ಕಾರ್‌ ಗ್ಲಾಸ್‌ ಪೀಸ್‌ ಪೀಸ್‌, ಹೌಹಾರಿದ ಶಾಸಕ, ಹೋಮ್‌ ಮಿನಿಸ್ಟರ್‌ ವಾರ್ನಿಂಗ್‌, ಇಡೀ ದಿನ ಏನೇನಾಯ್ತು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 30 MAY 2024

SHIMOGA : ಹೊಸಮನೆ ಬಡಾವಣೆಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳ ಮೇಲೆ ದಾಳಿ (Attack) ಪ್ರಕರಣ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಘಟನೆ ಬೆನ್ನಿಗೆ ಸ್ಥಳಕ್ಕೆ ಶಾಸಕರು ಭೇಟಿ ನೀಡಿದ್ದರು. ಗೃಹ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಮಧ್ಯೆ ಪೊಲೀಸ್‌ ಚೌಕಿಗಾಗಿ ಬಡಾವಣೆಯ ಮಾಜಿ ಕಾರ್ಪೊರೇಟರ್‌ ಆಗ್ರಹಿಸಿದ್ದಾರೆ.

Glass break at hosamane

ಬೆಳಗ್ಗೆಯಿಂದ ಏನೇನಾಯ್ತು ಬೆಳವಣಿಗೆ?

ಕಳೆದ ರಾತ್ರಿ ಹೊಸಮನೆ ಬಡಾವಣೆಯ ಮೂರನೇ ಅಡ್ಡರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ವಾಹನಗಳು, ಮನೆ ಮುಂದಿನ ವಸ್ತುಗಳ ಮೇಲೆ ದಾಳಿ ನಡೆಸಲಾಗಿತ್ತು. ಎರಡು ಕಾರು, ಎರಡು ಆಟೋ, ಒಂದು ಬೈಕ್‌ ಮೇಲೆ ದಾಳಿ ನಡೆಸಲಾಗಿದೆ. ಮನೆ ಮುಂದೆ ಇದ್ದ ಡ್ರಮ್‌ ಒಂದಕ್ಕೆ ಮಚ್ಚಿನಲ್ಲಿ ಹೊಡೆಯಲಾಗಿದೆ.

ಹೌಹಾರಿದ ಶಾಸಕ ಚನ್ನಬಸಪ್ಪ

ಮಾಹಿತಿ ತಿಳಿಯುತ್ತಿದ್ದಂತೆ ಶಾಸಕ ಎಸ್‌.ಎನ್.ಚನ್ನಬಸಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸ್ಥಳೀಯರು ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು. ರಾತ್ರಿ ವೇಳೆ ಯುವಕರ ಗುಂಪು ಮದ್ಯ ಸೇವಿಸುವ ಅಡ್ಡೆಯೊಂದನ್ನು ಸ್ಥಳೀಯರು ತೋರಿಸಿದರು. ಅದನ್ನು ಕಂಡು ಒಂದೆರಡು ಕ್ಷಣ ಶಾಸಕ ಚನ್ನಬಸಪ್ಪ ಹೌಹಾರಿದರು.

MLA Channabasappa visit to Hosamane

ಹೊಸಮನೆ ಭಾಗದಲ್ಲಿ ಕಳೆದ ರಾತ್ರಿ ನಡೆದ ಘಟನೆ ಗಾಂಜಾ ಸೇವನೆಯಿಂದ ಆಗಿದ್ದು ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಯಾವ ವಸ್ತು ನಗರದಲ್ಲಿ ದೊರೆಯಬಾರದೊ ಅದು ಈಗ ವ್ಯವಸ್ಥಿತವಾಗಿ ಕೈಗೆಟುಕುತ್ತಿದೆ. ಗಾಂಜಾ ಮಟ್ಟ ಹಾಕುತ್ತೇವೆ ಅನ್ನುತ್ತಾರೆ. ಅದರೆ ಹೊಸಮನೆಯಲ್ಲಿ ಹೇಗೆ ಸಿಗುತ್ತಿದೆ? ಮಾತು ಎತ್ತಿದರೆ ಕಾನೂನು ಸುವ್ಯವಸ್ಥೆ ಇದೆ ಎನ್ನುತ್ತಾರೆ. ಸಚಿವರು, ಪೊಲೀಸ್‌ ಅಧಿಕಾರಿಗಳು ಒಮ್ಮೆ ಸ್ಥಳಕ್ಕೆ ಭೇಟಿ ನೀಡಿ ಇಲ್ಲಿನ ಜನರೊಂದಿಗೆ ಮಾತನಾಡಲಿ. ಈ ರೀತಿಯ ಗೂಂಡ ವರ್ತನೆಗೆ ಕಡಿವಾಣ ಹಾಕಬೇಕು. ಜಿಲ್ಲೆಯಲ್ಲಿ ರಕ್ಷಣ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಎಲ್ಲೆಂದರಲ್ಲಿ ಕೊಲೆಗಳು ನಡೆಯುತ್ತಿವೆ. ತಲ್ವಾರುಗಳನ್ನು ಕಾಣಿಸುತ್ತಿವೆ.ಎಸ್‌.ಎನ್.ಚನ್ನಬಸಪ್ಪ, ಶಾಸಕ

