ಒಂದೇ ಒಂದು ಈ ಮೇಲ್‌ನಿಂದ ಶಿವಮೊಗ್ಗದ ಕಾರ್ಖಾನೆಗೆ ₹8,89,950 ನಷ್ಟ, ಆಗಿದ್ದೇನು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ:ಮೇಲ್ (business email) ಹ್ಯಾಕ್ ಮಾಡಿದ ಸೈಬರ್ ವಂಚಕರು, ಕಚ್ಚಾ ವಸ್ತುಗಳ ಪೂರೈಕೆದಾರರ ಸೋಗಿನಲ್ಲಿ ಲಕ್ಷಾಂತರ ರೂಪಾಯಿ ಹಣ ದೋಚಿದ್ದಾರೆ. ಪೂರೈಕೆದಾರರ ಬ್ಯಾಂಕ್ ಖಾತೆ ಬದಲಾಗಿದೆ ಎಂದು ನಕಲಿ ಇಮೇಲ್ ಕಳುಹಿಸಿ ಶಿವಮೊಗ್ಗದ ಕಾರ್ಖಾನೆ ಒಂದರಿಂದ  ₹8,89,950 ಹಣ ತಮ್ಮ ಖಾತೆಗೆ ವರ್ಗಾಯಿಸಿಕೊಂಡು ವಂಚನೆ ಎಸಗಿದ್ದಾರೆ.

ಶಿವಮೊಗ್ಗದ ಆಟೋಮೊಬೈಲ್ ಬಿಡಿಭಾಗಗಳ ತಯಾರಿಕೆ ಕಾರ್ಖಾನೆಗೆ ಬೆಂಗಳೂರಿನ ಪೂರೈಕೆದಾರ ಕಂಪನಿಯಿಂದ ಕಚ್ಚಾ ಸಾಮಗ್ರಿ ತರಿಸಿಕೊಳ್ಳಲಾಗುತ್ತಿತ್ತು. ಜನವರಿ 27 ರಂದು ಪೂರೈಕೆದಾರರ ಹೆಸರಿನಲ್ಲಿ ಈ ಮೇಲ್‌ ಬಂದಿತ್ತು. ನಮ್ಮ ಬ್ಯಾಂಕ್ ಖಾತೆ ಎಸ್‌ಬಿಐನಿಂದ ಸೌತ್ ಇಂಡಿಯನ್ ಬ್ಯಾಂಕಿಗೆ ಬದಲಾಯಿಸಿದ್ದೇವೆ, ಇನ್ನು ಮುಂದೆ ಇದೇ ಖಾತೆಗೆ ಹಣ ವರ್ಗಾಯಿಸಿ ಎಂದು ತಿಳಿಸಲಾಗಿತ್ತು. ಇದನ್ನು ನಂಬಿದ ಶಿವಮೊಗ್ಗದ ಕಾರ್ಖಾನೆ ಮ್ಯಾನೇಜರ್, ಜನವರಿ 28 ರಂದು ಹೊಸ ಖಾತೆಗೆ ಹಣ ವರ್ಗಾವಣೆ ಮಾಡಿದ್ದರು. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

SMS-Fraud-Shimoga-CEN-Police-Station.

ನಂತರ ಪರಿಶೀಲಿಸಿದಾಗ, ಅನಾಮಧೇಯ ವ್ಯಕ್ತಿಗಳು ಪೂರೈಕೆದಾರ ಕಂಪನಿಯ ಇಮೇಲ್ ಐಡಿಯನ್ನು ಹ್ಯಾಕ್ ಮಾಡಿ ಈ ಕೃತ್ಯ ಎಸಗಿರುವುದು ಪತ್ತೆಯಾಗಿದೆ. ವಂಚಕರು ನಕಲಿ ಬ್ಯಾಂಕ್ ವಿವರಗಳನ್ನು ನೀಡಿ ಕಾರ್ಖಾನೆಯ ಹಣ ಆರ್‌ಟಿಜಿಎಸ್ ಮೂಲಕ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ. ಶಿವಮೊಗ್ಗದ ಸಿ.ಇ.ಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SMS-Fraud-Shimoga-CEN-Police-Station.

ಇದನ್ನೂ ಓದಿ – ಮಹಿಳೆಯರೆ ಹುಷಾರ್‌, ಶಿವಮೊಗ್ಗದಲ್ಲಿ ಡಬ್ಬಿ ಚಮತ್ಕಾರ, ಮರಳಾದರೆ ಚಿನ್ನಾಭರಣವೇ ಮಾಯ, ಏನಿದು?

JNNCE-COLLEGE-ADVT.

Leave a Comment