ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 20 NOVEMBER 2023
ಗುಂಡನ ವಿರುದ್ಧ ಮತ್ತೆ ಐದು ಪ್ರಕರಣ ದಾಖಲು
SHIMOGA : ಕಾರು ಪಡೆದು ಹಿಂತಿರುಗಿಸದೆ ವಂಚಿಸಿದ್ದ ಕಿರಣ್ ಕುಮಾರ್ ಅಲಿಯಾಸ್ ಗುಂಡನ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಮೂರನೆ ಪ್ರಕರಣ ದಾಖಲಾಗಿದೆ. ಕಿರಣ್ ಕುಮಾರ್, ತೀರ್ಥಹಳ್ಳಿಯ ಅಮರ್ ಅಣ್ಣಪ್ಪ ಶಿಂಧೆ ಅವರ ಸುಜುಕಿ ಎರ್ಟಿಗ ಕಾರನ್ನ ಬಾಡಿಗೆಗೆ ಪಡೆದಿದ್ದ. ಆ.28ರಂದು ಕಾರು ಪಡೆದು ಹಿಂತಿರುಗಿಸಿರಲಿಲ್ಲ. ಅಲ್ಲದೆ ಕಾರಿನ ಬಾಡಿಗೆಯನ್ನು ಕೊಟ್ಟಿರಲಿಲ್ಲ. ಇದೇ ರೀತಿ ಗೋಪಾಳದ ಶಿವಕುಮಾರ್ ಅವರ ಸ್ವಿಫ್ಟ್ ಡಿಸೈರ್, ಚೋರಡಿಯ ನಿತಿನ್ ಮರಡಿ ಅವರ ಮಾರುತಿ ಎರ್ಟಿಗ, ಶೆಟ್ಟಿಹಳ್ಳಿ ಮೇಘರಾಜ್ ಅವರ ಸುಜೂಕಿ ಎರ್ಟಿಗ, ನಾಗಿತಬೆಳಗಲು ತಾಂಡದ ಶಿವಕುಮಾರ್ ಎರ್ಟಿಗ ಕಾರನ್ನು ಬಾಡಿಗೆಗೆ ಪಡೆದು ಹಿಂತಿರುಗಿಸದೆ ವಂಚಿಸಿದ್ದರು. ಈಚೆಗೆ ಪ್ರಕರಣವೊಂದರ ತನಿಖೆ ನಡೆಸಿದ್ದ ಪೊಲೀಸರು 8 ಕಾರುಗಳ ಸಹಿತ ಆರೋಪಿಯನ್ನು ಬಂಧಿಸಿದ್ದರು.
ಬಿ.ಹೆಚ್.ರಸ್ತೆಯಲ್ಲಿ ಬೈಕ್ ಕಳ್ಳತನ
SHIMOGA : ಬಿ.ಹೆಚ್.ರಸ್ತೆಯಲ್ಲಿರುವ ಮಹಾನಗರ ಪಾಲಿಕೆ ಗೇಟ್ ಮುಂಭಾಗ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳ್ಳತನವಾಗಿದೆ. ಇಲ್ಲಿನ ಮಂಜುನಾಥ ಸ್ವಾಮಿ ಫ್ರೈಡ್ ಗ್ರಾಂ ಇಂಡಸ್ಟ್ರೀಸ್‌ನ ರಾಕೇಶ್ ಎಂಬುವವರು ತಮ್ಮ ಬೈಕ್ ಅನ್ನು ಎಂದಿನಂತೆ ಬಿ.ಹೆಚ್.ರಸ್ತೆಯಲ್ಲಿ ನಿಲ್ಲಿಸಿದ್ದರು. ಮಧ್ಯಾಹ್ನ ಕೆಲಸ ಮುಗಿಸಿ ಮನೆಗೆ ಊಟಕ್ಕೆ ತೆರಳಲು ವಾಹನದ ನಿಲ್ಲಿಸಿದ್ದ ಸ್ಥಳಕ್ಕೆ ಬಂದಾಗ ನಾಪತ್ತೆಯಾಗಿತ್ತು. ಎಲ್ಲಡೆ ಹುಡುಕಿದ ರಾಕೇಶ್ ಅವರು ನಂತರ ಕೋಟೆ ಠಾಣೆಯಲ್ಲಿ ದೂರು ನೀಡಿದ್ದಾರೆ.
ಟಿಪ್ಪು ನಗರದಲ್ಲಿ ಇಬ್ಬರು ವಶಕ್ಕೆ, ಕೇಸ್
SHIMOGA : ಟಿಪ್ಪುನಗರದಲ್ಲಿ ಪೊಲೀಸರು ಗಸ್ತು ತಿರುಗುವ ವೇಳೆ ಮುಬಾರಕ್ ಮತ್ತು ಫರೀವಿಜ್ ಎಂಬುವವರು ಅನುಮಾನಾಸ್ಪವದಾಗಿ ವರ್ತಿಸುತ್ತಿದ್ದರು. ಇಬ್ಬರನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಗಾಂಜಾ ಸೇವನೆ ದೃಢವಾದ ಹಿನ್ನಲೆ ಇಬ್ಬರನ್ನು ಬಂಧಿಸಲಾಗಿದೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಕೆರೆಗೆ ನುಗ್ಗಿ ಅರ್ಧ ಮುಳುಗಿದ ಕಾರು, ಅದೃಷ್ಟವಶಾತ್ ದಂಪತಿ, ಮಗಳು ಪಾರು, ಹೇಗಾಯ್ತು ಘಟನೆ?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422