SHIVAMOGGA LIVE NEWS | 9 JANUARY 2025
ಸಾಗರ : ಜೆಎಸ್‌ಡಬ್ಲು ಸಿಮೆಂಟ್ ಕಂಪನಿಯ (Cement) ಹೆಸರು ದುರ್ಬಳಕೆ ಮಾಡಿಕೊಂಡು ಗುತ್ತಿಗೆದಾರರೊಬ್ಬರಿಗೆ (ಹೆಸರು ಗೌಪ್ಯ) 3 ಲಕ್ಷ ರೂ. ವಂಚಿಸಲಾಗಿದೆ. ಸಾವಿರ ಚೀಲ ಸಿಮೆಂಟ್ ಅಗತ್ಯವಿದ್ದರಿಂದ ಆನ್‌ಲೈನ್‌ನಲ್ಲಿ ಜೆಎಸ್‌ಡಬ್ಲು ಸಿಮೆಂಟ್ ಕಂಪನಿಯ ಮೊಬೈಲ್ ನಂಬರ್ ಹುಡುಕಿದ್ದರು.
ಇದನ್ನೂ ಓದಿ » ನೂರಾರು ಕನಸು ಹೊತ್ತಿದ್ದ ಯುವಕ ಹಾಸಿಗೆ ಹಿಡಿದ, ತುತ್ತು ಅನ್ನಕ್ಕು ಕುಟುಂಬದ ಪರದಾಟ
ಸ್ವಲ್ಪ ಸಮಯದ ಬಳಿಕ ಗುತ್ತಿಗೆದಾರನ ಮೊಬೈಲ್‌ಗೆ ಕರೆ ಬಂದಿದ್ದು ಮಾತನಾಡಿದ ವ್ಯಕ್ತಿ, ತಾನು ಜೆಎಸ್‌ಡಬ್ಲು ಸಿಮೆಂಟ್ ಕಂಪನಿಯ ಸೇಲ್ಸ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದ. ಗುತ್ತಿಗೆದಾರ ತನಿಗೆ ಸಾವಿರ ಚೀಲ ಸಿಮೆಂಟ್ ಅಗತ್ಯವಿದೆ ಎಂದಾಗ ತಕ್ಷಣ 1.50 ಲಕ್ಷ ರೂ. ಹಣ ಪಾವತಿಸಬೇಕು. ಲಾರಿ ಲೋಡ್ ಮುಗಿದ ಮೇಲೆ ಬಾಕಿ 1.50 ಲಕ್ಷ ರೂ. ಹಣ ಪಾವತಿಸಬೇಕು ಸೇಲ್ಸ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದಾತ ತಿಳಿಸಿದ್ದ.
ಕೊನೆ ಹಂತದಲ್ಲಿ ವರಸೆ ಬದಲು
ಗುತ್ತಿಗೆದಾರ ಮೊದಲಿಗೆ 1.50 ಲಕ್ಷ ರೂ., ಮರುದಿನ ಲಾರಿ ಲೋಡ್ ಆಗಿದೆ ಎಂದು ಕರೆ ಬಂದ ಮೇಲೆ ಉಳಿಕೆ 1.50 ಲಕ್ಷ ರೂ. ಹಣವನ್ನು ವರ್ಗಾಯಿಸಿದ್ದರು. ಸ್ವಲ್ಪ ಸಮಯದ ಬಳಿಕ ಸೇಲ್ಸ್ ಮ್ಯಾನೇಜರ್ ಕರೆ ಮಾಡಿ, ನೀವು ಕನಿಷ್ಠ 2 ಸಾವಿರ ಚೀಲ ಸಿಮೆಂಟ್ ಆರ್ಡರ್ ಕೊಡಬೇಕು ಎಂದು ಆಗ್ರಹಿಸಿದ್ದ.
ಇದನ್ನೂ ಓದಿ » ಗೃಹಲಕ್ಷ್ಮಿ ಯೋಜನೆ, ಮಹತ್ವದ ಅಪ್‌ಡೇಟ್ ನೀಡಿದ ಪ್ರಾಧಿಕಾರ, ಏನದು?
ಅನುಮಾನಗೊಂಡ ಗುತ್ತಿಗೆದಾರ ಸಾಗರದಲ್ಲಿರುವ ಜೆಎಸ್‌ಡಬ್ಲು ಡೀಲರ್‌ನನ್ನು ಸಂಪರ್ಕಿಸಿದಾಗ ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಘಟನೆ ಸಂಬಂಧ ಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ನಂಜಪ್ಪ ಆಸ್ಪತ್ರೆಯಲ್ಲಿ ಕ್ಯಾಪ್ಸುಲ್ ಎಂಡೋಸ್ಕೋಪಿ, ಏನಿದು? ಉಪಯೋಗವೇನು?