ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗ ಲೈವ್.ಕಾಂ | SHIMOGA NEWS | 5 APRIL 2021
ಬ್ಯಾಂಕ್ ಮ್ಯಾನೇಜರ್ ಸೋಗಿನಲ್ಲಿ ಕರೆ ಮಾಡಿ ವಂಚಿಸುತ್ತಿದ್ದವರು ಈಗ ಬ್ಯಾಂಕ್ ಅಧಿಕಾರಿ ಎಂದು ತಿಳಿಸಿ, ಭದ್ರಾವತಿ ವ್ಯಕ್ತಿಯೊಬ್ಬರ ಅಕೌಂಟ್ನಿಂದ ಹಣ ಲಪಟಾಯಿಸಿದ್ದಾರೆ.
ಇದನ್ನೂ ಓದಿ | ಬ್ಯಾಂಕ್ ಮ್ಯಾನೇಜರ್ ಸೋಗಿನಲ್ಲಿ ಫೋನ್ ಮಾಡಿ ಹೊಸ ಕಥೆ ಹೆಣೆದು ಮಹಾ ವಂಚನೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿ ಎಂದು ಭದ್ರಾವತಿ ತಾಲೂಕಿನ ವ್ಯಕ್ತಿಯೊಬ್ಬರಿಗೆ ಕರೆ ಮಾಡಿದ ವಂಚಕನೊಬ್ಬ, 92,200 ರೂ. ಲಪಟಾಯಿಸಿದ್ದಾನೆ.
ಇದನ್ನೂ ಓದಿ | ಹಣ ಡ್ರಾ ಮಾಡಿಲ್ಲ, ಆನ್ಲೈನ್ ವ್ಯವಹಾರವು ಆಗಿಲ್ಲ, ಆದರೂ ಉದ್ಯಮಿಯ ಖಾತೆಯಿಂದ 83 ಸಾವಿರ ಮಾಯ
ಹಿಂದಿ ಭಾಷೆಯಲ್ಲಿ ಮಾತನಾಡಿದ ನಯ ವಂಚಕನೊಬ್ಬ, ನಿಮ್ಮ ಖಾತೆಯ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾನೆ. ಅಲ್ಲದೆ ಎರಡು ಭಾರಿ ಭದ್ರಾವತಿಯ ವ್ಯಕ್ತಿಯಿಂದ ಒಟಿಪಿಯನ್ನ ಪಡೆದುಕೊಂಡಿದ್ದಾನೆ. ಇದಾಗಿ ಕೆಲವೆ ಹೊತ್ತಲ್ಲಿ ಭದ್ರಾವತಿಯ ವ್ಯಕ್ತಿಯ ಖಾತೆಯಿಂದ 92,200 ರೂ. ವರ್ಗಾವಣೆಯಾಗಿರುವುದಾಗಿ ಮೆಸೇಜು ಬಂದಿದೆ.
ಅನ್ಲೈನ್ ವಂಚನೆ ಕುರಿತು ಭದ್ರಾವತಿಯ ವ್ಯಕ್ತಿಯು ಶಿವಮೊಗ್ಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com






