ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIKARIPURA NEWS | 2 ಜನವರಿ 2021
ಹೊಸ ವರ್ಷಾಚರಣೆ ಕೇಕ್ ಕಟ್ ಮಾಡುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಯುವಕನೊಬ್ಬನ ಹತ್ಯೆ ಮಾಡಲಾಗಿದೆ.
ಮನೋಜ್ (22) ಮೃತ ದುರ್ದೈವಿ. ಈತ ಶಿಕಾರಿಪುರದ ಆಶ್ರಯ ಬಡಾವಣೆಯ ನಿವಾಸಿ. ಇದೆ ಬಡಾವಣೆಯ ಇಸಾಕ್ ಮತ್ತು ಆತನ ಸ್ನೇಹಿತರು ಮನೋಜ್‌ನ ಹತ್ಯೆ ಮಾಡಿದ್ದಾರೆ.
ಕೇಕ್ ಕಟ್ ವಿಚಾರದಲ್ಲಿ ಕಿರಿಕ್
ಹೊಸ ವರ್ಷಾಚರಣೆಗೆ ಕೇಕ್ ಮಾಡುವ ವಿಚಾರದಲ್ಲಿ ಮನೋಜ್ ಮತ್ತು ಇಸಾಕ್ ನಡುವೆ ಕಿರಿಕ್ ಆಗಿತ್ತು. ಇದೆ ವಿಚಾರವಾಗಿ ಮನೋಜ್‌ನನ್ನು ಹತ್ಯೆ ಮಾಡಲಾಗಿದೆ. ಘಟನೆ ಸಂಬಂಧ ಇಸಾಕ್‌ನನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ. ಇತರೆ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಶಿಕಾರಿಪುರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422