ಶಿವಮೊಗ್ಗದ ಬೈಪಾಸ್‌ ರಸ್ತೆಯ ಸೇತುವೆ ಬಳಿ ತುಂಗಾ ಹೊಳೆಗೆ ಹಾರಲು ಯತ್ನಿಸಿದ ಬಾಲಕ

Published On : ಮಾರ್ಚ್ 31, 2026

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ: ಮನೆಯಲ್ಲಿ ಪೋಷಕರು ತನಗೆ ಮತ್ತು ತನ್ನ ತಮ್ಮನ ನಡುವೆ ಭೇದ ಭಾವ ಮಾಡುತ್ತಾರೆಂದು ಮನನೊಂದು ಹೊಳೆಗೆ ಹಾರಲು ಯತ್ನಿಸಿದ ಬಾಲಕನನ್ನು ಗಸ್ತಿನಲ್ಲಿದ್ದ ಇಆರ್‌ಎಸ್‌ಎಸ್ ಅಧಿಕಾರಿಗಳು ರಕ್ಷಿಸಿದ್ದಾರೆ (rescue).

Boy-rescued-by-ERSS-112-Police-in-Shimoga-Bypass-Road.

ಭಾನುವಾರ ರಾತ್ರಿ ಸುಮಾರು 16 ವರ್ಷದ ಬಾಲಕ ವಾದಿ-ಎ-ಹುದಾ ಸೇತುವೆ ಹತ್ತಿರ ನಿಂತು ಹೊಳೆಗೆ ಹಾರಲು ಪ್ರಯತ್ನಿಸುತ್ತಿದ್ದ ಬಗ್ಗೆ ಸಾರ್ವಜನಿಕರಿಂದ ಬಂದ ಮಾಹಿತಿ ಮೇರೆಗೆ ಇಆರ್‌ಎಸ್‌ಎಸ್ ವಾಹನದ ರೆಸ್ಪಾಂಡರ್‌ ಶಬೀರ್ ಬೇಗ್‌ ಮತ್ತು ವಾಹನದ ಚಾಲಕ ಮಂಜುನಾಥ್ ಸ್ಥಳಕ್ಕೆ ಹೋಗಿದ್ದರು. ಸಾರ್ವಜನಿಕರ ಸಹಾಯದಿಂದ ಬಾಲಕನ್ನು ರಕ್ಷಿಸಿ, ಆತನ ಮನವೊಲಿಸಿ ತಿಳಿವಳಿಕೆ ನೀಡಿದರು. ನಂತರ ಪೋಷಕರನ್ನು ಕರೆಸಿ, ಅವರೊಂದಿಗೆ ಮನೆಗೆ ಕಳುಹಿಸಿದ್ದಾರೆ. ಸಿಬ್ಬಂದಿ ಕಾರ್ಯವನ್ನು ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್ ಪ್ರಶಂಸಿದ್ದಾರೆ.

ಇದನ್ನೂ ಓದಿ : ಅಡಿಕೆ ಕಳ್ಳರ ಹಾವಳಿ, ರಾತ್ರೋರಾತ್ರಿ ಲಕ್ಷ ಲಕ್ಷದ ಅಡಿಕೆ ನಾಪತ್ತೆ, ಎಲ್ಲಿ? ಏನಾಯ್ತು?

Sunrise Facility Services, Sri sai Trust Shimoga

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಮಾರ್ಚ್ 31, 2026

Leave a Comment