ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 3 NOVEMBER 2023
SHIMOGA : ಪತ್ನಿಗೆ ಹುಷಾರಿಲ್ಲ ಅಕೆಯನ್ನು ಆಸ್ಪತ್ರೆಗೆ ಕರೆದೊಯ್ಯಬೇಕು ಎಂದು ಸ್ನೇಹಿತನ ಇನ್ನೋವಾ (Innova) ಕಾರು ಪಡೆದ ವ್ಯಕ್ತಿಯೊಬ್ಬ ಈಗ ಕಾರು ಸಹಿತ ನಾಪತ್ತೆಯಾಗಿದ್ದಾನೆ. ಜಿಪಿಎಸ್ ಟ್ರ್ಯಾಕರ್ ಪರಿಶೀಲಿಸಿದಾಗ ಕಾರು ತರೀಕೆರೆಯಲ್ಲಿ ಇರುವುದು ಗೊತ್ತಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರಣ್ ಎಂಬಾತ ಆರ್ಎಂಎಲ್ ನಗರದ ಸಯ್ಯದ್ ಸಾದಿಕ್ ಎಂಬುವವರ ಇನ್ನೋವಾ ಕಾರನ್ನು ಪಡೆದಿದ್ದ. ತನ್ನ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯಬೇಕು ಎಂದು ತಿಳಿಸಿದ್ದರಿಂದ ಸಾದಿಕ್ ಅವರು ಕಾರು ನೀಡಿದ್ದರು. ಕಾರು ಕೊಂಡೊಯ್ದವನು ಹಿಂತಿರುಗಿಸದ ಹಿನ್ನೆಲೆ ಹುಡುಕಾಡಿದ ಸಯ್ಯದ್ ಸಾದಿಕ್ ಅವರಿಗೆ ಕಿರಿಣ್ ಸಿಕ್ಕಿಲ್ಲ. ಬಹು ಸಮಯದಿಂದ ಪರಿಚಯ ಇದ್ದಿದ್ದರಿಂದ ಸಯ್ಯದ್ ಸಾದಿಕ್ ಅವರು ಕಾರು ನೀಡಿದ್ದರು.
ಜಿಪಿಎಸ್ ಟ್ರ್ಯಾಕರ್ ಆನ್ ಮಾಡಿದಾಗ ಕಾರು ತರೀಕೆರೆಯಲ್ಲಿ ಇರುವುದು ಗೊತ್ತಾಗಿದೆ. ಕಾರು ಕೊಂಡೊಯ್ದು ಹಿಂತಿರುಗಿಸದೆ ನಾಪತ್ತೆಯಾಗಿರುವ ಕಿರಣ್ ವಿರುದ್ಧ ಸಯ್ಯದ್ ಸಾದಿಕ್ ದೂರು ನೀಡಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – SHIMOGA JOBS | ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕೆಲಸ, ಸ್ಟಾರ್ ಏರ್ನಿಂದ ನೇರ ಸಂದರ್ಶನ, ಯಾವಾಗ? ಎಲ್ಲಿ?
LATEST NEWS
- ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

- ಬ್ಯಾಂಕ್ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

- ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

- ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್, ಯಾಕೆ?

- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್ 2026 – ಅಡಿಕೆ ಧಾರಣೆ

About The Editor
ನಿತಿನ್ ಆರ್.ಕೈದೊಟ್ಲು
















