ಶಿವಮೊಗ್ಗ : ಬಂಗಾರದ ಸರ (Gold Chain) ಖರೀದಿಸಿ ಸಿಟಿ ಬಸ್‌ನಲ್ಲಿ ಮನೆಗೆ ಮರಳುವ ಹೊತ್ತಿಗೆ ಕಳ್ಳತನವಾಗಿದೆ. ಮಹಿಳೆಯ ಬ್ಯಾಗಿನಿಂದ ಚಿನ್ನದ ಸರವನ್ನು ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಖರೀದಿಸಿದ ಕೆಲವೇ ಹೊತ್ತಿಗೆ ಕಳವು
ನಾಗರತ್ನಮ್ಮ ಎಂಬುವವರು ಗೋಪಿ ಸರ್ಕಲ್ ಸಮೀಪ ಆಭರಣ ಜ್ಯೂವೆಲರ್ಸ್ ಅಂಗಡಿಯಿಂದ 1.93 ಲಕ್ಷ ರೂ. ಮೌಲ್ಯದ ಚಿನ್ನದ ಮಾಂಗಲ್ಯ ಸರ ಖರೀದಿಸಿದ್ದರು. ಅದಕ್ಕೆ 7 ಗ್ರಾಂ ತೂಕದ ತಾಳಿ, ಲಕ್ಷ್ಮಿ ಕಾಸು, ಗುಂಡುಗಳನ್ನು ಜ್ಯೂವೆಲರಿ ಅಂಗಡಿಯಲ್ಲೇ ಜೋಡಿಸಿಕೊಂಡಿದ್ದರು. ಒಟ್ಟು 2.50 ಲಕ್ಷ ರೂ. ಮೌಲ್ಯದ ಮಾಂಗಲ್ಯವನ್ನು ಬಾಕ್ಸ್‌ನಲ್ಲಿ ಹಾಕಿಸಿಕೊಂಡು, ಬ್ಯಾಗಿನಿಲ್ಲಿ ಇರಿಸಿಕೊಂಡಿದ್ದರು.
ಸಿಟಿ ಬಸ್ ಹತ್ತಿ ಮನೆಗೆ
ನಾಗರತ್ನಮ್ಮ ಅವರು ತಮ್ಮ ಸಹೋದರಿ ಮತ್ತು ಮಗಳೊಂದಿಗೆ ಆಭರಣ ಜ್ಯೂವೆಲರಿ ತೆರಳಿದ್ದರು. ಅಲ್ಲಿಂದ ಗಾಂಧಿ ಬಜಾರ್‌ಗೆ ಹೋಗಿದ್ದರು. ಬಳಿಕ ಮನೆಗೆ ತೆರಳಲು ಎಸ್.ಎನ್.ಸರ್ಕಲ್‌ನಲ್ಲಿ ಸಿಟಿ ಬಸ್ ಹತ್ತಿದ್ದರು. ಬಸ್ಸು ಬಸ್ ನಿಲ್ದಾಣದವರೆಗೆ ಹೋಗಿ ತಿರುಗಿ ಮಾರುಕಟ್ಟೆಗೆ ಬಂದಿತ್ತು. ಈ ವೇಳೆಯಲ್ಲೆ ಚಿನ್ನದ ಸರ (Gold Chain) ಕಳುವಾಗಿರುವ ಕುರಿತು ಮಹಿಳೆ ಶಂಕೆ ವ್ಯಕ್ತಪಡಿಸಿದ್ದಾರೆ.

ಮನೆಗೆ ಹೋದಾಗ ಕಾದಿತ್ತು ಶಾಕ್
ಮನೆಗೆ ಹೋಗಿ ಬ್ಯಾಗಿನಿಂದ ಆಭರಣ ಜ್ಯೂವೆಲರ್ಸ್ ಅಂಗಡಿಯ ಬಾಕ್ಸ್ ಹೊರತೆಗೆದು ನೋಡಿದಾಗ ಮಾಂಗಲ್ಯ ಸರ ಇರಲಿಲ್ಲ. ಆತಂಕಕ್ಕೀಡಾದ ಮಹಿಳೆ ಕುಟುಂಬದವರಿಗೆ ಮಾಹಿತಿ ನೀಡಿದ್ದರು. ಘಟನೆ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ವಿಧಾನಸೌಧದಲ್ಲಿ ಕೆಲಸ ಕೊಡಿಸ್ತೀನಿ ಅಂದ, ಲಕ್ಷ ಲಕ್ಷ ಹಣ ಪಡೆದವನ ಹಿನ್ನೆಲೆ ಪರಿಶೀಲಿಸಿದಾಗ ಕಾದಿತ್ತು ಆಘಾತ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200