ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್ಗೆ ಪ್ರವೇಶಾತಿ ಆರಂಭ
ಶಿವಮೊಗ್ಗ: KSRTC ಬಸ್ ನಿಲ್ದಾಣದಲ್ಲಿ ಕಳ್ಳತನ ಪ್ರಕರಣಗಳು ಮತ್ತೆ ಹೆಚ್ಚಳವಾಗಿವೆ. ಮಹಿಳೆಯರ ಬ್ಯಾಗುಗಳೆ ಕಳ್ಳರ ಟಾರ್ಗೆಟ್ ಆಗಿವೆ.
ದೀಪಾವಳಿ ಹಬ್ಬ ಮುಗಿಸಿಕೊಂಡು ಕೋಲಾರದ ಕೆಜಿಎಫ್ಗೆ ತೆರಳುತ್ತಿದ್ದ ಮಹಿಳೆಯ ಬ್ಯಾಗ್ನಲ್ಲಿದ್ದ ಚಿನ್ನಾಭರಣ, ಮೊಬೈಲ್ ಕಳ್ಳತನ ಮಾಡಲಾಗಿದೆ. ಭಾರ್ಗವಿ ಎಂಬುವವರು ಹೊಳೆಹೊನ್ನೂರಿನ ತಮ್ಮೂರಿನಲ್ಲಿ ದೀಪಾವಳಿ ಹಬ್ಬ ಆಚರಿಸಿ ಪತಿಯೊಂದಿಗೆ ಕೋಲಾರದ ಕೆಜಿಎಫ್ಗೆ ತೆರಳುತ್ತಿದ್ದರು. ಅ.23ರ ರಾತ್ರಿ ಶಿವಮೊಗ್ಗ ಕೆಎಸ್ಆರ್ಟಿಸ್ ಬಸ್ ನಿಲ್ದಾಣದಲ್ಲಿ ಬೆಂಗಳೂರು ಬಸ್ ಹತ್ತುವಾಗ ರಶ್ ಇತ್ತು. ಭಾರ್ಗವಿ ಅವರು ಬಸ್ ಹತ್ತಿದ ಬಳಿಕ ಅವರ ಬ್ಯಾಗ್ನ ಜಿಪ್ ತೆರದಿರುವುದು ಗೊತ್ತಾಗಿದೆ.
ಬ್ಯಾಗ್ನಲ್ಲಿದ್ದ ವ್ಯಾನಿಟಿ ಬ್ಯಾಗ್ ನಾಪತ್ತೆಯಾಗಿತ್ತು. ಅದರಲ್ಲಿದ್ದ ಸುಮಾರು ₹1.60 ಲಕ್ಷ ಮೌಲ್ಯದ ಚಿನ್ನಾಭರಣ, ಒಂದು ಮೊಬೈಲ್ ಫೋನ್ ಕಳ್ಳತನವಾಗಿವೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಮತ್ತೊಮ್ಮೆ ಶತಕ ಸಿಡಿಸಿದ ಕರುಣ್ ನಾಯರ್, ಈಗ ಕರ್ನಾಟಕದ ಸ್ಕೋರ್ ಎಷ್ಟು?
KSRTC





