SHIVAMOGGA LIVE NEWS, 7 FEBRUARY 2025
ತೀರ್ಥಹಳ್ಳಿ : ಪಾರಂಪರಿಕ ನಾಟಿ ಔಷಧ ವೈದ್ಯ (Healer) ಇಲ್ಲಿನ ಮಂಗಳ ಗ್ರಾಮದ ಎಂ.ಬಿ.ಶಿವಣ್ಣಗೌಡ (88) ಗುರುವಾರ ಬೆಳಗ್ಗೆ ನಿಧನರಾದರು. ಕಳೆದ 5 ದಶಕದಿಂದ ಕೋಣಂದೂರು ಸಮೀಪದ ಮಂಗಳದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಮೃತರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಗುರುವಾರ ಸಂಜೆ ಮಂಗಳ ಗ್ರಾಮದಲ್ಲಿ ಶಿವಣ್ಣಗೌಡ ಅವರ ಅಂತ್ಯಕ್ರಿಯೆ ನೆರವೇರಿತು.
ಶಿವಣ್ಣಗೌಡ ಕುರಿತು ಇಲ್ಲಿದೆ ಪ್ರಮುಖಾಂಶ
ಮಾಹಿತಿ : ಹೊಸಕೊಪ್ಪ ಶಿವು, ಪತ್ರಕರ್ತ
ಶಿವಣ್ಣಗೌಡ ಶಾಲೆ, ಕಾಲೇಜಿಗೆ ಹೋದವರಲ್ಲ. ತಂದೆ ಬೆನವಯ್ಯಗೌಡ ಅವರೊಂದಿಗೆ ನಾಟಿ ವಿದ್ಯೆ ಕಲಿತಿದ್ದರು. ಕಳೆದ 5 ದಶಕಕ್ಕು ಹೆಚ್ಚು ಕಾಲದಿಂದ ಹಲವು ಬಗೆಯ ಕಾಯಿಲೆಗಳಿಗೆ ನಾಟಿ ಔಷಧದ ಮೂಲಕ ಚಿಕಿತ್ಸೆ ನೀಡುತ್ತಿದ್ದರು. ಜಾನುವಾರುಗಳಿಗು ಶಿವಣ್ಣಗೌಡ ಅವರು ಚಿಕಿತ್ಸೆ ನೀಡುತ್ತಿದ್ದರು.
ಶಿವಣ್ಣಗೌಡ ಅವರು ತೀರ್ಥಹಳ್ಳಿ, ಮಂಡಗದ್ದೆ, ಹೆದ್ದಾರಿಪುರದ ಕಲ್ಲೂರು ಸೇರಿದಂತೆ ಸುತ್ತಮುತ್ತಲ ಊರುಗಳಿಂದ ಗಿಡ ಮೂಲಿಕೆಗಳನ್ನು ಸಂಗ್ರಹಿಸಿ ತಂದು ಔಷಧ ಸಿದ್ದಪಡಿಸುತ್ತಿದ್ದರು. ಮಂಗಳದ ಔಷಧಿ ಜನಜನಿತವಾಗಿತ್ತು. ಇಲ್ಲಿ ಸಿಗುತ್ತಿದ್ದ ಎಣ್ಣೆ, ನೋವು ನಿವಾರಕ ಶಕ್ತಿ ಹೊಂದಿತ್ತು. ಸೊಪ್ಪು, ಬೇರು, ಕಾಳು, ಕಡ್ಡಿ ಬೆರೆಸಿ ಎಣ್ಣೆ ಸಿದ್ಧಪಡಿಸುತ್ತಿದ್ದರು.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರಿಗೆ ಕಾಲು ನೋವಿಗೆ ಚಿಕಿತ್ಸೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಭುಜದ ನೋವಿಗೆ ಚಿಕಿತ್ಸೆ. ಶಿವಣ್ಣಗೌಡ ಅವರ ಪುತ್ರ ಶ್ರೀಕಾಂತ್ ಫೋಟೊದಲ್ಲಿದ್ದಾರೆ.
