ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | ಆಗುಂಬೆ NEWS | 30 ಜನವರಿ 2022
ತೋಟದಲ್ಲಿ ಒಣಗಿಸಲು ಇಟ್ಟಿದ್ದ ಒಂದೂವರೆ ಕ್ವಿಂಟಾಲ್ ಅಡಕೆ ಕಳ್ಳತನ ಮಾಡಿದ್ದ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಆಗುಂಬೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನನ್ನು ಸುಧಾಕರ್ ಎಂದು ಗುರುತಿಸಲಾಗಿದೆ. ಕಳವು ಮಾಡಿದ್ದ ಅಡಕೆಯನ್ನು ಕೂಡ ವಶಕ್ಕೆ ಪಡೆಯಲಾಗಿದೆ.
ಏನಿದು ಆಗುಂಬೆ ಅಡಕೆ ಕಳವು ಕೇಸ್?
ತೀರ್ಥಹಳ್ಳಿ ತಾಲೂಕು ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯ ಕೌರಿಹಕ್ಕಲು ಗ್ರಾಮದ ವೆಂಕಟೇಶ್ ಅವರ ತೋಟದಲ್ಲಿ ಅಡಕೆ ಕಳವಾಗಿತ್ತು. ತೋಟದಲ್ಲಿ ಉದುರಿದ್ದ ಅಡಕೆಯನ್ನು ಆರಸಿ ತಂದು ಖಾಲಿ ಜಾಗದಲ್ಲಿ ಒಣಗಿಸಲು ಹಾಕಲಾಗಿತ್ತು.
ಇದನ್ನೂ ಓದಿ | ಇವತ್ತಿನ ಅಡಕೆ ಧಾರಣೆ | 28 ಜನವರಿ 2022 | APMC
ವೆಂಕಟೇಶ್ ಅವರು ಇಲ್ಲದೆ ಇರುವ ಸಂದರ್ಭ ತೋಟದಲ್ಲಿ ಒಣಗಿಸಲು ಹಾಕಿದ್ದ ಅಡಕೆ ಪೈಕಿ, ಒಂದೂವರೆ ಕ್ವಿಂಟಾಲ್’ನಷ್ಟು ಕಳ್ಳತನವಾಗಿತ್ತು. ಈ ಸಂಬಂಧ ವೆಂಕಟೇಶ್ ಅವರು ಆಗುಂಬೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕಳವಾದ ಅಡಕೆಯ ಮೌಲ್ಯ ಸುಮಾರು 50 ಸಾವಿರ ರೂ. ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ತನಿಖೆ ನಡೆಸಿದ ಪೊಲೀಸರು ಸುಧಾಕರ್ ಎಂಬಾತನನ್ನು ಬಂಧಿಸಿದ್ದಾರೆ. ಆತನಿಂದ ಅಡಕೆಯನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರೆದಿದೆ.
ತೀರ್ಥಹಳ್ಳಿ ಡಿವೈಎಸ್ ಪಿ ಶಾಂತವೀರ ಅವರ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಪ್ರವೀಣ್ ನೀಲಮ್ಮನವರ್, ಆಗುಂಬೆ ಪಿಎಸ್ ಐ ಶಿವಕುಮಾರ್ ನೇತೃತ್ವದಲ್ಲಿ ಸಿಬ್ಬಂದಿ ವೀರೇಂದ್ರ, ಸುದರ್ಶನ, ಆದರ್ಶ, ಮಂಜುನಾಥ ಅವರ ತಂಡ ಆರೋಪಿಯನ್ನು ಬಂಧಿಸಿದೆ.
Info : Shimoga Police
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422