ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHIMOGA CRIME NEWS | 1 ಫೆಬ್ರವರಿ 2022
ಬಾಯ್ಸ್ ಹಾಸ್ಟೆಲ್ ಪಾರ್ಕಿಂಗ್’ನಲ್ಲಿ ನಿಲ್ಲಿಸಿದ್ದ ಹೊಸ FZ Bike ನಾಪತ್ತೆಯಾಗಿದೆ. ವಿಚಾರ ತಿಳಿದು ಅದರ ಮಾಲೀಕ ಕೇರಳದಿಂದ ಶಿವಮೊಗ್ಗಕ್ಕೆ ಆಗಮಿಸಿ ದೂರ ನೀಡಿದ್ದಾರೆ.
ಮೊಹಮದ್ ಆದಿಲ್ ಎಂಬುವವರಿಗೆ ಸೇರಿದ ಹೊಸ ಬೈಕ್ ಕಳ್ಳತನವಾಗಿದೆ. ಶಿವಮೊಗ್ಗ ಮೆಡಿಕಲ್ ಕಾಲೇಜು (SIMS) ಭದ್ರಾ ಬಾಯ್ಸ್ ಹಾಸ್ಟೆಲ್ ಕಟ್ಟಡದಲ್ಲಿ ಬೈಕ್ ನಿಲ್ಲಿಸಿ, ಕೇರಳಕ್ಕೆ ತೆರಳಿದ್ದರು. ಆಗ ಕಳ್ಳತನವಾಗಿದೆ.
FZ Bike ಕಳ್ಳತನವಾಗಿದ್ದು ಹೇಗೆ?
ಕೇರಳ ರಾಜ್ಯದ ತಿರುವನಂತಪುರಂನ ಮೊಹಮದ್ ಆದಿಲ್ ಶಿವಮೊಗ್ಗ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಓದುತ್ತಿದ್ದಾರೆ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಬೈಕ್ ಖರೀದಿ ಮಾಡಿದ್ದರು.
ರಾಜ್ಯದಲ್ಲಿ ಕೋವಿಡ್ ಹೆಚ್ಚಾದ ಹಿನ್ನೆಲೆ ಎಂಬಿಬಿಎಸ್ ಪರೀಕ್ಷೆ ಮುಂದೂಡಲಾಗಿತ್ತು. ಹಾಗಾಗಿ ಜನವರಿ 7ರಂದು ಮೊಹಮದ್ ಆದಿಲ್ ಬೈಕನ್ನು ಬಾಯ್ಸ್ ಹಾಸ್ಟೆಲ್ ಪಾರ್ಕಿಂಗ್’ನಲ್ಲಿ ನಿಲ್ಲಿಸಿ ಕೇರಳಕ್ಕೆ ತೆರಳಿದ್ದರು. 18ರಂದು ಸ್ನೇಹಿತರೊಬ್ಬರು ಕರೆ ಮಾಡಿದ್ದಾಗ ಮೊಹಮದ್ ಆದಿಲ್ ಅವರು ಬೈಕ್ ಇರುವುದಾಗಿ ಖಚಿತಪಡಿಸಿಕೊಂಡಿದ್ದರು.
ಜನವರಿ 22ರಂದು ಸ್ನೇಹಿತರೊಬ್ಬರು ಕರೆ ಮಾಡಿದಾಗ ಬೈಕ್ ನಾಪತ್ತೆಯಾಗಿರುವುದು ಗೊತ್ತಾಗಿದೆ. ಕೂಡಲೆ ಕೇರಳದಿಂದ ಶಿವಮೊಗ್ಗಕ್ಕೆ ಆಗಮಿಸಿದ ಮೊಹಮದ್ ಆದಿಲ್, ದೂರು ನೀಡಿದ್ದಾರೆ.
ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ALSO READ | ಮನೆ ಮುಂದೆ ನಿಲ್ಲಿಸಿದ್ದ ಬೈಕುಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಮೂವರು ಅರೆಸ್ಟ್, ಎಲ್ಲೆಲ್ಲಿ ಬೈಕ್ ಕದ್ದಿದ್ದರು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422