ಗಿಫ್ಟ್‌ ಆಸೆಗೆ ತಾಯಿ, ಮಗಳು ಕಳೆದುಕೊಂಡರು ಲಕ್ಷ ಲಕ್ಷ ಹಣ, ಏನಿದು ಪ್ರಕರಣ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ನೈಜೀರಿಯ ದೇಶದಿಂದ ಗಿಫ್ಟ್‌ ಬಂದಿದೆ. ಇದನ್ನು ಪಡೆಯಲು ಸರ್ವಿಸ್‌ ಟ್ಯಾಕ್ಸ್‌ ಕಟ್ಟಬೇಕು ಎಂದು ನಂಬಿಸಿ ತಾಯಿ ಮತ್ತು ಮಗಳಿಗೆ ಲಕ್ಷಾಂತರ ರುಪಾಯಿ ವಂಚಿಸಲಾಗಿದೆ (Cheated).

ಸೆಪ್ಟೆಂಬರ್‌ 26ರಂದು ಕರೆ ಮಾಡಿದ ವ್ಯಕ್ತಿಯೊಬ್ಬ, ತನ್ನನ್ನು ಮುಂಬೈ ಕಸ್ಟಮ್ಸ್‌ ಇಲಾಖೆ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ನೈಜೀರಿಯಾದಿಂದ ಗಿಫ್ಟ್‌ ಬಂದಿದೆ. ಅದನ್ನು ಪಡೆಯಲು ಸರ್ವಿಸ್‌ ಟ್ಯಾಕ್ಸ್‌ ಕಟ್ಟಬೇಕು ಎಂದು ನಂಬಿಸಿದ್ದ.

ವಂಚಕ ಸೂಚಿಸಿದ ವಿವಿಧ ಬ್ಯಾಂಕ್‌ ಖಾತೆಗಳಿಗೆ ತಾಯಿ ಮತ್ತು ಮಗಳು ಹಣ ವರ್ಗಾಯಿಸಿದ್ದಾರೆ. ಒಟ್ಟು ₹2,80,590 ಹಣ ವರ್ಗಾವಣೆ ಮಾಡಿದ್ದರು. ಆದರೆ ಇನ್ನೂ ₹2.95 ಲಕ್ಷ ವರ್ಗಾಯಿಸಬೇಕು ಎಂದು ಆತ ತಿಳಿಸಿದ್ದ. ಅನುಮಾನಗೊಂಡ ತಾಯಿ ಮತ್ತು ಮಗಳು ನೆರೆಹೊರೆಯಲ್ಲಿ ವಿಚಾರಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮೋಸ ಹೋಗಿರುವುದು ಅರಿವಾದ ಹಿನ್ನೆಲೆ ದೂರು ನೀಡಿದ್ದಾರೆ. ಸಿ.ಇ.ಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಶಿವಮೊಗ್ಗದ ಕೇಕ್‌ ತಯಾರಿಕಾ ಘಟಕಗಳ ಮೇಲೆ ದಾಳಿ, ಏನೇನೆಲ್ಲ ಸಿಕ್ತು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment