ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 14 MARCH 2024
THIRTHAHALLI : ಬಸ್ಸಿನ ಸೀಟಿನ ಮೇಲಿಟ್ಟಿದ್ದ ಹಣದ ಬ್ಯಾಗ್ ಕಳ್ಳತನವಾಗಿದೆ. ಆಗುಂಬೆಯ ಹೊಟೇಲ್ ಒಂದರ ಬಳಿ ಘಟನೆ ಸಂಭವಿಸಿದೆ. 31.72 ಲಕ್ಷ ರೂ. ಹಣ ಕಳುವಾಗಿದೆ ಎಂದು ಆರೋಪಿಸಲಾಗಿದೆ.
ಶ್ಯಾಮ್ ಎಂಬುವವರು ಫೆ.19ರಂದು ಶಿವಮೊಗ್ಗದಿಂದ ಮಂಗಳೂರಿನ ಚಿನ್ನಾಭರಣ ಅಂಗಡಿಯೊಂದಕ್ಕೆ ಹಣ ಕೊಂಡೊಯ್ಯುತ್ತಿದ್ದರು. ಆಗುಂಬೆ ನಿಲ್ದಾಣದ ಹಣದ ಬ್ಯಾಗ್ ಅನ್ನು ಬಸ್ಸಿನ ಸೀಟಿನ ಮೇಲಿಟ್ಟು ಹೊಟೇಲ್ನಲ್ಲಿ ಟೀ ಕುಡಿಯಲು ತೆರಳಿದ್ದರು. ಮರಳಿ ಬಂದಾಗ ಬ್ಯಾಗ್ ನಾಪತ್ತೆಯಾಗಿತ್ತು.
ಶಿವಮೊಗ್ಗದ ರಾಜೇಶ್ ಎಂಬುವವರು ಶ್ಯಾಮ್ ಅವರಿಗೆ ಹಣ ಕೊಟ್ಟು ಕಳುಹಿಸಿದ್ದರು. ಡಿಸೆಂಬರ್ ತಿಂಗಳಲ್ಲಿ ರಾಜೇಶ್ ಅವರ ಕುಟುಂಬ ಸದಸ್ಯರ ಮದುವೆ ನಿಶ್ಚಿಯವಾಗಿತ್ತು. ಹಾಗಾಗಿ ಮದುಮಗ ಮತ್ತು ಕುಟುಂಬದವರಿಗೆ ಒಡವೆ ಖರೀದಿಗೆ 31.72 ಲಕ್ಷ ರೂ. ಹಣವನ್ನು ಮಂಗಳೂರಿನ ಚಿನ್ನಾಭರಣ ಅಂಗಡಿಗೆ ಕಳುಹಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಕೂಡಲೆ ಆಗುಂಬೆಗೆ ತೆರಳಿದ ರಾಜೇಶ್ ಎಲ್ಲೆಡೆ ಹುಡುಕಿದರು. ಬಳಿಕ ಘಟನೆ ಸಂಬಂಧ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ನ್ಯಾಯಾಲಯದ ಸೂಚನೆ ಮೇರೆಗೆ ಈಗ ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಹೇಳದೆ, ಕೇಳದೆ ಕೆರೆಯಿಂದ ಮಣ್ಣು ತೆಗೆದು ಸಾಗಣೆ, ಪಿಡಿಓ ದೂರು
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422