ಬಾರ್‌ ಅಂಡ್‌ ರೆಸ್ಟೋರೆಂಟ್‌ನಲ್ಲಿ ಕೈ ಕೈ ಮಿಲಾಯಿಸದ ಸ್ನೇಹಿತರು, ಬಿಯರ್‌ ಬಾಟಲಿಯಿಂದ ಒಬ್ಬನ ತಲೆಗೆ ಏಟು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಕ್ಷುಲಕ ಕಾರಣಕ್ಕೆ ಬಾರ್‌ ಅಂಡ್‌ ರೆಸ್ಟೋರೆಂಟ್‌ ಒಂದರಲ್ಲಿ ಸ್ನೇಹಿತರ ಮಧ್ಯೆ ಗಲಾಟೆಯಾಗಿ ಒಬ್ಬಾತನ ತಲೆಗೆ ಬಿಯರ್‌ ಬಾಟಲಿಯಿಂದ (Bottle) ಹೊಡೆಯಲಾಗಿದೆ. ಗಂಭೀರ ಗಾಯಗೊಂಡಿರುವ ಆತನನ್ನು ಶಿವಮೊಗ್ಗದ ಮೆಟ್ರೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ವಿಜಯ್‌ ಎಂಬಾತನಿಗೆ ಗಾಯವಾಗಿದೆ. ಆತನ ಸ್ನೇಹಿತರಾದ ಮಾರುತಿ ಮತ್ತು ರವಿಕುಮಾರ್‌ ಎಂಬುವವರ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಕುಡಿಯುಲು ಕುಳಿತರ ಮಧ್ಯೆ ಗಲಾಟೆ

ವಿಜಯ್‌, ಮಾರುತಿ, ರವಿಕುಮಾರ್‌ ಅವರು ಸ್ನೇಹಿತರೊಂದಿಗೆ ಸೋಮಿನಕೊಪ್ಪದ ಬಾರ್‌ ಅಂಡ್‌ ರೆಸ್ಟೋರೆಂಟ್‌ನಲ್ಲಿ ಮದ್ಯ ಸೇವಿಸಲು ತೆರಳಿದ್ದರು. ಈ ಸಂದರ್ಭ ಸ್ನೇಹಿತರ ಮಧ್ಯೆ ಕ್ಷುಲಕ ವಿಚಾರಕ್ಕೆ ಜಗಳವಾಗಿದೆ. ಆಗ ಮಾರತಿಯು ಬಿಯರ್‌ ಬಾಟಲಿಯಿಂದ ವಿಜಯ್‌ನ ತಲೆಗೆ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ.

Police-Jeep-in-Shimoga-city

ಇದನ್ನೂ ಓದಿ » ಕೋಟೆಗಂಗೂರು ದೇಗುಲದಲ್ಲಿ ಹುಂಡಿ ಒಡೆದು ಟವೆಲ್‌ನಲ್ಲಿ ಕಾಣಿಕೆ ಹಣ ಸುತ್ತಿಕೊಂಡು ಹೋದ ಖದೀಮರು

ವಿಜಯ್‌ನನ್ನು ಕೂಡಲೆ ಮೆಗ್ಗಾನ್‌ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರಿಂದ ಆತನನ್ನು ಶಿವಮೊಗ್ಗದ ಮೆಟ್ರೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment