ಖಾಸಗಿ ಬಸ್‌, ಕಾರು ಮುಖಾಮುಖಿ ಡಿಕ್ಕಿ, ಕಾರಿನ ಮುಂಭಾಗ ನಜ್ಜುಗುಜ್ಜು

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಸಾಗರ: ಖಾಸಗಿ ಬಸ್‌ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿದ್ದು (Mishap) ಇಬ್ಬರು ಗಾಯಗೊಂಡಿದ್ದಾರೆ. ಆನಂದಪುರ ಸಮೀಪದ ಮುಂಬಾಳುವಿನಲ್ಲಿ ಇಂದು ಸಂಜೆ ಘಟನೆ ಸಂಭವಿಸಿದೆ.

ಇದನ್ನೂ ಓದಿ » ಮೂರು ಬೇಡಿಕೆ ಈಡೇರದಿದ್ದರೆ ಅಹೋರಾತ್ರಿ ಹೋರಾಟ, ಸರ್ಕಾರಕ್ಕೆ ಒಕ್ಕೂಟದ ಎಚ್ಚರಿಕೆ

ಕೆರೆ ಏರಿ ಮೇಲೆ ಅಪಘಾತ ಸಂಭವಿಸಿದ್ದು ಕಾರಿನ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಶರತ್‌ ಮತ್ತು ಭರತ್‌ ಎಂಬುವವರಿಗೆ ಗಾಯವಾಗಿದೆ. ಬಸ್ಸಿನ ಮುಂಭಾಗಕ್ಕು ಹಾನಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಕೆರೆಯ ತಡೆಗೋಡೆ ಮೇಲೆ ನಿಂತಿದೆ. ಬಸ್ಸು ರಸ್ತೆಯ ಬದಿಗೆ ಸರಿದಿದೆ.

ಖಾಸಗಿ ಬಸ್ಸು ಸಾಗರದಿಂದ ಶಿವಮೊಗ್ಗ ಕಡೆಗೆ ತೆರಳುತಿತ್ತು. ಕಾರು ಸಾಗರದ ದಿಕ್ಕಿಗೆ ಹೋಗುತಿತ್ತು. ಘಟನೆ ಸ್ಥಳಕ್ಕೆ ಆನಂದಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

Prakash-Bus-and-Car-mishap-at-anandapura

Prakash-Bus-and-Car-mishap-at-anandapura

Prakash-Bus-and-Car-mishap-at-anandapura

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment