ಲಾಭದ ಆಸೆಗೆ ಬಿದ್ದ ಭದ್ರಾವತಿ ಕೃಷಿಕ, ಕಳೆದುಕೊಂಡಿದ್ದು 21 ಲಕ್ಷ, ಆಗಿದ್ದೇನು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

BHADRAVATHI NEWS, 20 OCTOBER 2024 : ಟೆಲಿಗ್ರಾಂ ಆಪ್‌ನಲ್ಲಿ ಮೆಸೇಜ್‌ ಮಾಡಿ ಟ್ರಾವೆಲ್ಸ್‌ ಗ್ರೂಪ್‌ಗೆ ಹಣ ಹೂಡಿಕೆ (Investment) ಮಾಡಿದರೆ, ಶೇ.30ರಷ್ಟು ಕಮಿಷನ್‌ ಮತ್ತು ಪಾರ್ಟ್‌ ಟೈಮ್‌ ಉದ್ಯೋಗ ಕೊಡುವ ಭರವಸೆ ನೀಡಿ 21.90 ಲಕ್ಷ ರೂ. ವಂಚಿಸಲಾಗಿದೆ. ಭದ್ರಾವತಿ ತಾಲೂಕಿನ ಕೃಷಿಕರೊಬ್ಬರು (ಹೆಸರು ಗೌಪ್ಯ) ವಂಚನೆಗೊಳಗಾಗಿದ್ದಾರೆ.

ಟ್ರಾವೆಲ್ಸ್‌ ಪಾರ್ಟ್‌ನರ್‌ ಇಂಡಿಯಾ, 91 ಕ್ಲಬ್‌ ಸರ್ವಿಸ್‌ ಎಂಬ ಹೆಸರು ಬಳಸಿ ಕೃಷಿಕರೊಬ್ಬರಿಗೆ ಮೆಸೇಜ್‌ ಕಳುಹಿಸಲಾಗಿತ್ತು. ಅಧಿಕ ಲಾಭದ ಆಸೆಗೆ ಬಿದ್ದ ಕೃಷಿಕ ತನ್ನ ಬ್ಯಾಂಕ್‌ ಖಾತೆ, ಫೋನ್‌ ಪೇ ಮತ್ತು ಚಕ್‌ ಮೂಲಕವು ಹಣ ಪಾವತಿಸಿದ್ದಾರೆ. ಸತತ ಒಂದು ತಿಂಗಳು ಹಂತ ಹಂತವಾಗಿ 21.90 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

Telegram-App.webp

ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಗೆ ಇವತ್ತೂ ಅಲರ್ಟ್‌, ಎಲ್ಲೆಲ್ಲಿ ಎಷ್ಟಿದೆ ತಾಪಮಾನ? ಎಲ್ಲೆಲ್ಲಿ ಮಳೆಯಾಗುತ್ತೆ?

ಲಾಭಾಂಶ ದೊರೆಯದಿದ್ದಾಗ ವಂಚನೆಗೊಳಗಾಗಿರುವುದು ಅರಿವಿಗೆ ಬಂದಿದೆ. ಈ ಹಿನ್ನೆಲೆ, ಅಮ್ರಿತ್‌ ಪಾಟೇಲ್‌, ದಿವ್ಯ ದರ್ಶಿನಿ, ಸಾರಿಕಾ ಎಂಬುವವರ ಹೆಸರುಗಳನ್ನು ಉಲ್ಲೇಖಿಸಿ ಕೃಷಿಕ ದೂರು ನೀಡಿದ್ದಾರೆ. ಭದ್ರಾವತಿ ಓಲ್ಡ್‌ ಟೌನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ದಿನ ಭವಿಷ್ಯ | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ?

Leave a Comment