ಆಯಾತಪ್ಪಿ ಕೆಳಗೆ ಬಿದ್ದ ವೃದ್ಧನ ತಲೆ ಮೇಲೆ ಹತ್ತಿದ ಚಕ್ರಗಳು

Published On : ಜೂನ್ 3, 2022

Published By : ನಿತಿನ್‌ ಆರ್‌.ಕೈದೊಟ್ಲು 

SHIVAMOGGA LIVE NEWS | ACCIDENT | 3 ಜೂನ್ 2022

ಬಸ್ಸಿನಿಂದ ಇಳಿಯುವಾಗ ಆಯಾತಪ್ಪಿ ಕೆಳಗೆ ಬಿದ್ದ ವೃದ್ಧನ ತಲೆ ಮೇಲೆ ಅದೇ ಬಸ್ಸಿನ ಚಕ್ರಗಳು ಚಲಿಸಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಾಲಕನ ನಿರ್ಲಕ್ಷ್ಯವೆ ಅಪಘಾತಕ್ಕೆ ಕಾರಣ ಎಂದು ಆರೋಪಿಸಲಾಗಿದೆ.

ಶಿಕಾರಿಪುರ ತಾಲೂಕು ಕಪ್ಪನಹಳ್ಳಿಯ ಬೂದ್ಯಪ್ಪ (60) ಮೃತ ದುರ್ದೈವಿ. ಶಿಕಾರಿಪುರದ ಎಸ್.ಎಸ್.ರಸ್ತೆಯಲ್ಲಿ ಘಟನೆ ಸಂಭವಿಸಿದೆ.

ಬೂದ್ಯಪ್ಪ ಅವರು ಶಿರಾಳಕೊಪ್ಪದಿಂದ ಶಿಕಾರಿಪುರಕ್ಕೆ ಆಗಮಿಸಿದ್ದರು. ಎಸ್.ಎಸ್.ರಸ್ತೆಯಲ್ಲಿ ಬಸ್ ನಿಲ್ಲಿಸಿದಾಗ ಬೂದ್ಯಪ್ಪ ಅವರು ಕೆಳಗೆ ಇಳಿಯುತ್ತಿದ್ದರು. ಈ ವೇಳೆ ಚಾಲಕ ಏಕಾಏಕಿ ಬಸ್ಸನ್ನು ಚಲಾಯಿಸಿದ್ದರಿಂದ ಬೂದ್ಯಪ್ಪ ಅವರು ಆಯಾತಪ್ಪಿ ಕೆಳಗೆ ಬಿದ್ದಿದ್ದಾರೆ. ಬಸ್ಸಿನ ಮುಂದಿನ ಚಕ್ರ ಬೂದ್ಯಪ್ಪ ಅವರ ತಲೆ ಮೇಲೆ ಹರಿದಿದೆ.

ಬೂದ್ಯಪ್ಪ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಾಲಕ ಗಣೇಶ ಎಂಬಾತನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ ಎಂದು ದೂರು ದಾಖಲಾಗಿದೆ. ಶಿಕಾರಿಪುರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Shimoga Nanjappa Hospital

ಇದನ್ನೂ ಓದಿ – ರಾಗಿಗುಡ್ಡದಲ್ಲಿ 8 ಭಾರಿ ಸ್ಪೋಟ ಕೇಸ್, ಡಿಸಿ ಕಚೇರಿಗೆ ಸ್ಥಳೀಯರ ದೌಡು

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಮ್ಮ ಸೋಶಿಯಲ್ ಮೀಡಿಯಾ ಗ್ರೂಪ್ ಸೇರಿ

JNN College of Engineering Admissions started

© ಶಿವಮೊಗ್ಗ ಲೈವ್‌ : ಜೂನ್ 3, 2022

Leave a Comment