ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 15 MAY 2024
SHIMOGA : ಗೂಡ್ಸ್ ವಾಹನದ ಡ್ಯಾಶ್ ಬೋರ್ಡ್‌ನಲ್ಲಿ ಇಟ್ಟಿದ್ದ 1.50 ಲಕ್ಷ ರೂ. ಹಣವನ್ನು (Money) ವ್ಯಕ್ತಿಯೊಬ್ಬ ಕಳ್ಳತನ ಮಾಡಿದ್ದಾನೆ. ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶಿವಮೊಗ್ಗದ ಸವಾರ್‌ಲೈನ್ ರಸ್ತೆಯಲ್ಲಿರುವ ವಿಆರ್‌ಎಲ್ ಕಚೇರಿ ಆವರಣದಲ್ಲಿ ಘಟನೆ ಸಂಭವಿಸಿದೆ.
ಪರಿಚಿತ ಅಂತಾ ಮಾತಾಡಿಸಿದ್ದೆ ತಪ್ಪಾಯ್ತಾ?
ಕೋಣಂದೂರಿನ ತಿಮ್ಮಪ್ಪ ಎಂಬುವವರು ಗೂಡ್ಸ್ ವಾಹನದಲ್ಲಿ ಶಿವಮೊಗ್ಗದಿಂದ ಕೋಣಂದೂರಿಗೆ ಪಾರ್ಸಲ್ ಕೊಂಡೊಯ್ಯುವ ವ್ಯವಹಾರ ನಡೆಸುತ್ತಿದ್ದಾರೆ. ಮೇ 9ರಂದು ವಿಆರ್‌ಎಲ್ ಸಂಸ್ಥೆಯಲ್ಲಿ ಪಾರ್ಸಲ್ ಕೊಂಡೊಯ್ಯಲು ಬಂದಿದ್ದರು. ಈ ಸಂದರ್ಭ ನರಸಿಂಹಮೂರ್ತಿ ಎಂಬಾತ ಸಿಕ್ಕಿದ್ದು, ಆತನೊಂದಿಗೆ ಮಾತನಾಡಿದ್ದಾರೆ. ತಿಮ್ಮಪ್ಪ ವಿಆರ್‌ಎಲ್ ಕಚೇರಿ ಒಳ ಹೋದಾಗ ನರಸಿಂಹಮೂರ್ತಿ ವಾಹನದ ಡ್ಯಾಶ್ ಬೋರ್ಡ್‌ನಲ್ಲಿದ್ದ 1.50 ಲಕ್ಷ ರೂ. ಹಣ ಕಳ್ಳತನ ಮಾಡಿದ್ದ.
ಹಣ ಕಳವು ಗೊತ್ತಾಗಿದ್ದು ಹೇಗೆ?
ಕೋಣಂದೂರಿನ ಫ್ಯಾನ್ಸಿ ಅಂಗಡಿಯೊಂದರ ಮಾಲೀಕ ಗಾಂಧಿ ಬಜಾರ್‌ನಲ್ಲಿ ಒಂದಷ್ಟು ವಸ್ತುಗಳನ್ನು ತರಲು ತಿಮ್ಮಪ್ಪ ಅವರಿಗೆ ಆ ಹಣ ನೀಡಿದ್ದರು. ತಿಮ್ಮಪ್ಪ ಅವರು ವಿಆರ್‌ಎಲ್‌ನಲ್ಲಿ ಪಾರ್ಸಲ್ ತೆಗೆದುಕೊಂಡು ಗಾಂಧಿ ಬಜಾರ್‌ಗೆ ತೆರಳಿ ಹೋಲ್ ಸೇಲ್ ವ್ಯಾಪಾರಿಗೆ ಹಣ ನೀಡಲು ಡ್ಯಾಶ್ ಬೋರ್ಡ್ ತೆಗೆದಾಗ ಹಣ ನಾಪತ್ತೆಯಾಗಿತ್ತು. ವಿಆರ್‌ಎಲ್ ಕಚೇರಿಗೆ ಹಿಂತಿರುಗಿ ಮ್ಯಾನೇಜರ್‌ಗೆ ತಿಳಿಸಿ ಸಿಸಿಟಿವಿ ಪರಿಶೀಲಿಸಿದಾಗ ನರಸಿಂಹಮೂರ್ತಿ ಕಳ್ಳತನ ಮಾಡಿರುವುದು ಗೊತ್ತಾಗಿದೆ.
ನರಸಿಂಹಮೂರ್ತಿಗೆ ಕರೆ ಮಾಡಿದ ವಿಆರ್‌ಎಲ್ ಮ್ಯಾನೇಜರ್ ಹಣ ಹಿಂತಿರುಗಿಸುವಂತೆ ಸೂಚಿಸಿದ್ದಾರೆ. ಆದರೆ ಆತ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ‘ಅಮೃತಧಾರೆ’ ಆರಂಭ, ಏನಿದು? ಉದ್ದೇಶವೇನು?
LATEST NEWS
- ನಾಳೆಯಿಂದ ಶಿವಮೊಗ್ಗದ ಶೇ.90ರಷ್ಟು ಹೊಟೇಲ್ಗಳು ಬಂದ್, ಕಾರಣವೇನು?

- ಭದ್ರಾವತಿ ಹುತ್ತಾ ಕಾಲೋನಿಯಲ್ಲಿ ಬೈಕ್ ಸಹಿತ ಚಾನಲ್ಗೆ ಬಿದ್ದ ವ್ಯಕ್ತಿ, ಆಗಿದ್ದೇನು?

- ಗೋಪಿ ಸರ್ಕಲ್ನಲ್ಲಿ ಡೊನಾಲ್ಡ್ ಟ್ರಂಪ್ ಹೇಳಿದಂತೆ ನರೇಂದ್ರ ಮೋದಿ ಡಾನ್ಸ್, ಸೌದೆ ಒಲೆ ಅಡುಗೆ

- ಶಿವಮೊಗ್ಗ ಜಿಲ್ಲೆಯ ಕಡಿಮೆಯಾದ ತಾಪಮಾನ, ಇವತ್ತು ಎಲ್ಲೆಲ್ಲಿ ಹೇಗಿರಲಿದೆ ವಾತಾವರಣ?

- ಶಿವಮೊಗ್ಗದ ಸೂಳೆಬೈಲ್ ಮಹಿಳೆ ಅರೆಸ್ಟ್, ₹18,00,000 ಮೊತ್ತದ ಆಭರಣ ಸೀಜ್, ಏನಿದು ಕೇಸ್?

About The Editor
ನಿತಿನ್ ಆರ್.ಕೈದೊಟ್ಲು





