ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 1 DECEMBER 2024
ಶಿವಮೊಗ್ಗ : ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನಿಂದ (BAG) ಕಂತೆ ಕಂತೆ ಹಣ ಕಳ್ಳತನ ಮಾಡಲಾಗಿದೆ. ಮನೆ ಕಟ್ಟಲು ಬ್ಯಾಂಕ್‌ನಿಂದ ಹಣ ಬಿಡಿಸಿಕೊಂಡು ಚನ್ನಗಿರಿಯ ತಮ್ಮೂರಿಗೆ ಕೊಂಡೊಯ್ಯುತ್ತಿರುವಾಗ ಘಟನೆ ಸಂಭವಿಸಿದೆ.
ಚನ್ನಗಿರಿಯ ಚಿಕ್ಕಮ್ಮ ಎಂಬುವವರಿಗೆ ಸೇರಿದ 1.50 ಲಕ್ಷ ರೂ. ಹಣ ಕಳುವಾಗಿದೆ ಎಂದು ಆರೋಪಿಸಲಾಗಿದೆ. ಚಿಕ್ಕಮ್ಮ ಅವರ ವ್ಯಾನಿಟಿ ಬ್ಯಾಗಿನಲ್ಲಿ 2.19 ಲಕ್ಷ ರೂ. ಹಣವಿತ್ತು.
ಘಟನೆ ಸಂಭವಿಸಿದ್ದು ಹೇಗೆ?
ಚಿಕ್ಕಮ್ಮ ಚನ್ನಗಿರಿಯಲ್ಲಿ ಮನೆ ಕಟ್ಟಸುವ ಸಲುವಾಗಿ ತಾವು ಉಳಿತಾಯ ಮಾಡಿದ್ದ ಹಣವನ್ನು ಶಿವಮೊಗ್ಗದ ಬ್ಯಾಂಕಿನಲ್ಲಿ ಬಿಡಿಸಿಕಂಡಿದ್ದರು. ಇದಕ್ಕಾಗಿ ತಮ್ಮ ಪುತ್ರನೊಂದಿಗೆ ಚನ್ನಗಿರಿಯಿಂದ ಶಿವಮೊಗ್ಗಕ್ಕೆ ಬಂದಿದ್ದರು. ಹಣ ಬಿಡಿಸಿಕೊಂಡು ಇಬ್ಬರು ಖಾಸಗಿ ಬಸ್ಸಿನಲ್ಲಿ ಚನ್ನಗಿರಿಗೆ ತೆರಳುತ್ತಿದ್ದರು. ಬಸ್ಸು ಹೊಳೆಬೆನವಳ್ಳಿ ಬಳಿ ಹೋಗುತ್ತಿದ್ದಾಗ ಚಿಕ್ಕಮ್ಮ ವ್ಯಾನಿಟಿ ಬ್ಯಾಗ್ ಪರಿಶೀಲಿಸಿದಾಗ ಮೂರು ಕಂತೆ ಹಣ ನಾಪತ್ತೆಯಾಗಿತ್ತು.
ಇದನ್ನೂ ಓದಿ » ಸಭೆಯಲ್ಲಿ ದಿಢೀರ್ ಅಸ್ವಸ್ಥರಾದ IAS ಅಧಿಕಾರಿ, ತಕ್ಷಣ ಆರೈಕೆ ಮಾಡಿದ ಡಾ.ಸರ್ಜಿ
ಕುಟುಂಬದವರಿಗೆ ವಿಷಯ ತಿಳಿಸಿದ ಬಳಿಕ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422