ಬಾಕ್ಸ್ ತುಂಬಾ ದುಡ್ಡಿದೆ ಅಂತಾ ಕೊಟ್ಟರು, ಎಣಿಸಲು ತೆಗೆದಾಗ ಕಾದಿತ್ತು ಶಾಕ್, ಇಂತವರ ಬಗ್ಗೆ ಹುಷಾರ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 16 FEBRURARY 2023

BHADRAVATHI : ಒಂದಕ್ಕೆ ಎರಡರಷ್ಟು ಹಣ (Double Money) ಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ 9.85 ಲಕ್ಷ ರೂ. ವಂಚಿಸಲಾಗಿದೆ (Fraud). ಈ ಸಂಬಂಧ ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Crime-News-General-Image

ಉತ್ತರ ಕನ್ನಡ ಜಿಲ್ಲೆಯ ನಿತೀಶ್ ಪಂಡಿತ್ ವಂಚನೆಗೊಳಗಾದವರು. ಚಿಕ್ಕಮಗಳೂರಿನ ಜಾಫರ್ ಮತ್ತು ಮಠೇಶ್ ಎಂಬುವವರು ವಂಚನೆ ಮಾಡಿದ್ದಾರೆ ಎಂದು ನಿತೇಶ್ ಪಂಡಿತ್ ದೂರು ನೀಡಿದ್ದಾರೆ.

ವಂಚನೆ ನಡೆದಿದ್ದು ಹೇಗೆ?

ನಿತೀಶ್ ಪಂಡಿತ್ ಗೆ ಫೋನ್ ಮೂಲಕ ಜಾಫರ್ ಎಂಬಾತನ ಪರಿಚಯವಾಗಿದ್ದು, ಲಕ್ಕವಳ್ಳಿ ಡ್ಯಾಮ್ ಬಳಿ ಗೋಡೊನ್ ನಲ್ಲಿ 40 ಕೋಟಿ ರೂ. ಇದೆ ಎಂದು ತಿಳಿಸಿದ್ದ. ಎಲ್ಲಾ 100 ರೂ. ನೋಟುಗಳಲ್ಲಿ ಇದ್ದು ಅವುಗಳನ್ನು 500 ರೂ. ನೋಟುಗಳಿಗೆ ಬದಲಾವಣೆ ಮಾಡಿಕೊಡುವಂತೆ ತಿಳಿಸಿದ್ದ. ಬದಲಾವಣೆ ಮಾಡಿಕೊಟ್ಟರೆ ಒಂದಕ್ಕೆ ಎರಡರಷ್ಟು ಹಣ (Double Money) ಕೊಡುವುದಾಗಿ ನಂಬಿಸಿದ್ದ.

ಇದನ್ನೂ ಓದಿ –ಶಿವಮೊಗ್ಗದ ಆಟೋಗಳಿಗೆ ಪೊಲೀಸರಿಂದ 3 ಸೂಚನೆ, ಡಿಸ್ ಪ್ಲೇ ಕಾರ್ಡ್ ವಿತರಣೆ, ಏನಿದು? ಕಾರ್ಡಿನಲ್ಲಿ ಏನೇನಿದೆ?

25 ಲಕ್ಷ ರೂ. ಕೇಳಿದ್ದ

ಸ್ವಲ್ಪ ದಿನದ ಬಳಿಕ ಪುನಃ ನಿತೇಶ್ ಪಂಡಿತ್ ಗೆ ಕರೆ ಮಾಡಿದ ಜಾಫರ್ ಎಂಬಾತ 500 ರೂ. ನೋಟುಗಳ 25 ಲಕ್ಷ ರೂ. ಹಣ ಹೊಂದಿಸುವಂತೆ ಕೇಳಿದ್ದ. ಅಷ್ಟೊಂದು ಹಣ ಹೊಂದಿಸಲು ಸಾಧ್ಯವಿಲ್ಲ. 10 ಲಕ್ಷ ರೂ. ಹೊಂದಿಸಬಹುದು ಎಂದು ನಿತೇಶ್ ಪಂಡಿತ್ ತಿಳಿಸಿದ್ದರು. ಬಳಿಕ ತಾನು ಕೆಲಸ ಮಾಡುತ್ತಿದ್ದ ಕಂಪನಿಯ ಮಾಲೀಕರಿಂದ ನಿತೇಶ್ ಅವರು 10 ಲಕ್ಷ ರೂ. ಹಣ ಪಡೆದಿದ್ದರು.