ಜಿಲ್ಲಾ ರಕ್ಷಣಾಧಿಕಾರಿ ಭೇಟಿ

ದುಷ್ಕರ್ಮಿಗಳು ದಾಳಿ ನಡೆಸಿದ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ಭೇಟಿ ನೀಡಿದ್ದರು. ಸ್ಥಳೀಯರಿಂದ ಘಟನೆ ಕುರಿತು ಮಾಹಿತಿ ಪಡೆದರು. ಅಲ್ಲದೆ ತುರ್ತು ಸಂದರ್ಭದಲ್ಲಿ 112 ನಂಬರ್‌ಗೆ ಕರೆ ಮಾಡುವಂತೆ ತಿಳಿಸಿದರು.

SP GK Mithun Kumar visits Hosamane

ಹೋಮ್‌ ಮಿನಿಸ್ಟರ್‌ ಗರಂ

ಗೃಹ ಸಚಿವ ಜಿ.ಪರಮೇಶ್ವರ್‌ ಅವರು ಇವತ್ತು ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭ ಹೊಸಮನೆ ಘಟನೆ ಮತ್ತು ಶಿವಮೊಗ್ಗದಲ್ಲಿ ಪದೇ ಪದೆ ಇಂತಹ ಘಟನೆ ನಡೆಯುತ್ತಿರುವ ಕುರಿತು ಪತ್ರಕರ್ತರು ಪ್ರಶ್ನಿಸಿದರು. ಪ್ರತಿಕ್ರಿಯೆ ನೀಡಿದ ಜಿ.ಪರಮೇಶ್ವರ್‌, ‘ನಮ್ಮ ಸರ್ಕಾರದ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಗೂಂಡಾಗಳಿಗೆ ನಮ್ಮ ಕಾಲದಲ್ಲಿ ಅವಕಾಶವಿಲ್ಲ’ ಎಂದು ತಿಳಿಸಿದರು.

Home Minister G Parameshwara in Shimoga

ಪೊಲೀಸ್‌ ಚೌಕಿಗೆ ಒತ್ತಾಯ

ಇನ್ನು, ಹೊಸಮನೆ ಬಡಾವಣೆಯಲ್ಲಿ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಪೊಲೀಸ್‌ ಚೌಕಿ ಸ್ಥಾಪಿಸಬೇಕು ಎಂದು ಮಾಜಿ ಕಾರ್ಪೊರೇಟರ್‌ ರೇಖಾ ರಂಗನಾಥ್‌ ಮನವಿ ಸಲ್ಲಿಸಿದರು. ಹೊಸಮನೆ ಬಡಾವಣೆ ಮತ್ತು ಶರಾವತಿ ನಗರ ಬಡಾವಣೆಗಳಲ್ಲಿ 26 ಸಾವಿರ ಜನಸಂಖ್ಯೆ ಇದೆ. ಇವೆರಡು ಬಡಾವಣೆಗಳ ಮಧ್ಯೆ ಪೊಲೀಸ್‌ ಚೌಕಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

Rekha Ranganath memorandum to Home Minister G Parameshwara

ಇದನ್ನೂ ಓದಿ – ಬೆಳ್ಳಂಬೆಳಗ್ಗೆ ಟೀ ಕುಡಿದು ಹತ್ತೇ ನಿಮಿಷದಲ್ಲಿ ವಾಪಾಸಾದ ಗಾರೆ ಕೆಲಸಗಾರನಿಗೆ ಕಾದಿತ್ತು ಆಘಾತ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : May 30, 2024

ಶಿವಮೊಗ್ಗದಲ್ಲಿ ಅತಿ ಕೆಳಗೆ ಹಾರಿದ ವಿಮಾನ, ಎರಡು ಟ್ರಿಪ್‌ ಹಾರಾಟ, ಕಾರಣವೇನು?

