ಸಭೆಯಲ್ಲಿ ದಿಢೀರ್‌ ಅಸ್ವಸ್ಥರಾದ IAS ಅಧಿಕಾರಿ, ತಕ್ಷಣ ಆರೈಕೆ ಮಾಡಿದ ಡಾ.ಸರ್ಜಿ

SHIVAMOGGA LIVE NEWS | 30 NOVEMBER 2024

ಶಿವಮೊಗ್ಗ : ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ವೇಳೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ ದಿಢೀರ್‌ ಅಸ್ವಸ್ಥರಾಗಿದ್ದಾರೆ (Ill). ತಕ್ಷಣ ನೆರವಿಗೆ ಧಾವಿಸಿದ ವಿಧಾನ ಪರಿಷತ್‌ ಸದಸ್ಯ ಡಾ. ಧನಂಜಯ ಸರ್ಜಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಟರಾಜ್‌ ಆರೈಕೆ ಮಾಡಿದರು.

ಜಿಲ್ಲಾ ಪಂಚಾಯಿತಿಯ ಅಬ್ದುಲ್‌ ನಜೀರ್‌ ಸಾಬ್‌ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ಆಯೋಜಿಸಲಾಗಿತ್ತು. ಸಭೆ ಮಧ್ಯೆ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ ಅಸ್ವಸ್ಥರಾದರು. ವೇದಿಕೆ ಮೇಲಿದ್ದ ಸಚಿವ ಮಧು ಬಂಗಾರಪ್ಪ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೇರಿದಂತೆ ಅಧಿಕಾರಿಗಳು ಕಾವೇರಿ ಅವರ ನೆರವಿಗೆ ಧಾವಿಸಿದರು.

IAS-officer-BB-Kaveri-ill-during-ZP-KDP-Meeting

ವೇದಿಕೆ ಮುಂಭಾಗ ಕುಳಿತಿದ್ದ ವಿಧಾನ ಪರಿಷತ್‌ ಸದಸ್ಯ ಡಾ. ಧನಂಜಯ ಸರ್ಜಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಟರಾಜ್‌ ತಕ್ಷಣ ನೆರವಿಗೆ ಧಾವಿಸಿದರು. ಸಭಾಂಗಣದಿಂದ ಹೊರಗೆ ತೆರಳಲು ಎದ್ದು ನಿಂತ ಬಿ.ಬಿ.ಕಾವೇರಿ ಅವರಿಗೆ ಕೆಲವು ಕ್ಷಣ ಅಲ್ಲಿಯೇ ಕೂರುವಂತೆ ಸಲಹೆ ನೀಡಿದರು. ಸುಧಾರಿಸಕೊಂಡ ಕಾವೇರಿ ಅವರನ್ನು ಸಭಾಂಗಣದಿಂದ ಹೊರಗೆ ಕೊರೆದೊಯ್ಯಲಾಯಿತು.

ಇದನ್ನೂ ಓದಿ » ಶಿವಮೊಗ್ಗ ಪಾಲಿಕೆಗೆ ಮಿನಿಸ್ಟರ್‌ ದಿಢೀರ್‌ ಭೇಟಿ, ಅಧಿಕಾರಿ ಸಸ್ಪೆಂಡ್‌

ಕೆಲವು ನಿಮಿಷದ ಬಳಿಕ ಜಿಲಾಧಿಕಾರಿ ಗುರುದತ್ತ ಹೆಗಡೆ ಸಭಾಂಗಣಕ್ಕೆ ಹಿಂತಿರುಗಿ, ಕಾವೇರಿ ಅವರ ಕ್ಷೇಮವಾಗಿದ್ದಾರೆ ಎಂದು ತಿಳಿಸಿದರು. ಇದೇ ವೇಳೆ ಡಾ. ಧನಂಜಯ ಸರ್ಜಿ ಅವರ ಕರ್ತವ್ಯ ಪ್ರಜ್ಞೆಗೆ ಮೆಚ್ಚುಗೆ ವ್ಯಕ್ತವಾಯಿತು.

ಚಿತ್ರದ ವಿವರಣೆ
Shaki Toyota, Shivamogga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : November 30, 2024 at 4:36 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ನವೆಂಬರ್ 30, 2024

Leave a Comment