ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 9 SEPTEMBER 2023
SHIMOGA : ಚಿನ್ನದ ಅಂಗಡಿಯಲ್ಲಿ ನಕಲಿ ಬಂಗಾರ (Fake Gold) ಇಟ್ಟು ಅಸಲಿ ಬಂಗಾರ ಕಳವು ಮಾಡಿದ್ದ ಆರೋಪಿಯನ್ನು ದೊಡ್ಡಪೇಟೆ ಪೊಲೀಸರು ವರ್ಷದ ಬಳಿಕ ಬಂಧಿಸಿದ್ದಾರೆ. ಮತ್ತೊಬ್ಬ ಅರೋಪಿ ತಲೆಮರೆಸಿಕೊಂಡಿದ್ದಾಳೆ.
ಕೊಪ್ಪಳದ ಮೆಹಬೂಬ್ (25) ಬಂಧಿತ ಆರೋಪಿ, ಕಳೆದ ವರ್ಷ ಗಾಂಧಿಬಜಾರ್ನ ಬಸವೇಶ್ವರ ದೇವಸ್ಥಾನದ ಬಳಿಯಿರುವ ಬಂಗಾರದ ಅಂಗಡಿಗೆ ಬುರ್ಖಾ ಧರಿಸಿದ್ದ ಮಹಿಳೆ ಜತೆ ಬಂದು 11,500 ರೂ. ಮೌಲ್ಯದ ಚಿನ್ನಾಭರಣ ಖರೀದಿಸಿ ಹೋಗಿದ್ದ. ಮತ್ತೊಮ್ಮೆ ಬಂದ ಇಬ್ಬರೂ ಬೇರೆ ಒಡವೆಗಳನ್ನು ಖರೀದಿಸುವ ನೆಪದಲ್ಲಿ ಅಂಗಡಿಯಲ್ಲಿದ್ದ ಹುಡುಗನ ಗಮನ ಬೇರೆಡೆ ಸೆಳೆದು ಅಸಲಿ ಬಂಗಾರದ ಒಡವೆ ಜಾಗದಲ್ಲಿ, ಅದೇ ರೀತಿಯ ನಕಲಿ ಒಡವೆ ಇಟ್ಟು 85,900 ರೂ. ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು.
ಇದನ್ನೂ ಓದಿ – ಖಾಸಗಿ ಸಂಸ್ಥೆ ಡ್ಯೂಟಿ ಮ್ಯಾನೇಜರ್ ಮೇಲೆ ಗಾಂಧಿ ಬಜಾರ್ನಲ್ಲಿ ಹಲ್ಲೆ
ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸರು ಕೊಪ್ಪಳದಲ್ಲಿ ಹಸುವಿನ ವ್ಯಾಪಾರ ಮಾಡಿಕೊಂಡಿದ್ದ ಮೆಹಬೂಬ್ ಎಂಬಾತನನ್ನು ಬಂಧಿಸಿದ್ದಾರೆ.
ದೊಡ್ಡಪೇಟೆ ಠಾಣೆ ಇನ್ಸ್ಪೆಕ್ಟರ್ ಅಂಜನ್ ಕುಮಾರ್, ಪಿಎಸ್ಐಗಳಾದ ವಸಂತ್, ಶ್ರೀನಿವಾಸ್, ಎಎಸ್ಐ ಚಂದ್ರಶೇಖರ್, ಸಿಬ್ಬಂದಿ ಪಾಲಾಕ್ಷ ನಾಯಕ, ಲಚ್ಚಾನಾಯ್ಕ ಚಂದ್ರನಾಯ್ಕ, ನಿತಿನ್, ರಮೇಶ್ ಅವರ ತಂಡ ಕಾರ್ಯಾಚರಣೆ ನಡೆಸಿದೆ. ಮತ್ತೊಬ್ಬ ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422