ಖರೀದಿಸಿ, ಮಾರಿ, ಅಧಿಕ ಲಾಭ ಗಳಿಸಿ, ಆಮಿಷಕ್ಕೆ ಮಾರುಹೋದ ಶಿವಮೊಗ್ಗದ ವ್ಯಕ್ತಿಗೆ ಕಾದಿತ್ತು ದೊಡ್ಡ ಆಘಾತ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಎಲೆಕ್ಟ್ರಾನಿಕ್‌ ವಸ್ತುಗಳನ್ನು ಖರೀದಿಸಿ ಮಾರಾಟ (Sell) ಮಾಡಿ ಅಧಿಕ ಲಾಭಾಂಶ ಗಳಿಸಬಹುದು ಎಂದು ನಂಬಿಸಿ ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ 17.74 ಲಕ್ಷ ರೂ. ಹಣ ವಂಚಿಸಲಾಗಿದೆ.

ಟೆಲಿಗ್ರಾಂನಲ್ಲಿ ನ್ಯೂ ಎಗ್‌ ಕಮ್ಯೂನಿಟಿ ಎಂಬ ಗ್ರೂಪ್‌ಗೆ ಸೇರಿದ್ದ ಶಿವಮೊಗ್ಗದ ವ್ಯಕ್ತಿಗೆ ಅಲ್ಲಿ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಖರೀದಿಸಿ, ಮಾರಾಟ ಮಾಡಿ ಅಧಿಕ ಲಾಭ ಗಳಿಸಬಹುದು ಎಂದು ನಂಬಿಸಲಾಗಿತ್ತು. ಯು.ಪಿ.ಐ ಐಡಿ ನೀಡಿ ಹಣ ಹೂಡಿಕೆ ಮಾಡುವಂತೆ ಸೂಚಿಸಲಾಗಿತ್ತು. ಅಧಿಕ ಲಾಭಾಂಶದ ಆಸೆಗಾಗಿ ಶಿವಮೊಗ್ಗದ ವ್ಯಕ್ತಿ ಹಣ ಹೂಡಿಕೆ ಕಳುಹಿಸಿದ್ದಾಗಿ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

https://chat.whatsapp.com/JPJ0lTQsTKf365Fqu6Q7cd

ಮೇ 5 ರಿಂದ ಮೇ 29ರವರೆಗೆ ಒಟ್ಟು 17.74 ಲಕ್ಷ ರೂ. ಹಣವನ್ನು ಶಿವಮೊಗ್ಗದ ವ್ಯಕ್ತಿ ಹೂಡಿಕೆ ಮಾಡಿದ್ದರು. ಆದರೂ ಮತ್ತಷ್ಟು ಹಣ ಕಳುಹಿಸಿ ಎಂದು ಒತ್ತಾಯಿಸಿದಾಗ ವಂಚನೆಗೊಳಗಾಗಿರುವುದು ಶಿವಮೊಗ್ಗದ ವ್ಯಕ್ತಿಗೆ ಅರಿವಾಗಿದೆ. ಹಣ ಕಳೆದುಕೊಂಡಿರುವ ಕುರಿತು ಶಿವಮೊಗ್ಗದ ಸಿ.ಇ.ಎನ್.‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

 

ಇದನ್ನೂ ಓದಿ » ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ, ಶಿವಮೊಗ್ಗದಲ್ಲಿ ಅಣ್ಣ, ತಮ್ಮನ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲು

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : June 6, 2025

Leave a Comment