ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 15 NOVEMBER 2024 : ದ್ವಿಚಕ್ರ ವಾಹನದ ಡಿಕ್ಕಿಯಲ್ಲಿ ಇಟ್ಟಿದ್ದ 1.20 ಲಕ್ಷ ರೂ. ನಗದು ಕಳ್ಳತನವಾಗಿದೆ. ಶಿವಮೊಗ್ಗದ ಬಿ.ಹೆಚ್.ರಸ್ತೆಯಲ್ಲಿರುವ ಬಜಾಜ್ ಫೈನಾನ್ಸ್ (finance) ಸಂಸ್ಥೆಯಲ್ಲಿ ಮುಂಭಾಗ ಘಟನೆ ನಡೆದಿದೆ.
ಬಜಾಜ್ ಫೈನಾನ್ಸ್ ಸಂಸ್ಥೆಯ ಉದ್ಯೋಗಿ ಪದ್ಮನಾಭ ಎಂಬುವವರು ತಮ್ಮ ದ್ವಿಚಕ್ರ ವಾಹನದ ಡಿಕ್ಕಿಯಲ್ಲಿ ಇಟ್ಟಿದ್ದ ಹಣ ಕಳುವಾಗಿದೆ ಎಂದು ಆರೋಪಿಸಲಾಗಿದೆ. ಬ್ಯಾಂಕ್ಗೆ ಕಟ್ಟಲು ಪದ್ಮನಾಭ ಅವರ ಸಹೋದರಿ ಹಣ ನೀಡಿದ್ದರು. ಅದನ್ನು ಬೈಕ್ ಡಿಕ್ಕಿಯಲ್ಲಿ ಇರಿಸಿಕೊಂಡು ಪದ್ಮನಾಭ ಅವರು ಕಚೇರಿಗೆ ತೆರಳಿದ್ದರು.
ಇದನ್ನೂ ಓದಿ » ಸರ್ಕಾರಿ ನೌಕರರ ಸಂಘ, ನಾಳೆ ಮತದಾನ, ಅಭ್ಯರ್ಥಿಗಳಿಗೆ ಢವಢವ
ಸ್ವಲ್ಪ ಸಮಯದ ಬಳಿಕ ಕಚೇರಿಯಿಂದ ಬೈಕ್ ಬಳಿ ಬಂದು ಡಿಕ್ಕಿ ತೆರೆದಾಗ ಹಣ ಇರಲಿಲ್ಲ. ಘಟನೆ ಸಂಬಂಧ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422