ಶಿವಮೊಗ್ಗದಲ್ಲಿ ಮತ್ತೊಂದು ಬಾಡಿಗೆ ಬ್ಯಾಂಕ್‌ ಖಾತೆ ಕೇಸ್‌, ನಿಮ್ಮ ಅಕೌಂಟ್‌ ಸೇಫ್‌ ಇದ್ಯಾ?

Published On : ಫೆಬ್ರವರಿ 11, 2026

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ: ಬಾಡಿಗೆ ಬ್ಯಾಂಕ್‌ ಖಾತೆ (Bank Account) ಹಗರಣ ಸಂಬಂಧ ಶಿವಮೊಗ್ಗದಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಕಮಿಷನ್ ಆಸೆ ತೋರಿಸಿ ಯುವಕನ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು, ಅದನ್ನು ಸೈಬರ್ ವಂಚನೆಗೆ ಬಳಸಿಕೊಂಡ ವ್ಯಕ್ತಿಯ ವಿರುದ್ಧ ಶಿವಮೊಗ್ಗದಲ್ಲಿ ಪ್ರಕರಣ ದಾಖಲಾಗಿದೆ.

ಸ್ನೇಹಿತನಿಂದಲೇ ನಯವಂಚನೆ

ಶಿವಮೊಗ್ಗದ ವಿಲ್ಸನ್ಎಂಬುವವರು ವಂಚನೆಗೆ ಒಳಗಾಗಿದ್ದಾರೆ. 2024ರಲ್ಲಿ ಕೈಗಾರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಜಗದೀಶ ಎಂಬಾತನ ಪರಿಚಯವಾಗಿತ್ತು. ನಿನ್ನ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದುಕೊಟ್ಟರೆ ತಲಾ ₹2,000 ಕಮಿಷನ್ ನೀಡುತ್ತೇನೆ ಎಂದು ಜಗದೀಶ ನಂಬಿಸಿದ್ದ. ಹಾಗಾಗಿ ವಿಲ್ಸನ್ಸ್ ಎರಡು ಸಿಮ್ ಕಾರ್ಡ್‌ಗಳು ಮತ್ತು ಆಧಾರ್ ಸೇರಿದಂತೆ ತನ್ನ ವೈಯಕ್ತಿಕ ದಾಖಲೆಗಳನ್ನು ಜಗದೀಶನಿಗೆ ನೀಡಿದ್ದ.

SMS-Fraud-Shimoga-CEN-Police-Station.

ಸೈಬರ್ ವಂಚನೆಗೆ ಬ್ಯಾಂಕ್‌ ಖಾತೆಗಳು

ಜಗದೀಶನು ವಿಲ್ಸನ್ ಹೆಸರಿನಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಎಸ್‌ಬಿಐ (SBI) ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ತೆರೆಯಿಸಿದ್ದ. ನಂತರ ಆ ಖಾತೆಗಳ ಪಾಸ್‌ಬುಕ್, ಎಟಿಎಂ ಕಾರ್ಡ್, ಚೆಕ್ ಬುಕ್ ಮತ್ತು ಖಾತೆಗೆ ಲಿಂಕ್ ಆಗಿದ್ದ ಮೊಬೈಲ್ ನಂಬರ್‌ಗಳನ್ನು ತಾನೇ ಇಟ್ಟುಕೊಂಡು ವಿಲ್ಸನ್‌ನಂತೆ ನಟಿಸುತ್ತಾ ಸೈಬರ್ ವಂಚನೆಯ ಹಣವನ್ನು ವರ್ಗಾವಣೆ ಮಾಡಲು ಬಳಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

2024ರಿಂದ ಫೆಬ್ರವರಿ 2026ರವರೆಗೆ ನಡೆಯುತ್ತಲೇ ಇತ್ತು. ಕೆಲ ದಿನದ ಹಿಂದೆ ಎಸ್‌ಬಿಐ ಬ್ಯಾಂಕ್ ಸಿಬ್ಬಂದಿ ವಿಲ್ಸನ್ ಅವರನ್ನು ಸಂಪರ್ಕಿಸಿ, ನಿಮ್ಮ ಬ್ಯಾಂಕ್ ಖಾತೆಯು ಸೈಬರ್ ಅಪರಾಧಗಳಿಗೆ ಬಳಕೆಯಾಗಿರುವುದರಿಂದ ಅದನ್ನು ಫ್ರೀಜ್ಮಾಡಲಾಗಿದೆ ಎಂದು ತಿಳಿಸಿದ್ದರು. ಆತಂಕಗೊಂಡ ವಿಲ್ಸನ್ ದೂರು ನೀಡಿದ್ದಾರೆ. ಶಿವಮೊಗ್ಗ ಸಿ.ಇ.ಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಡಿಗೆ ಬ್ಯಾಂಕ್‌ ಖಾತೆ

ಬ್ಯಾಂಕ್‌ ಖಾತೆಗಳ ವಿವರ, ಎಟಿಎಂ ಕಾರ್ಡ್‌, ಪಾಸ್‌ ಬುಕ್‌, ಸಿಮ್‌ ಕಾರ್ಡ್‌ಗಳನ್ನು ತಮ್ಮ ಬಳಿ ಇರಿಸಿಕೊಂಡು ಸೈಬರ್‌ ವಂಚಕರಿಗೆ ಹಸ್ತಾಂತರಿಸುವ ಜಾಲ ಸಕ್ರಿಯವಾಗಿದೆ. ಇಂತಹ ಬ್ಯಾಂಕ್‌ ಖಾತೆಗಳನ್ನು MULE ಖಾತೆ (ಬಾಡಿಗೆ ಖಾತೆ) ಎಂದು ಕರೆಯಲಾಗುತ್ತದೆ. ಕಳೆದ ವಾರ ಶಿವಮೊಗ್ಗದ ಕಾರು ಚಾಲಕ ಶರತ್‌ ಕುಮಾರ್‌ ಎಂಬಾತನನ್ನು ಸೈಬರ್‌ ಕ್ರೈಮ್‌ ಪೊಲೀಸರು ಬಂಧಿಸಿದ್ದರು. ಈತನ ಬಳಿ 19 ಬ್ಯಾಂಕ್‌ಗಳ ಪಾಸ್‌ಬುಕ್‌ ಪತ್ತೆಯಾಗಿದ್ದರು. ಇದರಲ್ಲಿ ಒಟ್ಟು 55 ಕೋಟಿ ಮೊತ್ತದ ನಷ್ಟವಾಗಿದೆ ಎಂದು ಅಂದಾಜಿಸಲಾಗಿತ್ತು. ಇದರ ಸಂಪೂರ್ಣ ವರದಿ ಇಲ್ಲಿದೆ. ರಾಜ್ಯವನ್ನೇ ಬೆಚ್ಚಿಬೀಳಿಸಿದ ಶಿವಮೊಗ್ಗದ ಡ್ರೈವರ್‌, 19 ಅಕೌಂಟ್, 25 ATM ಕಾರ್ಡ್‌, ₹55 ಕೋಟಿ ನಷ್ಟ, ಏನಿದು ಕೇಸ್?

ನಮ್ಮ ಸೋಶಿಯಲ್ ಮೀಡಿಯಾ ಗ್ರೂಪ್ ಸೇರಿ

JNN College of Engineering Admissions started

© ಶಿವಮೊಗ್ಗ ಲೈವ್‌ : ಫೆಬ್ರವರಿ 11, 2026

Leave a Comment