ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIMOGA REPORT, 30 OCTOBER 2024 : ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರ ಕೊರಳಲ್ಲಿದ್ದ ಚಿನ್ನದ ಸರ (Gold) ಕಳ್ಳತನ ಮಾಡಲಾಗಿದೆ. ಬಸ್ ಹತ್ತಿ ಸೀಟಿನಲ್ಲಿ ಕುಳಿತಾಗ ಚಿನ್ನದ ಸರ ಕಳುವಾಗಿರುವುದು ಗೊತ್ತಾಗಿದೆ.
ನೂಕುನುಗ್ಗಲಲ್ಲಿ ಬಸ್ ಹತ್ತಿದ್ದರು
ಧಾರವಾಡದ ಮೆಹಬೂಬಿ ಮತ್ತು ಅವರ ತಾಯಿ, ಜಾವಗಲ್‌ನ ದರ್ಗಾದಿಂದ ತಮ್ಮೂರಿಗೆ ಮರಳುತ್ತಿದ್ದರು. ಶಿವಮೊಗ್ಗ ನಿಲ್ದಾಣಕ್ಕೆ ಆಗಮಿಸಿದ್ದ ಇಬ್ಬರು, ನೂಕುನುಗ್ಗಲಿನಲ್ಲಿ ಹರಿಹರದ ಬಸ್ ಹತ್ತಿದ್ದರು. ಸೀಟಿನಲ್ಲಿ ಕುಳಿತಾಗ ಮೆಹಬೂಬಿ, ಪಕ್ಕದಲ್ಲಿ ಕುಳಿತಿದ್ದ ತಮ್ಮ ತಾಯಿಯ ಕಡೆಗೆ ನೋಡಿದಾಗ ಕೊರಳಲಿದ್ದ ಬಂಗಾರದ ಸರ ನಾಪತ್ತೆಯಾಗಿತ್ತು.

ಇದನ್ನೂ ಓದಿ » ಸಾಗರದ ಸಿರಿವಂತೆ ಚಂದ್ರಶೇಖರ್‌ಗೆ ರಾಜ್ಯೋತ್ಸವ ಪ್ರಶಸ್ತಿ
ಬಸ್ ಹತ್ತುವಾಗ, ನೂಕುನುಗ್ಗಲಿನ ನಡುವೆ ಮೆಹಬೂಬಿ ಅವರ ತಾಯಿಯ ಕೊರಳಿದ್ದ 45 ಸಾವಿರ ರೂ. ಮೌಲ್ಯದ 15 ಗ್ರಾಂ ತೂಕದ ಚಿನ್ನದ ಸರ ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
LATEST NEWS
- ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

- ಬ್ಯಾಂಕ್ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

- ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

- ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್, ಯಾಕೆ?

- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್ 2026 – ಅಡಿಕೆ ಧಾರಣೆ

About The Editor
ನಿತಿನ್ ಆರ್.ಕೈದೊಟ್ಲು
















