ಸೋಮಿನಕೊಪ್ಪದಲ್ಲಿ ವಿದ್ಯುತ್‌ ಶಾಕ್‌ಗೆ ಕಾರ್ಮಿಕ ಸಾವು, ಹೇಗಾಯ್ತು ಘಟನೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಕಟ್ಟಡಕ್ಕೆ ಕಬ್ಬಿಣದ ರಾಡ್‌ಗಳನ್ನು ಎಳೆಯುವಾಗ ಪಕ್ಕದಲ್ಲಿ ಹಾದು ಹೊಗಿದ್ದ ವಯರ್‌ ತಗುಲಿ ವಿದ್ಯುತ್‌ ಶಾಕ್‌ಗೆ (electrocution) ಕಾರ್ಮಿಕ ಸಾವನ್ನಪ್ಪಿದ್ದಾನೆ. ಸೋಮಿನಕೊಪ್ಪದ ನಿವಾಸಿ ನಿಜಾಮುಲ್‌ ಹಕ್‌ (32) ಮೃತ ವ್ಯಕ್ತಿ.

Arya-PU-College-Shimoga.

ಜೆ.ಹೆಚ್‌.ಪಟೇಲ್‌ ಬಡಾವಣೆಯ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸಕ್ಕೆ ನಿಜಾಮುಲ್‌ ಹಕ್‌ ತೆರಳಿದ್ದರು. ನೆಲದಿಂದ ಎರಡನೇ ಮಹಡಿಗೆ ಕಬ್ಬಿಣದ ರಾಡ್‌ಗಳನ್ನು ಎಳೆಯುವಾಗ ಪಕ್ಕದಲ್ಲಿ ಹಾದು ಹೋಗಿದ್ದ ವಿದ್ಯುತ್‌ ತಂತಿಗೆ ಕಬ್ಬಿಣದ ರಾಡ್‌ ತಗುಲಿದೆ. ವಿದ್ಯುತ್ ಪ್ರವಹಿಸಿ ನಿಜಾಮುಲ್‌ ಹಕ್‌ ಅವರಿಗೆ ಶಾಕ್‌ ತಗುಲಿತ್ತು.

ಕೂಡಲೆ ಅವರನ್ನು ಮೆಗ್ಗಾನ್‌ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಈ ವೇಳೆಗಾಗಲೆ ಅವರು ಮೃತಪಟ್ಟಿದ್ದರು. ಘಟನೆ ಸಂಬಂಧ ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ನಿರ್ಮಾಣ ಹಂತದ ಸರ್ಕಾರಿ ನೌಕರರ ಭವನಕ್ಕೆ ಮಧ್ಯಾಹ್ನ ಬಂದ ಸೂಪರ್‌ವೈಸರ್‌ಗೆ ಕಾದಿತ್ತು ಶಾಕ್‌, ಆಗಿದ್ದೇನು?

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment