ಶಿವಮೊಗ್ಗ RTO ಕಚೇರಿಯಲ್ಲಿ ಶೂ ಕೈಯಲ್ಲಿ ಹಿಡಿದು ಅಧಿಕಾರಿಗಳ ಕಿತ್ತಾಟ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

NEWS HIGHLIGHTS
SHIVAMOGGA LIVE NEWS, 7 FEBRUARY 2025
➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ಶಿವಮೊಗ್ಗ : ನಗರದ ಸಾರಿಗೆ ಇಲಾಖೆ (RTO) ಕಚೇರಿಯಲ್ಲಿ ಇಬ್ಬರು ಅಧಿಕಾರಿಗಳು ಕೈ ಕೈ ಮಿಲಾಯಿಸಿದ್ದಾರೆ. ಶೂ ಕೈಯಲ್ಲಿ ಹಿಡಿದು ಗಲಾಟೆ ಮಾಡಿಕೊಂಡಿದ್ದಾರೆ. ನೂಕಾಟದ ವೇಳೆ ಕಂಪ್ಯೂಟರ್‌ ಒಂದಕ್ಕೆ ಹಾನಿಯಾಗಿದೆ ಎಂದು ಆರೋಪಿಸಲಾಗಿದೆ.

ಕೆಲಸದ ವಿಚಾರವಾಗಿ ಇಬ್ಬರು ಅಧಿಕಾರಿಗಳ (ಕಾರಣಾಂತರದಿಂದ ಹೆಸರು ಗೌಪ್ಯ) ಮಧ್ಯೆ ಜಗಳವಾಗಿದೆ ಎಂದು ಆರೋಪಿಸಲಾಗಿದೆ. ಒಬ್ಬ ಅಧಿಕಾರಿ ಶೂ ಕೈಯಲ್ಲಿ ಹಿಡಿದುಕೊಂಡು ಹೊಡೆಯುವುದಾಗಿ ಬೆದರಿಸಿದ್ದಾರೆ ಎನ್ನಲಾಗಿದೆ. ಗಲಾಟೆಯಾಗುತ್ತಿದ್ದಂತೆ ಇಬ್ಬರು ಅಧಿಕಾರಿಗಳನ್ನು ಉಳಿದ ಸಿಬ್ಬಂದಿ ಹಿಡಿದುಕೊಂಡಿದ್ದಾರೆ.

RTO-office-at-jayanagara-in-Shimoga

ಈ ಮಧ್ಯೆ ಅಧಿಕಾರಿಯೊಬ್ಬರು ಕುರ್ಚಿಯನ್ನು ಎತ್ತಿ ಬಿಸಾಡಿದ್ದರಿಂದ ಕಂಪ್ಯೂಟರ್‌ಗೆ ಹಾನಿಯಾಗಿದೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಮಂಗಳದ ಪಾರಂಪರಿಕ ನಾಟಿ ವೈದ್ಯ ಶಿವಣ್ಣಗೌಡ ನಿಧನ, ಇಲ್ಲಿದೆ ಅವರ ಕುರಿತ 4 ಪ್ರಮುಖಾಂಶ

Leave a Comment