ಶಿವಮೊಗ್ಗದಲ್ಲಿ 27 ಮಹಿಳೆಯರಿಗೆ ವಂಚಿಸಿದ ರಿಕವರಿ ಆಫೀಸರ್‌

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 1 SEPTEMBER 2023

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

SHIMOGA: ಸಾಲ ಪಡೆದವರಿಂದ ಪ್ರತಿ ತಿಂಗಳು ಕಂತು ಹಣ ಪಡೆದು ಫೈನಾನ್ಸ್‌ ಸಂಸ್ಥೆಗೆ ಪಾವತಿಸದೆ ರಿಕವರಿ ಆಫೀಸರ್‌ (Recovery Officer) ಒಬ್ಬಾತ ವಂಚನೆ ಮಾಡಿದ್ದಾನೆ. ಆತನ ವಿರುದ್ಧ ಫೈನಾನ್ಸ್‌ ಸಂಸ್ಥೆಯ ಬ್ರಾಂಚ್‌ ಮ್ಯಾನೇಜರ್‌ ದೂರು ನೀಡಿದ್ದಾರೆ.

ವಿನಾಯಕ ನಗರದಲ್ಲಿರುವ ಮೈಕ್ರೋ ಫೈನಾನ್ಸ್‌ ಸಂಸ್ಥೆಯಲ್ಲಿ ಘಟನೆ ಸಂಭವಿಸಿದೆ. ಮಹಿಳಾ ಸ್ವ ಸಹಾಯ ಸಂಘಗಳಿಗೆ ಈ ಸಂಸ್ಥೆ ಸಾಲ ಒದಗಿಸುತ್ತಿತ್ತು. ಸಾಲದ ಹಣ ವಸೂಲಿಗೆ ರಿಕವರಿ ಆಫೀಸರ್‌ಗಳನ್ನು ನೇಮಿಸಲಾಗಿದೆ. ಮಾರುತಿ ಎಂಬಾತ ಈ ಸಂಸ್ಥೆಯಲ್ಲಿ 2022ರಿಂದ ರಿಕವರಿ ಆಫೀಸರ್‌ (Recovery Officer) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ.

ಇದನ್ನೂ ಓದಿ – ಸೇನೆ ಸೇರುವ ಆಸಕ್ತರಿಗೆ ಉಚಿತ ತರಬೇತಿ, ಅರ್ಜಿ ಆಹ್ವಾನ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಸಾಲ ಪಡೆದಿದ್ದ 27 ಮಹಿಳೆಯರಿಂದ ಪ್ರತಿ ತಿಂಗಳು ಸಾಲದ ಕಂತು ಹಣವನ್ನು ಈತ ವಸೂಲಿ ಮಾಡಿದ್ದ. ಆ ಹಣವನ್ನು ಸಂಸ್ಥೆಗೆ ಕಟ್ಟುವ ಬದಲು ಗೂಗಲ್‌ ಪೇ ಮೂಲಕ ತನ್ನ ಸ್ವಂತ ಬ್ಯಾಂಕ್‌ ಖಾತೆಗೆ ವರ್ಗಾಯಿಸಿಕೊಂಡಿದ್ದ ಎಂದು ಆರೋಪಿಸಲಾಗಿದೆ. 2023ರ ಜನವರಿ ತಿಂಗಳಿಂದ 92,525 ರೂ. ಹಣವನ್ನು ವಂಚಿಸಿದ್ದಾನೆ ಎಂದು ಆಪಾದಿಸಿ ಬ್ರಾಂಚ್‌ ಮ್ಯಾನೇಜರ್‌ ಶಫಿಉಲ್ಲಾ ಅವರು ದೂರು ನೀಡಿದ್ದಾರೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment