ಶಿವಮೊಗ್ಗ ಲೈವ್.ಕಾಂ | BHADRAVATHI NEWS | 26 MAY 2021
ಕ್ಷುಲಕ ವಿಚಾರಕ್ಕೆ ನಡೆದ ಗಲಾಟೆ ಓರ್ವ ಯುವಕನ ಕೊಲೆಗೆ ಕಾರಣವಾಗಿದೆ. ಭದ್ರಾವತಿ ಹಳೆ ನಗರದ ಜೈ ಭೀಮ್ ನಗರದಲ್ಲಿ ಘಟನೆ ಸಂಭವಿಸಿದೆ. ಈ ಪ್ರಕರಣ ಸಂಬಂಧ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಏನಿದು ಘಟನೆ? ಕೃತ್ಯಕ್ಕೆ ಕಾರಣವೇನು?
ಶ್ರೀಕಂಠ, ಸುನಿಲ್ ಮತ್ತು ರಹೀಂ ಎಂಬುವವರು ಜೈ ಭೀಮ್ ನಗರದ ತಮ್ಮ ಮನೆ ಬಳಿ ಮಾತನಾಡುತ್ತ ನಿಂತಿದ್ದರು. ಈ ವೇಳೆ ನಿಶಾದ್ ಪಾಷಾ ಮತ್ತು ಮಹಮ್ಮದ್ ಜುನೇದ್ ಎಂಬುವವರು ಗುಟ್ಕಾ ತರಲು ಅಲ್ಲಿಗೆ ಬಂದಿದ್ದರು. ಮನೆ ಬಳಿ ನಿಂತು ಮಾತನಾಡುತ್ತಿದ್ದ ಯುವಕರು ‘ಪೊಲೀಸರು ಬರುತ್ತಾರೆ ಸೈಡಿಗೆ ಹೋಗಿ’ ಎಂದು ಹೇಳಿದ್ದಾರೆ.
ಇದರಿಂದ ಎರಡು ಗುಂಪಿನ ಯುವಕರ ನಡುವೆ ಮಾತಿನ ಚಕಮಕಿಯಾಗಿ, ಜಗಳವಾಗಿದೆ. ಆಕ್ರೋಶಗೊಂಡ ನಿಶಾದ್ ಪಾಷಾ ಫೋನ್ ಮಾಡಿ, ಸಾಬಿತ್ ಮತ್ತು ಇದಾಯತ್ ಅವರನ್ನು ಸ್ಥಳಕ್ಕೆ ಬರುವಂತೆ ತಿಳಿಸಿದ್ದ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬೆನ್ನಿಗೆ ಚಾಕು ಹಾಕಿದರು
ನಿಶಾದ್ ಪಾಷಾ ಫೋನ್ ಮಾಡಿದ್ದರಿಂದ ನಾಲ್ವರು ಜೈ ಭೀಮ್ ನಗರಕ್ಕೆ ಬಂದಿದ್ದಾರೆ. ತಾವು ತಂದಿದ್ದ ದ್ವಿಚಕ್ರ ವಾಹನವನ್ನು ಸುನಿಲ್‍ಗೆ ಗುದ್ದಿಸಿ ಕೆಳಗೆ ಬೀಳಿಸಿದ್ದಾರೆ. ಅಲ್ಲದೆ ಸುನಿಲ್ ಬೆನ್ನಿಗೆ ಚಾಕುವಿನಿಂದ ಚುಚ್ಚಿದ್ದಾರೆ. ಇದನ್ನು ಬಿಡಿಸಲು ಹೋದ ಶ್ರೀಕಂಠನ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜನ ಜಂಗುಳಿ ಇಲ್ಲದೆ, ಸುರಕ್ಷಿತವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ | ಫೋನ್ ಮಾಡಿ ರಿಜಿಸ್ಟರ್ ಮಾಡಿಕೊಳ್ಳಿ
ಆಸ್ಪತ್ರೆಯಲ್ಲಿ ಕೊನೆ ಉಸಿರು
ಗಾಯಗೊಂಡಿದ್ದ ಸುನಿಲ್ ಮತ್ತು ಶ್ರೀಕಂಠನನ್ನು ಸ್ಥಳೀಯರ ನೆರವಿನಿಂದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸುನಿಲ್ ಮೃತಪಟ್ಟಿದ್ದಾನೆ.
ಐವರನ್ನು ಬಂಧಿಸಿದ ಪೊಲೀಸ್
ಘಟನೆ ಸಂಬಂಧ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಅನ್ವರ್ ಕಾಲೋನಿಯ ಸಾಬೀತ್ (20), ಶಿವಮೊಗ್ಗ ಆರ್‍ಎಂಎಲ್ ನಗರದ ಇದಾಯತ್ (20), ಶಿವಮೊಗ್ಗದ ಬುದ್ಧನಗರದ ನಿಶಾದ್ ಪಾಷಾ (21), ಶಿವಮೊಗ್ಗ ಆರ್‍ಎಂಎಲ್ ನಗರದ ಮಹಮದ್ ಜುನೇದ್ (20) ಶಿವಮೊಗ್ಗ ಬುದ್ದಾನಗರದ ತಬ್ರೇಜ್ ಪಾಷಾ (21) ಎಂಬುವವರನ್ನು ಬಂಧಿಸಿದ್ದಾರೆ.
ಪ್ರಕರಣಕ್ಕೆ ಬಳಕೆ ಮಾಡಿಕೊಂಡಿದ್ದ ಎರಡು ಬೈಕುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಳೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]