ಪತ್ನಿಯ ಕೊಂದ ಪತಿ, ತನಿಖೆ ವೇಳೆ ಕಾರಣ ಬಯಲು, ಏನದು?

SHIKARIPURA NEWS, 9 NOVEMBER 2024 : ಶಿಕಾರಿಪುರ ತಾಲೂಕು ಅಂಬ್ಲಿಗೋಳದಲ್ಲಿ ಪತಿಯೇ ಪತ್ನಿಯ ಕುತ್ತಿಗೆಗೆ ಟವಲ್‌ನಿಂದ (Towel) ಬಿಗಿದು ಹತ್ಯೆ ಮಾಡಿದ್ದಾನೆ. ಪ್ರಾಥಮಿಕ ವಿಚಾರಣೆ ವೇಳೆ ಕೊಲೆಗೆ ಕಾರಣವನ್ನು ಬಾಯಿಬಿಟ್ಟಿದ್ದಾನೆ. ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌, ವಾಟ್ಸಪ್‌ ಮೂಲಕ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಅಂಬ್ಲಿಗೋಳದ ಮನು ಎಂಬಾತ ಇಂದು ಸಂಜೆ ತನ್ನ ಪತ್ನಿ ಗೌರಮ್ಮಾಳ ಹತ್ಯೆ ಮಾಡಿದ್ದ. ಟವಲ್‌ನಿಂದ ಕುತ್ತಿಗೆ ಬಿದು ಕೊಲೆಗೈದಿದ್ದ.

SHIKARIPURA BREAKING NEWS

ಕೊಲೆಗೆ ಕಾರಣವೇನು?

ಈ ಸಂಬಂಧ ಮಾಧ್ಯಮಗಳಿಗೆ ವಾಟ್ಸಪ್‌ ಮೂಲಕ ಮಾಹಿತಿ ನೀಡಿರುವ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌, ‘ಇಂದು ಸಂಜೆ ಹತ್ಯೆಯಾಗಿದೆ. ಪತಿ, ತನ್ನ ಪತ್ನಿಗೆ ಊಟ ಬಡಿಸಿಕೊಡುವಂತೆ ತಿಳಿಸಿದ್ದ. ಪತ್ನಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರಿಂದ, ಪತಿಗೆ ತಾನೇ ಬಡಿಸಿಕೊಳ್ಳುವಂತೆ ತಿಳಿಸಿದ್ದಳು. ಆಗ ಆಕೆಯ ಮೇಲೆ ಪತಿ ಹಲ್ಲೆ ನಡೆಸಿ, ಟವಲ್‌ನಿಂದ ಕುತ್ತಿಗೆ ಬಿಗಿದಿದ್ದಾನೆʼ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ » ಭದ್ರಾವತಿಯ ವ್ಯಕ್ತಿಗೆ 20 ವರ್ಷ ಜೈಲು, 1.12 ಲಕ್ಷ ರೂ. ದಂಡ

ಗೌರಮ್ಮ ಗಾರ್ಮೆಂಟ್ಸ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಘಟನೆ ಸಂಬಂಧ ಆಕೆಯ ತಂದೆಯ ದೂರಿನ ಹಿನ್ನೆಲೆ ಪತಿ ಮನುನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

RED-LINE-

husband strangulates wife using towel

crime name image

Leave a Comment