ಹುಷಾರ್‌, ನಿಮಗು ಬರಬಹುದು ಇವರ ಫೋನ್‌, ಭಯ ಪಟ್ಟರೆ ಅಕೌಂಟ್‌ ಖಾಲಿಯಾಗೋದು ಗ್ಯಾರಂಟಿ

 ಶಿವಮೊಗ್ಗ  LIVE 

ಶಿವಮೊಗ್ಗ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಎಂದು ಹೆದರಿಸಿ ಶಿವಮೊಗ್ಗದ ಹಿರಿಯ ನಾಗರಿಕರೊಬ್ಬರ (senior citizen) ಬ್ಯಾಂಕ್‌ ಖಾತೆಯಿಂದ ₹2,50,000 ಹಣ ವರ್ಗಾಯಿಸಿಕೊಂಡು ವಂಚಿಸಲಾಗಿದೆ.

ಇದನ್ನೂ ಓದಿ » ಗೃಹಿಣಿಗೆ ಅಪರಿಚಿತ ನಂಬರ್‌ಗಳಿಂದ ಫೋನ್‌, ಇನ್‌ಸ್ಟಾಗ್ರಾಂ ತೆಗೆದಾಗ ಕಾದಿತ್ತು ಬಿಗ್‌ ಶಾಕ್

ಅರೆಸ್ಟ್‌ ವಾರಂಟ್‌ ಕಳುಹಿಸಿ ಬೆದರಿಕೆ

ಹಿರಿಯ ನಾಗರಿಕರೊಬ್ಬರ ಮೊಬೈಲ್‌ಗೆ ಅಪರಿಚಿತ ನಂಬರ್‌ಗಳಿಂದ ಕರೆ ಮಾಡಿದ ವ್ಯಕ್ತಿಯೊಬ್ಬ ತನ್ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿ ಎಂದು ಪರಿಚಿಯಿಸಿಕೊಂಡಿದ್ದ. ‘ನಿಮ್ಮ ಹೆಸರಿನಲ್ಲಿರುವ ಸಿಮ್‌ ಕಾರ್ಡ್‌ ಬಳಿಸಿ ಭಯೋತ್ಪಾದಕರು ₹8 ಕೋಟಿ ಮೌಲ್ಯದ ಶಾಸ್ತ್ರಾಸ್ತ್ರಗಳನ್ನು ಖರೀದಿಸಿದ್ದಾರೆ. ಇದರಿಂದ ನಿಮಗೆ ₹80 ಲಕ್ಷ ಕಮಿಷನ್‌ ಬಂದಿದೆʼ ಎಂದು ಹೆದರಿಸಿದ್ದ.

ಈ ಹಿನ್ನೆಲೆ ನಿಮ್ಮನ್ನು ಬಂಧಿಸಬೇಕಾಗುತ್ತದೆ ಎಂದು ಅರೆಸ್ಟ್‌ ವಾರಂಟ್‌ ಕಾಪಿಯನ್ನು ಕಳುಹಿಸಿದ್ದ. ಅಲ್ಲದೆ ‘ನಿಮ್ಮ ಬ್ಯಾಂಕ್‌ ಖಾತೆಯನ್ನು ರಿಸರ್ವ್‌ ಬ್ಯಾಂಕ್‌ ಅಧಿಕಾರಿಗಳು ಪರಿಶೀಲಿಸಲಿದ್ದಾರೆʼ ಎಂದು ತಿಳಿಸಿ ಮೋಸದಿಂದ ₹2,50,000 ವರ್ಗಾಯಿಸಿಕೊಂಡಿದ್ದಾನೆ. ಘಟನೆ ಸಂಬಂಧ ಹಿರಿಯ ನಾಗರಿಕ ದೂರು ನೀಡಿದ್ದಾರೆ. ಸಿ.ಇ.ಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment