಖಾನೆಯ ಹಣ ಆರ್ಟಿಜಿಎಸ್ ಮೂಲಕ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ. ಶಿವಮೊಗ್ಗದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಮಹಿಳೆಯರೆ ಹುಷಾರ್, ಶಿವಮೊಗ್ಗದಲ್ಲಿ ಡಬ್ಬಿ ಚಮತ್ಕಾರ, ಮರಳಾದರೆ ಚಿನ್ನಾಭರಣವೇ ಮಾಯ, ಏನಿದು?

LATEST NEWS
- ಸರ್ವೆಗೆ ಹೋದಾಗ ಇಂಜಿನಿಯರ್, ಸರ್ವೇಯರ್ ಮೇಲೆ ಕೋಲು, ಕಲ್ಲುಗಳಿಂದ ದಾಳಿ

- ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

- ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

- ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್ ವಿಚಾರ

- ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್ ಅಪ್ಡೇಟ್

About The Editor
ನಿತಿನ್ ಆರ್.ಕೈದೊಟ್ಲು