ಮೂಳೆ ಮುರಿತ, ವಾತಕಸ, ಮೆದುಳು ಸಂಬಂಧ ನಿಶಕ್ತಿ, ಪಕ್ಕೆಲುಬು ಸಂಬಂಧ ಕಾಯಿಲೆ, ಬೆನ್ನು ನೋವುಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ದನಕರುಗಳ ಕಾಲು ಮುರಿತ, ಹೊಟ್ಟೆ ಹುಳು, ದೇಹದ ಭಾಗಗಳಲ್ಲಿ ಕಾಣಿಸುತ್ತಿದ್ದ ಹುಳುಗಳು ಸೇರಿದಂತೆ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿದ್ದರು.
ಮಂಗಳ ಗ್ರಾಮದಲ್ಲಿ ಶಿವಣ್ಣಗೌಡ ಅವರಿಂದ ಚಿಕಿತ್ಸೆಗೆ ಬಂದಿದ್ದ ಜನರು.
ಮಂಗಳದ ಶಿವಣ್ಣಗೌಡ ಅವರ ಬಳಿ ಚಿಕಿತ್ಸೆಗೆ ರಾಜ್ಯ, ಹೊರ ರಾಜ್ಯದಿಂದ ಜನ ಬರುತ್ತಿದ್ದರು. ಭಾನುವಾರ ಅತಿ ಹೆಚ್ಚು ಸಂಖ್ಯೆಯ ಜನರು ಬರುತ್ತಿದ್ದರು. ಸಚಿವರು, ಶಾಸಕರು, ಸೆಲೆಬ್ರಿಟಿಗಳೆಲ್ಲ ಇಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮಾಜಿ ಸಚಿವೆ ಮನೋರಮಾ ಮಧ್ವರಾಜ್, ಪತ್ರಕರ್ತೆ ಗೌರಿ ಲಂಕೇಶ್, ಸಾಹಿತಿ ಚಂದ್ರಶೇಖರ ಕಂಬಾರ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸೇರಿದಂತೆ ಹಲವರು ಇಲ್ಲಿ ಚಿಕಿತ್ಸೆ ಪಡೆದು ಗುಣವಾಗಿದ್ದಾರೆ. ಇವರ ಸೇವೆಗೆ ಕರ್ನಾಟಕ ಪಾರಂಪಾರಿಕ ಜನಪದ ವೈದ್ಯ ಪರಿಷತ್ ‘ಜನಪದ ವೈದ್ಯ ರತ್ನ’ ಪ್ರಶಸ್ತಿ ನೀಡಿ ಗೌರವಸಿತ್ತು.
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರಿಗೆ ಚಿಕಿತ್ಸೆ ನೀಡಿದ್ದ ಶಿವಣ್ಣಗೌಡ
ಶಿವಣ್ಣಗೌಡ ಅವರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸೇರಿದಂತೆ ಹಲವು ಗಣ್ಯರಿಗೆ ಚಿಕಿತ್ಸೆ ನೀಡಿದ್ದರು. ಹಲವು ಪ್ರಶಸ್ತಿಗಳನ್ನು ಕೂಡ ಗಳಿಸಿದ್ದರು. ಅವರ ಔಷಧ ಪದ್ಧತಿ ಮನುಷ್ಯನ ದೇಹಕ್ಕೆ ಯಾವುದೇ ಹಾನಿ ಮಾಡದೇ ಗುಣ ಮಾಡತ್ತಿತ್ತು. ವಿಜ್ಞಾನ, ಆಧುನಿಕ ವೈದ್ಯ ಪದ್ಧತಿಗೆ ಸವಾಲಾಗುವಂತಿತ್ತು. ಪ್ರಸಿದ್ಧ ನಾಟಿ ವೈದ್ಯರಾಗಿ ರಾಜ್ಯದ ಲಕ್ಷಾಂತರ ಜನರ ಮೂಳೆ ಸಂಬಂಧಿತ ಕಾಯಿಲೆಗಳಿಗೆ ಸಂಜೀವಿನಿಯಾಗಿತ್ತು.
ಆರಗ ಜ್ಞಾನೇಂದ್ರ, ತೀರ್ಥಹಳ್ಳಿ ಶಾಸಕ
ಇದನ್ನೂ ಓದಿ » ಶಿವಮೊಗ್ಗದಲ್ಲಿ ಕಂಬಳ, ಟ್ರ್ಯಾಕ್ ನಿರ್ಮಾಣಕ್ಕೆ ಗುದ್ದಲಿ ಪೂಜೆ, ಯಾವಾಗ? ಎಲ್ಲಿ ನಡೆಯುತ್ತೆ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200