ಇದನ್ನೂ ಓದಿ – ಪಾಳು ಮನೆ ಮುಂದೆ ಅಸ್ವಸ್ಥಳಾಗಿ ಬಿದ್ದಿದ್ದ ಅಪರಿಚಿತ ಮಹಿಳೆ ಆಸ್ಪತ್ರೆಯಲ್ಲಿ ಸಾವು, ಕೈ ಮೇಲಿದೆ ‘ಪಾಪಿ ಪ್ರೀತಿ ಕಾವ್ಯ’ ಹಚ್ಚೆ

ಹಣದ ಬಾಕ್ಸ್ ಕೈಗಿಟ್ಟರು

ನಿತೇಶ್ ಪಂಡಿತ್ ಅವರು 10 ಲಕ್ಷ ರೂ. ಹಣದ ಬ್ಯಾಗ್ ಹಿಡಿದು ಜಾಫರ್ ಮತ್ತು ಮಠೇಶ್ ಸೂಚಿಸಿದಂತೆ ಭದ್ರಾವತಿಗೆ ಬಂದಿದ್ದರು. ನಿತೇಶ್ ಜೊತೆಗೆ ಜಗದೀಶ್ ಮತ್ತು ಅಭಿಜಿತ್ ಎಂಬುವವರು ಬಂದಿದ್ದರು. ಜಾಫರ್ ಹೇಳಿದಂತೆ ಬಾರಂದೂರಿನಿಂದ ಭದ್ರಾವತಿ ಕಡೆಗೆ ಹೋಗುವ ರಸ್ತೆಯಲ್ಲಿ ಹೊಟೇಲ್ ಒಂದರ ಬಳಿ ನಿತೀಶ್ ಬಂದಿದ್ದರು. ಕಾರನ್ನು ಹೊಟೇಲ್ ಬಳಿ ನಿಲ್ಲಿಸಿದ್ದರು. ಅಲ್ಲಿಂದ ಸ್ವಲ್ಪ ದೂರ ನಡೆದುಕೊಂಡು ಹೋದಾಗ ಮರದ ಕೆಳಗೆ ಜಾಫರ್ ಮತ್ತು ಮಠೇಶ್ ಬೈಕ್ ನಿಲ್ಲಿಸಿಕೊಂಡು ನಿಂತಿದ್ದರು. ಅವರ ಕೈಗೆ ನಿತೇಶ್ 10 ಲಕ್ಷ ರೂ. ಹಣದ ಬ್ಯಾಗ್ ಕೊಟ್ಟಿದ್ದಾರೆ. ಪರ್ಯಾಯವಾಗಿ ಜಾಫರ್ ಮತ್ತು ಮಠೇಶ್ 100 ರೂ.  ನೋಟುಗಳಿರುವ ಬಾಕ್ಸ್ ಒಂದನ್ನು ನಿತೇಶ್ ಕೈಗೆ ಕೊಟ್ಟಿದ್ದಾರೆ.

ಇದನ್ನೂ ಓದಿ – ಶಿವಮೊಗ್ಗದ ಹೆದ್ದಾರಿಯಲ್ಲಿ ಕಾರು ಅಡ್ಡಗಟ್ಟಿ ಯುವಕನ ಕುತ್ತಿಗೆಗೆ ಮಚ್ಚು ಇಟ್ಟು ದರೋಡೆ

ಬಾಕ್ಸ್ ಓಪನ್ ಮಾಡುವಷ್ಟರಲ್ಲಿ ಪರಾರಿ

ಜಾಫರ್ ಮತ್ತು ಮಠೇಶ್ ಪ್ಲೇವುಡ್ ಬಾಕ್ಸ್ ಕೊಟ್ಟಿದ್ದಾರೆ. ನಿತೇಶ್, ಬಾಕ್ಸ್ ಓಪನ್ ಮಾಡಿ ಹಣ ತೋರಿಸಿ ಎಂದು ಸೂಚಿಸಿದ್ದಾರೆ. ಬಾಕ್ಸ್ ನ ಒಂದು ಬದಿ ಮಾತ್ರ ಓಪನ್ ಮಾಡಿದ ಆರೋಪಿಗಳು, ನೂರು ರೂ.ಗಳ ನೋಟುಗಳು ಇರುವುದನ್ನು ತೋರಿಸಿದ್ದಾರೆ. ನಿತೇಶ್ ಅವರು ಬಾಕ್ಸಿನಲ್ಲಿ ಎಷ್ಟು  ಹಣವಿದೆ ಅನ್ನುದನ್ನು ಎಣಿಸಬೇಕು ಅಂದಿದ್ದಾರೆ. ಹೋಗಿ ಕಾರು ತೆಗೆದುಕೊಂಡು ಬರುವುದಾಗಿ ತಿಳಿಸಿ ಕಾರಿನ ಬಳಿ ಹೋಗಿದ್ದಾರೆ. ಅಷ್ಟು ಹೊತ್ತಿಗೆ ಜಾಫರ್ ಮತ್ತು ಮಠೇಶ್, 10 ಲಕ್ಷದ ಬ್ಯಾಗಿನೊಂದಿಗೆ ಬೈಕಿನಲ್ಲಿ ಪರಾರಿಯಾಗಿದ್ದರು. ನಿತೇಶ್ ಮತ್ತು ಅವರ ಸ್ನೇಹಿತರು ಕಾರಿನಲ್ಲಿ ಬಾಕ್ಸ್ ತೆಗೆದಾಗ 100 ರೂ. ನೋಟಿನ 14,700 ರೂ. ಮಾತ್ರ ಇತ್ತು. ಉಳಿದಂತೆ ಬಾಕ್ಸ್ ಖಾಲಿಯಾಗಿತ್ತು.

