ಮೊದಲಿಗೆ ಬ್ಯಾಂಕ್‌ನಲ್ಲಿದ್ದ ಹಣ ಹೋಯ್ತು, ಮರುಕ್ಷಣ ಮೊಬೈಲ್‌ನಲ್ಲಿದ್ದ ಎಲ್ಲವು ಖಾಲಿಯಾಯ್ತು, ಕಂಗಾಲದ ರೈತ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

HOLEHONNURU, 5 AUGUST 2024 : ಬ್ಯಾಂಕ್‌ ಒಂದರ ಹೆಸರಿನಲ್ಲಿ ವಾಟ್ಸಪ್‌ನಲ್ಲಿ ಬಂದ ಲಿಂಕ್‌ ಕ್ಲಿಕ್‌ ಮಾಡಿದ ರೈತರೊಬ್ಬರ ಮೊಬೈಲ್‌ ಹ್ಯಾಕ್‌ (Hacked) ಮಾಡಲಾಗಿದೆ. ಹ್ಯಾಕರ್‌ಗಳು ಬ್ಯಾಂಕಿನಲ್ಲಿದ್ದ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ. ಮೊಬೈಲ್‌ನಲ್ಲಿದ್ದ ಡೇಟಾ ಸಂಪೂರ್ಣ ಡಿಲೀಟ್‌ ಆಗಿದೆ.

ಆಗರದಹಳ್ಳಿ ಕ್ಯಾಂಪ್‌ನ ರಾಮಾಂಜನೇಯ ಎಂಬುವವರು ಬ್ಯಾಂಕ್‌ ಒಂದರಲ್ಲಿ ಖಾತೆ ಹೊಂದಿದ್ದಾರೆ. ಅದೇ ಬ್ಯಾಂಕಿನ ಹೆಸರಿನಲ್ಲಿ ಬಂದ ವಾಟ್ಸಪ್‌ ಮೆಸೇಜ್‌ ಬಂದಿದ್ದು, ಅದರಲ್ಲಿದ್ದ ಲಿಂಕ್‌ ಅನ್ನು ರಾಮಾಂಜನೇಯ ಕ್ಲಿಕ್‌ ಮಾಡಿದ್ದರು. ಕೆಲವೇ ಕ್ಷಣದಲ್ಲಿ ವಾಟ್ಸಪ್‌ ಹ್ಯಾಕ್‌ ಆಗಿತ್ತು. ಸ್ವಲ್ಪ ಹೊತ್ತಿಗೆ ವ್ಯಕ್ತಿಯೊಬ್ಬ ಕರೆ ಮಾಡಿ, ಆಧಾರ್‌ ಕಾರ್ಡ್‌ ಅಪ್‌ಡೇಟ್‌ ಮಾಡಬೇಕು ಮತ್ತು ಒಟಿಪಿ ಕೊಡಬೇಕು ಎಂದು ತಿಳಿಸಿದ್ದ. ರಾಮಾಂಜನೇಯ ಅವರು ಒಟಿಪಿ ಕೊಡಲು ನಿರಾಕರಿಸಿದ್ದರು.

Online-Fraud-In-Shimoga

ಮರುದಿನ ರಾಮಾಂಜನೇಯ ಅವರ ಬ್ಯಾಂಕ್‌ ಖಾತೆಯಿಂದ 5 ಸಾವಿರ ರೂ.ನಂತೆ 20 ಬಾರಿ ಹಣ ಕಡಿತವಾಗಿದೆ. ಒಟ್ಟು ಒಂದು ಲಕ್ಷ ರೂ. ಹಣ ನಾಪತ್ತೆಯಾಗಿದೆ. ಆಮೇಲೆ ಮೊಬೈಲ್‌ ಹ್ಯಾಕ್‌ ಆಗಿದ್ದು, ಅದರಲ್ಲಿದ್ದ ಎಲ್ಲವು ಡಿಲೀಟ್‌ ಆಗಿದೆ. ಈ ಸಂಬಂಧ ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ ⇓

ಶಿವಮೊಗ್ಗದ ಇನ್ಷುರೆನ್ಸ್‌ ಕಂಪನಿಯ ಏರಿಯಾ ಮ್ಯಾನೇಜರ್‌ಗೆ 23 ಲಕ್ಷ‌ ರೂ. ವಂಚನೆ, ಮೋಸ ಹೋಗಿದ್ದು ಹೇಗೆ?

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment