SHIVAMOGGA LIVE NEWS | 8 JANUARY 2025
ಶಿವಮೊಗ್ಗ : ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣವನ್ನು ಜ.14ರಿಂದ ಮಹಿಳೆಯರ ಬ್ಯಾಂಕ್ (Bank) ಖಾತೆಗಳಿಗೆ ವರ್ಗಾಯಿಸಲಾಗುತ್ತದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್ ತಿಳಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಡಿಸೆಂಬರ್ ತಿಂಗಳಿನ ಕಂತಿನ ಹಣವನ್ನು ಫಲಾನುಭವಿಗಳಿಗೆ ವರ್ಗಾಯಿಸಲಾಗುತ್ತಿದೆ. ಈಗಾಗಲೆ ಹಣವನ್ನು ಆರ್ಥಿಕ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ಜ.14ರಿಂದ ಹಣ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಕಂತಿನ ಹಣ ತಮ್ಮ ಬ್ಯಾಂಕ್ ಖಾತೆಗೆ ಜಮಾ ಆಗದೇ ಇದ್ದರೆ ಮೊದಲು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಬೇಕು. ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸಬೇಕು. ಇದರ ಜೊತೆಗೆ ಬ್ಯಾಂಕ್ ಖಾತೆಗೆ ಇ-ಕೆವೈಸಿ ಮಾಡಿಸುವುದು ಕಡ್ಡಾಯ. ಸಿ.ಎಸ್.ಚಂದ್ರಭೂಪಾಲ್, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ
ಈ ಯೋಜನೆಯಿಂದ ಪ್ರತಿ ಮಹಿಳಾ ಫಲಾನುಭವಿ ಈವರೆಗೆ 15 ಕಂತಿನಲ್ಲಿ 30 ಸಾವಿರ ರೂ. ಹಣ ಪಡೆದಿದ್ದಾರೆ. ಹಲವು ಮಹಿಳೆಯರು ಗೃಹಲಕ್ಷ್ಮಿ ಹಣ ಕೂಡಿಟ್ಟು ಸ್ವ ಉದ್ಯೋಗ ಆರಂಭಿಸಿದ್ದಾರೆ. ಉಪಯುಕ್ತ ವಸ್ತು ಖರೀದಿ ಮಾಡಿ ತಮ್ಮ ಜೀವನ ಹಸನುಗೊಳಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಐದು ತಿಂಗಳ ಹಿಂದೆಯೇ ಪತ್ತೆಯಾಗಿತ್ತು HMP ಸೋಂಕು, ಡಾ.ಸರ್ಜಿ ಹೇಳಿದ್ದೇನು?