ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಕಾರ್ಖಾನೆಯೊಂದರ ನೌಕರರೊಬ್ಬರಿಗೆ ಫೈನಾನ್ಸ್ (Finance) ಸಂಸ್ಥೆಯ ಹೆಸರಿನಲ್ಲಿ ಕರೆ ಮಾಡಿ, ಸಾಲ ನೀಡುವುದಾಗಿ ನಂಬಿಸಿ, ಬಳಿಕ ನಾನಾ ಕಾರಣಕ್ಕೆ ಹಣ ಪಾವತಿಸಿಕೊಂಡು ವಂಚಿಸಲಾಗಿದೆ. ಸಾಲ ಸಿಗುವ ಭರವಸೆಯಲ್ಲಿ ಕಾರ್ಖಾನೆ ನೌಕರ ₹4.13 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ.
ಕಾರ್ಖಾನೆ ನೌಕರರೊಬ್ಬರಿಗೆ (ಹೆಸರು ಗೌಪ್ಯ) ಫೈನಾನ್ಸ್ ಸಂಸ್ಥೆಯೊಂದರ ಬೆಂಗಳೂರು ಶಾಖೆಯ ಪ್ರತಿನಿಧಿ ಹೆಸರಿನಲ್ಲಿ ವ್ಯಕ್ತಿಯೊಬ್ಬರು ಕರೆ ಮಾಡಿದ್ದರು. ಸಾಲದ ಅಗತ್ಯವಿದ್ದರೆ ಒದಗಿಸುವುದಾಗಿ ನಂಬಿಸಿದ್ದರು. ತುರ್ತು ಹಣದ ಅವಶ್ಯಕತೆ ಇದ್ದಿದ್ದರಿಂದ ನೌಕರ ಸಾಲ ಬೇಕು ಎಂದು ಒಪ್ಪಿಕೊಂಡಿದ್ದರು.

ಇದನ್ನೂ ಓದಿ » ಶಿವಮೊಗ್ಗ ಜೈಲಿನ ಖೈದಿಯ ಹೊಟ್ಟೆಯೊಳಗೆ ಮೊಬೈಲ್ ಫೋನ್ ಪತ್ತೆ..!
ದಿನಕ್ಕೊಂದು ನೆಪ, ಹೊಸತೊಂದು ಸ್ಕ್ಯಾನರ್
ಕೆಲವು ದಿನದ ಬಳಿಕ ಅದೇ ಫೈನಾನ್ಸ್ ಸಂಸ್ಥೆಯ ಸಿಬ್ಬಂದಿ ಎಂದು ವ್ಯಕ್ತಿಯೊಬ್ಬ ಕರೆ ಮಾಡಿ, ಸಾಲ ಮಂಜೂರಗಿದೆ ಎಂದು ತಿಳಿಸಿದ್ದ. ನಿಮ್ಮ ಖಾತೆಗೆ ಹಣ ವರ್ಗಾಯಿಸಲು ಪ್ರೊಸೆಸಿಂಗ್ ಚಾರ್ಜ್ ₹4200 ಕಟ್ಟಬೇಕು ಎಂದಿದ್ದ. ಸ್ಕ್ಯಾನರ್ ಕಳುಹಿಸಿ ಇದಕ್ಕೆ ಚಾರ್ಜ್ ಕಟ್ಟಬೇಕು ಎಂದು ಸೂಚಿಸಿದ್ದ. ಅದರಂತೆ ಕಾರ್ಖಾನೆ ನೌಕರ ಪಾವತಿಸಿದ್ದರು.
ಇದನ್ನೂ ಓದಿ » ಪತ್ನಿಯ ಮೂಗನ್ನೆ ಕಚ್ಚಿ ತುಂಡರಿಸಿದ ಪತಿ, ಶಿವಮೊಗ್ಗದ ಆಸ್ಪತ್ರೆಗೆ ದಾಖಲಾದ ಮಹಿಳೆ
ಆ ಬಳಿಕ ಟಿ.ಡಿ.ಎಸ್. ಚಾರ್ಜಸ್, ಲೈಫ್ ಇನ್ಸುರೆನ್ಸ್, ಮೈಕ್ರೋ ಫೈನಾನ್ಸ್ ಫೀಸ್ ಎಂದು ಒಂದೊಂದು ನೆಪ ಹೇಳಿ ಸ್ಕ್ಯಾನರ್ ಕಳುಹಿಸಿ ಹಣ ಕೊಟ್ಟಿಸಿಕೊಳ್ಳಲಾಗಿದೆ. ಒಟ್ಟು ₹4.13 ಲಕ್ಷ ಕಟ್ಟಿದರು ಸಾಲದ ಹಣ ವರ್ಗಾಯಿಸಿಲ್ಲ. ಸಾಲದ ಕುರಿತು ಕೇಳಿದಾಗ ಪುನಃ ಮತ್ತೊಂದು ಚಾರ್ಜ್ ಕಟ್ಟುವಂತೆ ತಿಳಿಸಲಾಗಿತ್ತು. ವಂಚನೆಗೊಳಗಾಗಿರುವುದು ಅರಿವಾದ ಮೇಲೆ ಕಾರ್ಖಾನೆ ನೌಕರ ವಿನೋಬನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

LATEST NEWS
- ಶಿವಮೊಗ್ಗ ಸಿಟಿಯಲ್ಲಿ ಆಲಿಕಲ್ಲು ಸಹಿತ ಮಳೆ, ಜೋರು ಗಾಳಿ, ಗುಡುಗಿನ ಅಬ್ಬರ

- ಶಿಕ್ಷಕನ ಅಮಾನತು, ಇಲಾಖೆ ವಿಚಾರಣೆಗೆ ಆದೇಶಿಸಿದ ಡಿಡಿಪಿಐ, ಕಾರಣವೇನು?

- ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತು ಎಷ್ಟಿರಲಿದೆ ತಾಪಮಾನ?

- ಶಿವಮೊಗ್ಗದಲ್ಲಿ ಕೈ ಕೈ ಮಿಲಾಯಿಸಿ ಕಲ್ಲುಗಳಲ್ಲಿ ಹೊಡೆದುಕೊಂಡ ಅಕ್ಕಪಕ್ಕದ ಮನೆಯವರು, ಕಾರಣವೇನು?

- ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

About The Editor
ನಿತಿನ್ ಆರ್.ಕೈದೊಟ್ಲು
















