ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 12 ಅಕ್ಟೋಬರ್ 2021
ವಾಹನಗಳ ತಪಾಸಣೆ ವೇಳೆ ಭರ್ಚಿ, ಕಬ್ಬಿಣದ ರಾಡನ್ನು ಬೈಕಲ್ಲಿ ಇಟ್ಟುಕೊಂಡು ಓಡಾಡುತ್ತಿದ್ದ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಅಯುಧಗಳನ್ನು ಇಟ್ಟುಕೊಳ್ಳಲು ಸಮರ್ಪಕವಾಗಿ ಕಾರಣ ನೀಡದ ಹಿನ್ನೆಲೆ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ಶಿವಮೊಗ್ಗದ ನಾಗೇಂದ್ರ ಕಾಲೋನಿಯ ರೈಲ್ವೆ ಗೇಟ್ ಬಳಿ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದರು. ಮುಂಭಾಗದಲ್ಲಿ ನಂಬರ್ ಪ್ಲೇಟ್ ಇಲ್ಲದೆ ಇರುವ ಹೋಂಡಾ ಡಿಯೋ ಬೈಕ್ ಬಂದಿದ್ದು, ತಪಾಸಣೆ ನಡೆಸಲಾಗಿದೆ. ವಾಹನದ ದಾಖಲೆಗಳನ್ನು ಒದಗಿಸದೆ ಯುವಕರು ಅನಮಾನಾಸ್ಪದವಾಗಿ ವರ್ತಿಸಿದ್ದಾರೆ.
ಡಿಕ್ಕಿ ತೆಗೆಸಿದಾಗ ಕಾದಿತ್ತು ಶಾಕ್
ಡಿಯೋ ಬೈಕ್’ನ ಡಿಕ್ಕಿ ತೆಗೆಸಿದ ಪೊಲೀಸರಿಗೆ ಒಳಗೆ ಭರ್ಚಿ ಮತ್ತು ಕಬ್ಬಿಣ ರಾಡ್ ಪತ್ತೆಯಾಗಿದೆ. ಇವುಗಳನ್ನು ಇಟ್ಟುಕೊಳ್ಳಲು ಕಾರಣ ಕೇಳಿದಾಗ ಸಮರ್ಪಕವಾಗಿ ಉತ್ತರ ನೀಡಿಲ್ಲ. ಅನುಮಾನಗೊಂಡ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಟಿಪ್ಪುನಗರದ ಸುನಿಲ್ ಕುಮಾರ್ ಮತ್ತು ಪದ್ಮಾ ಟಾಕೀಸ್ ಸಮೀಪದ ಅಂಬೇಡ್ಕರ್ ನಗರ ನಿವಾಸಿ ಶರಣ ಎಂದು ಗುರುತಿಸಲಾಗಿದೆ. ಯುವಕರು ತಂದಿದ್ದ ಡಿಯೋ ಬೈಕ್, ಭರ್ಚಿ ಮತ್ತು ಕಬ್ಬಣದ ರಾಡನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿನೋಬಗರ ಠಾಣೆ ಇನ್ಸ್ ಪೆಕ್ಟರ್ ರವಿ, ಸಿಬ್ಬಂದಿ ಪ್ರದೀಪ್, ಮಲ್ಲಪ್ಪ ಅವರು ತಪಾಸಣೆ ನಡೆಸುತ್ತಿದ್ದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ವಿನೋಬಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ ಮೂಲಕ ಸುದ್ದಿಗಾಗಿ 7411700200
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422