ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 17 DECEMBER 2022
ಶಿವಮೊಗ್ಗ : ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೀರುವಿನಲ್ಲಿ ಇಟ್ಟಿದ್ದ ಚಿನ್ನಾಭರಣ ಕಳ್ಳತನವಾಗಿದೆ. ಶಿವಮೊಗ್ಗ ರೈಲ್ವೆ ನಿಲ್ದಾಣ ಸಮೀಪದ ಅಮೀರ್ ಅಹಮದ್ ಕಾಲೋನಿಯ ಮನೆಯೊಂದರಲ್ಲಿ (house theft) ಘಟನೆ ಸಂಭವಿಸಿದೆ.
ಫಯಾಜ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಫಯಾಜ್ ಅವರ ಪತ್ನಿ ತನ್ನ ತಾಯಿ ಮನೆಗೆ ಹೋಗಿದ್ದರು. ಫಯಾಜ್ ಅವರು ಕೆಲಸಕ್ಕೆ ಹೋಗಿದ್ದರು. ಫಯಾಜ್ ಅವರ ಪತ್ನಿ ಮನೆಗೆ ಬಂದು ಬೀಗ ತೆಗೆದು ಒಳಗೆ ಹೋಗಿದ್ದಾರೆ. ಬೀರು ತೆಗೆದು ನೋಡಿದಾಗ ಚಿನ್ನಾಭರಣ ಕಣ್ಮರೆಯಾಗಿತ್ತು.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಾದ್ಯಂತ 20 ಚೆಕ್ ಪೋಸ್ಟ್, ಪೊಲೀಸರಿಂದ ದಿಢೀರ್ ಕಾರ್ಯಾಚರಣೆ, 46 ಜನರ ವಿರುದ್ಧ ಕೇಸ್
10 ಗ್ರಾಂ ಬಂಗಾರದ ತಾಳಿ ಗುಂಡಿನ ಸರ, 4 ಉಂಗುರು, 5 ಗ್ರಾಂನ ಡಾಲರ್, 30 ಗ್ರಾಂ ಬೆಳ್ಳಿಯ ಚೈನ್, 20 ಗ್ರಾಂ ಬ್ರೇಸ್ಲೆಟ್ ಸೇರಿ 78 ಸಾವಿರ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ.
(house theft)
ಮೀಟರ್ ಮೇಲಿತ್ತು ಬೀಗ
ಫಯಾಜ್ ಅವರು ಕೆಲಸಕ್ಕೆ ತೆರಳುವಾಗ ಕರೆಂಟ್ ಮೀಟರ್ ಬಾಕ್ಸ್ ಮೇಲೆ ಮನೆಯ ಬೀಗ ಇಟ್ಟು ಹೋಗಿದ್ದರು. ಅವರ ಪತ್ನಿ ಮನೆಗೆ ಮರಳಿದಾಗ ಬಾಗಿಲು ಲಾಕ್ ಆಗಿಯೆ ಇತ್ತು. ಮೀಟರ್ ಬಾಕ್ಸ್ ಮೇಲಿದ್ದ ಬೀಗ ತೆಗೆದುಕೊಂಡು ಬಾಗಿಲು ತೆಗೆದಿದ್ದರು. ಒಳಗೆ ಹೋದಾಗಲೆ ಕಳ್ಳತನದ ವಿಚಾರ ಗೊತ್ತಾಗಿದ್ದು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422