ಇದನ್ನೂ ಓದಿ – ತೋಟದ ಮನೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯನ ಪುತ್ರ ಸಾವು, ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ

ಹಣ ದ್ವಿಗುಣ ಮಾಡಿಕೊಡುವುದಾಗಿ ನಂಬಿಸಿ 9.85 ಲಕ್ಷ ರೂ. ಮೋಸ ಮಾಡಿದ ಜಾಫರ್ ಮತ್ತು ಮಠೇಶ್ ಎಂಬುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ದೂರು ನೀಡಿದ್ದಾರೆ. ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : February 16, 2023

ಆಗುಂಬೆ ಘಾಟಿಯಲ್ಲಿ ರಸ್ತೆಗೆ ಬಿದ್ದ ಮರ, ಕೆಲ ಹೊತ್ತು ಟ್ರಾಫಿಕ್‌ ಜಾಮ್

ಆಗುಂಬೆ ಘಾಟಿಯಲ್ಲಿ ರಸ್ತೆಗೆ ಬಿದ್ದ ಮರ, ಕೆಲ ಹೊತ್ತು ಟ್ರಾಫಿಕ್‌ ಜಾಮ್

ಕುಟುಂಬದ ಜೊತೆ ಊಟ ಮುಗಿಸಿ, ಮಾತನಾಡಿ ಮಲಗಲು ತೆರಳಿದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಕುಟುಂಬದ ಜೊತೆ ಊಟ ಮುಗಿಸಿ, ಮಾತನಾಡಿ ಮಲಗಲು ತೆರಳಿದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಶಿವಮೊಗ್ಗದಲ್ಲಿ ಶ್ರೀಕಾಂತಣ್ಣ ಕಪ್‌ ಕ್ರಿಕೆಟ್‌ ಪಂದ್ಯಾವಳಿ, ಟ್ರೋಫಿ, ಟೀ ಶರ್ಟ್‌ಗಳ ಅನಾವರಣ

ಶಿವಮೊಗ್ಗದಲ್ಲಿ ಶ್ರೀಕಾಂತಣ್ಣ ಕಪ್‌ ಕ್ರಿಕೆಟ್‌ ಪಂದ್ಯಾವಳಿ, ಟ್ರೋಫಿ, ಟೀ ಶರ್ಟ್‌ಗಳ ಅನಾವರಣ

ಸರ್ವೆಗೆ ಹೋದಾಗ ಇಂಜಿನಿಯರ್‌, ಸರ್ವೇಯರ್‌ ಮೇಲೆ ಕೋಲು, ಕಲ್ಲುಗಳಿಂದ ದಾಳಿ

ಸರ್ವೆಗೆ ಹೋದಾಗ ಇಂಜಿನಿಯರ್‌, ಸರ್ವೇಯರ್‌ ಮೇಲೆ ಕೋಲು, ಕಲ್ಲುಗಳಿಂದ ದಾಳಿ

ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್‌ ವಿಚಾರ

ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್‌ ವಿಚಾರ

ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್‌ ಅಪ್‌ಡೇಟ್‌

ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್‌ ಅಪ್‌ಡೇಟ್‌

ಆಟೋ ನಾಪತ್ತೆಯಾಗಿ ಒಂದು ವರ್ಷದ ಬಳಿಕ ದಾಖಲಾಯ್ತು ಕೇಸ್‌, ಏನಿದು ಪ್ರಕರಣ?

ಆಟೋ ನಾಪತ್ತೆಯಾಗಿ ಒಂದು ವರ್ಷದ ಬಳಿಕ ದಾಖಲಾಯ್ತು ಕೇಸ್‌, ಏನಿದು ಪ್ರಕರಣ?

ವಿದ್ಯಾರ್ಥಿನಿಯರಿಗೆ ಉಪನ್ಯಾಸಕನಿಂದ ಮೆಸೇಜ್‌ ಆರೋಪ, ಕಾಲೇಜು ಮುಂದೆ ಆಕ್ರೋಶ

ವಿದ್ಯಾರ್ಥಿನಿಯರಿಗೆ ಉಪನ್ಯಾಸಕನಿಂದ ಮೆಸೇಜ್‌ ಆರೋಪ, ಕಾಲೇಜು ಮುಂದೆ ಆಕ್ರೋಶ

Leave a Comment