ಶಿವಮೊಗ್ಗದಲ್ಲಿ ಅತಿ ಕೆಳಗೆ ಹಾರಿದ ವಿಮಾನ, ಎರಡು ಟ್ರಿಪ್‌ ಹಾರಾಟ, ಕಾರಣವೇನು?

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಚಾಕು ತೋರಿಸಿ ಬೆದರಿಕೆ ಹಾಕಿ ದರೋಡೆ, ಎಲ್ಲಿ? ಆಗಿದ್ದೇನು?

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಚಾಕು ತೋರಿಸಿ ಬೆದರಿಕೆ ಹಾಕಿ ದರೋಡೆ, ಎಲ್ಲಿ? ಆಗಿದ್ದೇನು?

ಎಸ್ಸೆಸ್ಸೆಲ್ಸಿ ಪರೀಕ್ಷೆ, 192 ವಿದ್ಯಾರ್ಥಿಗಳು ಗೈರು, ಹೇಗಿತ್ತು ಮೊದಲ ದಿನದ ಪರೀಕ್ಷೆ?

ಎಸ್ಸೆಸ್ಸೆಲ್ಸಿ ಪರೀಕ್ಷೆ, 192 ವಿದ್ಯಾರ್ಥಿಗಳು ಗೈರು, ಹೇಗಿತ್ತು ಮೊದಲ ದಿನದ ಪರೀಕ್ಷೆ?

ಕುಡಿಗೆರೆಯಲ್ಲಿ ಅಧಿಕಾರಿಗಳ ದಾಳಿ, ಮೂವರ ವಿರುದ್ಧ ದಾಖಲಾಯ್ತು ಕೇಸ್‌, ಕಾರಣವೇನು?

ಕುಡಿಗೆರೆಯಲ್ಲಿ ಅಧಿಕಾರಿಗಳ ದಾಳಿ, ಮೂವರ ವಿರುದ್ಧ ದಾಖಲಾಯ್ತು ಕೇಸ್‌, ಕಾರಣವೇನು?

ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತೂ ಬರುತ್ತಾ ಮಳೆ?

ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತೂ ಬರುತ್ತಾ ಮಳೆ?

ಶಿವಮೊಗ್ಗ ಸಿಟಿಯಲ್ಲಿ ಭಾರಿ ಮಳೆ, ಎಲ್ಲೆಲ್ಲಿ ಏನೇನು ಹಾನಿಯಾಗಿದೆ? ಇಲ್ಲಿದೆ ಡಿಟೇಲ್ಸ್‌

ಶಿವಮೊಗ್ಗ ಸಿಟಿಯಲ್ಲಿ ಭಾರಿ ಮಳೆ, ಎಲ್ಲೆಲ್ಲಿ ಏನೇನು ಹಾನಿಯಾಗಿದೆ? ಇಲ್ಲಿದೆ ಡಿಟೇಲ್ಸ್‌

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್‌? – 18 ಮಾರ್ಚ್‌ 2026 – ಅಡಿಕೆ ಧಾರಣೆ

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್‌? – 18 ಮಾರ್ಚ್‌ 2026 – ಅಡಿಕೆ ಧಾರಣೆ

ಶಿವಮೊಗ್ಗ ಸಿಟಿಯಲ್ಲಿ ಆಲಿಕಲ್ಲು ಸಹಿತ ಮಳೆ, ಜೋರು ಗಾಳಿ, ಗುಡುಗಿನ ಅಬ್ಬರ

ಶಿವಮೊಗ್ಗ ಸಿಟಿಯಲ್ಲಿ ಆಲಿಕಲ್ಲು ಸಹಿತ ಮಳೆ, ಜೋರು ಗಾಳಿ, ಗುಡುಗಿನ ಅಬ್ಬರ

ಶಿಕ್ಷಕನ ಅಮಾನತು, ಇಲಾಖೆ ವಿಚಾರಣೆಗೆ ಆದೇಶಿಸಿದ ಡಿಡಿಪಿಐ, ಕಾರಣವೇನು?

ಶಿಕ್ಷಕನ ಅಮಾನತು, ಇಲಾಖೆ ವಿಚಾರಣೆಗೆ ಆದೇಶಿಸಿದ ಡಿಡಿಪಿಐ, ಕಾರಣವೇನು?

ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತು ಎಷ್ಟಿರಲಿದೆ ತಾಪಮಾನ?

ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತು ಎಷ್ಟಿರಲಿದೆ ತಾಪಮಾನ?

Leave a Comment