ಶಿವಮೊಗ್ಗದ ಲಾಡ್ಜ್‌ನಲ್ಲಿ ರೂಂ ಮಾಡಿ ಉಳಿದಿದ್ದ ಯುವಕ, ಬೆಳಗ್ಗೆ ಹೊರ ಬಂದಾಗ ಕಾದಿತ್ತು ಆಘಾತ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಬಿ.ಹೆಚ್ ರಸ್ತೆಯ ಲಾಡ್ಜ್ (lodge) ಒಂದರ ಮುಂಭಾಗ ನಿಲ್ಲಿಸಿದ್ದ ಹೊಂಡಾ ಡಿಯೋ ಬೈಕ್ ಕಳ್ಳತನವಾಗಿದೆ. ಘಟನೆ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಸೂಡಿ ನಿವಾಸಿ ಕೃಷ್ಣ ನಾಯ್ಕ ಮತ್ತು ಅವರ ಸ್ನೇಹಿತ ಮನೋಜ್ ನಾಯ್ಕ ಅವರು ಡಿಸೆಂಬರ್ 4ರಂದು ಲಾಡ್ಜ್‌ನಲ್ಲಿ ರೂಂ ಮಾಡಿ ರಾತ್ರಿ ಉಳಿದುಕೊಂಡಿದ್ದರು. ಬೈಕ್‌ ಅನ್ನು ಲಾಡ್ಜ್‌ ಮುಂಭಾಗ ನಿಲ್ಲಿಸಿದ್ದರು. ಮರುದಿನ ಬೆಳಗ್ಗೆ ಲಾಡ್ಜ್‌ನಿಂದ ಹೊರ ಬಂದು ನೋಡಿದಾಗ ಬೈಕ್ ಇರಲಿಲ್ಲ.

ಇದನ್ನೂ ಓದಿ » ಬೊಲೇರೋ ವಾಹನ ಪಲ್ಟಿ, ಮಹಿಳೆ ಸಾವು, ಎಲ್ಲಿ? ಹೇಗಾಯ್ತು ಘಟನೆ?

₹24,275 ಮೌಲ್ಯದ ಕಪ್ಪು ಬಣ್ಣದ ಹೊಂಡಾ ಡಿಯೋ ಬೈಕ್‌ ಕಳ್ಳತನವಾದ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment