ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | Paytm Customer Care| 11 ಏಪ್ರಿಲ್ 2022
ಪೇಟಿಎಂ ಕಸ್ಟಮರ್ ಕೇರ್ ಸೆಂಟರ್ ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ ವಂಚನೆ ಮಾಡಲಾಗಿದೆ. ಬ್ಯಾಂಕ್ ಖಾತೆಯಲ್ಲಿ ಪೂರ್ತಿ ಹಣ ಲಪಟಾಯಿಸಿ ಕೇವಲ 2 ರೂ. ಉಳಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಗುತ್ತಿಗೆದಾರ ಹೇಮಾಚಾರಿ ಎಂಬುವವರಿಗೆ ಪೇಟಿಯಂ ಕಸ್ಟಮರ್ ಕೇರ್ ಹೆಸರಿನಲ್ಲಿ ವಂಚಿಸಲಾಗಿದೆ. ಅವರ ಬ್ಯಾಂಕ್ ಖಾತೆಯಿಂದ 95 ಸಾವಿರ ರೂ. ಹಣವನ್ನು ವಂಚಕರು ವರ್ಗಾಯಿಸಿಕೊಂಡಿದ್ದಾರೆ.
ಏನಿದು ಪ್ರಕರಣ?
ಹೇಮಾಚಾರಿ ಅವರು ಪೇಂಟಿಂಗ್ ಗುತ್ತಿಗೆದಾರರಾಗಿದ್ದಾರೆ. ತಮ್ಮೊಂದಿಗೆ ಕೆಲಸ ಮಾಡುವ ಸಂದೀಪ್ ಎಂಬವವರಿಗೆ ಹಣ ನೀಡಬೇಕಿತ್ತು. ಪೇಟಿಎಂ ಬಳಸಿ 25 ಸಾವಿರ ರೂ. ಹಣ ವರ್ಗಾಯಿಸಿದ್ದರು. ಆದರೆ ಸಂದೀಪ್ ಅವರ ಖಾತೆಗೆ ಹಣ ಬಂದಿರಲಿಲ್ಲ. ಇತ್ತ ಹೇಮಾಚಾರಿ ಅವರ ಖಾತೆಯಿಂದ 25 ಸಾವಿರ ರೂ. ಕಡಿತವಾಗಿತ್ತು.
ಕಸ್ಟಮರ್ ಕೇರ್ ನಂಬರ್
25 ಸಾವಿರ ರೂ. ಹಣದ ಕುರಿತು ಮಾಹಿತಿ ಪಡೆಯಲು ಹೇಮಾಚಾರಿ ಅವರು ಪೇಟಿಎಂ ಕಸ್ಟಮರ್ ಕೇರ್ ನಂಬರ್ ಹುಡುಕಿದ್ದಾರೆ. ಗೂಗಲ್’ನಲ್ಲಿ ಸಿಕ್ಕ ಒಂದು ನಂಬರ್’ಗೆ ಕರೆ ಮಾಡಿದ್ದಾರೆ. ತಾನು ಪೇಟಿಎಂ ಕಸ್ಟಮರ್ ಕೇರ್ ಸೆಂಟರ್’ನ ಅಶ್ವಿನ್ ಕುಮಾರ್ ಎಂದು ವ್ಯಕ್ತಿಯೊಬ್ಬ ಮಾತನಾಡಿದ್ದಾನೆ. ಹೇಮಾಚಾರಿ ಅವರು ತಮ್ಮ ಸಮಸ್ಯೆ ತಿಳಿಸಿದ್ದಾರೆ.
‘ಮೊಬೈಲ್’ಗೆ ಬಂದ ನಂಬರ್ ಹೇಳಿ’
ಪೇಟಿಎಂ ಕಸ್ಟಮರ್ ಕೇರ್ ಸೆಂಟರ್’ನವರಂತೆ ಮಾತನಾಡಿದ ವ್ಯಕ್ತಿ, ಹೇಮಾಚಾರಿ ಅವರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾನೆ. ಆಧಾರ್ ಕಾರ್ಡ್, ಪಾನ್ ಕಾರ್ಡ್ ನಂಬರ್ ಪಡೆದುಕೊಂಡಿದ್ದಾನೆ. ‘ನಿಮ್ಮ ಹಣ ನಿಮ್ಮ ಖಾತೆಗೆ ಬರಲಿದೆ. ಇದಕ್ಕಾಗಿ ನಿಮ್ಮ ಮೊಬೈಲ್’ಗೆ ಬಂದ ನಂಬರನ್ನು ತಮಗೆ ಕಳುಹಿಸಿ’ ಎಂದು ತಿಳಿಸಿದ್ದಾನೆ.
ಒಂದಲ್ಲ, ಎರಡಲ್ಲ ಹತ್ತು ಭಾರಿ ಹಣ ಕಟ್
ಹೇಮಾಚಾರಿ ಅವರ ಮೊಬೈಲ್ ನಂಬರ್’ಗೆ ಐದಾರು ಭಾರಿ ನಂಬರ್ ಬಂದಿದ್ದು ಅದನ್ನು ಪೇಟಿಎಂ ಕಸ್ಟಮರ್ ಕೇರ್ ಸೆಂಟರ್’ನದ್ದು ಎಂದು ಹೇಳಲಾದ ನಂಬರ್’ಗೆ ಕಳುಹಿಸಿದ್ದಾರೆ. ಇದಾಗಿ ಕೆಲವೇ ಸೆಕೆಂಡುಗಳಲ್ಲಿ ಹೇಮಾಚಾರಿ ಅವರ ಮೊಬೈಲ್ ನಂಬರ್’ಗೆ ಎಸ್.ಎಂ.ಎಸ್’ಗಳು ಬಂದಿವೆ. ಮೊದಲ ಭಾರಿ 40 ಸಾವಿರ ರೂ. , ನಂತರ 9988 ರೂ., 5 ಸಾವಿರ ರೂ., ಮೂರು ಭಾರಿ 4998 ರೂ., 4896 ರೂ., ಎರಡು ಭಾರಿ 9999 ರೂ., 1700 ರೂ. ಕಡಿತವಾಗಿರು ಸಂದೇಶವಿತ್ತು.
ಉಳಿದದ್ದು ಎರಡೇ ರುಪಾಯಿ
ಹೇಮಾಚಾರಿ ಅವರ ಖಾತೆಯಿಂದ ಹತ್ತು ಭಾರಿ ಹಣ ಕಡಿತವಾಗಿತ್ತು. ಕೆಲವೆ ನಿಮಿಷದಲ್ಲಿ ಒಟ್ಟು 96,576 ರೂ. ಹಣ ಯಾವುದೋ ಖಾತೆಗೆ ವರ್ಗಾವಣೆಯಾಗಿತ್ತು. ಕೊನೆಗೆ ಹೇಮಾಚಾರಿ ಅವರ ಖಾತೆಯಲ್ಲಿ 2 ರೂ. ಮಾತ್ರ ಉಳಿದಿತ್ತು. ತಾವು ವಂಚನೆಗೊಳಗಾಗಿರುವ ಶಂಕೆ ವ್ಯಕ್ತವಾಗಿದೆ. ತಾವು ಕಳುಹಿಸಿದ ನಂಬರ್ ಒಟಿಪಿ ಎಂದು ಹೇಮಾಚಾರಿ ಅವರಿಗೆ ತಡವಾಗಿ ಅರ್ಥವಾಗಿದೆ. ಕೂಡಲೆ ಪೇಟಿಎಂ ಕಸ್ಟಮರ್ ಕೇರ್ ಎಂದು ಹೇಳಲಾದ ನಂಬರ್’ಗೆ ಕರೆ ಮಾಡಿದ್ದಾರೆ. ಆದರೆ ಆತ ಕರೆ ಸ್ವೀಕರಿಸಲಿಲ್ಲ.
25 ಸಾವಿರ ವಾಪಸ್ ಬಂತು
ಇನ್ನು, ಹೇಮಾಚಾರಿ ಅವರು ತಮ್ಮ ಸ್ನೇಹಿತ ಸಂದೀಪ್’ಗೆ ಪೇಟಿಎಂ ಮೂಲಕ ವರ್ಗಾಯಿಸಿದ್ದ 25 ಸಾವಿರ ಹಣ ಹಿಂತಿರುಗಿ ಬಂದಿದೆ. ಮೂರು ದಿನ ಬಳಿಕ ಹೇಮಾಚಾರಿ ಅವರ ಖಾತೆಗೆ ಹಣ ಹಿಂತಿರುಗಿದೆ.
ಇತ್ತ ವಂಚನೆಗೊಂಡಿರುವುದಾಗಿ ಗೊತ್ತಾದ ಕೂಡಲೆ ಹೇಮಾಚಾರಿ ಅವರು ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200
paytm customer care