NEWS HIGHLIGHTS
ಶಿವಮೊಗ್ಗ: ಸಾರ್ವಜನಿಕ ಸ್ಥಳದಲ್ಲಿ ಜನರಿಗೆ ಮದ್ಯಸೇವನೆಗೆ ಅವಕಾಶ ನೀಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಹೊಳೆ ಬಸ್‌ಸ್ಟಾಪ್‌ನಿಂದ ಗುಂಡಪ್ಪಶೆಡ್ ಕಡೆಗೆ ಹೋಗುವ ರಸ್ತೆಯ ರೈಲ್ವೆ ಟ್ರ್ಯಾಕ್ ಹತ್ತಿರ ಈ ಘಟನೆ ನಡೆದಿದೆ. ಬಂಧಿತನನ್ನು ಪುನೀತ್ ಕುಮಾರ್ ಎಂದು ಗುರುತಿಸಲಾಗಿದೆ.
ಕೋಟೆ ಠಾಣೆಯ ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ASI) ಶ್ರೀನಿವಾಸ್ ವಿ. ಅವರು ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದ್ದರು. ರೈಲ್ವೆ ಟ್ರ್ಯಾಕ್ ಹತ್ತಿರದ ಅರಳಿ ಮರದ ಮುಂಭಾಗ ಪುನೀತ್ ಕುಮಾರ್ ಸಾರ್ವಜನಿಕರಿಗೆ ಮದ್ಯಸೇವನೆ ಮಾಡಲು ಪ್ಲಾಸ್ಟಿಕ್ ಲೋಟಗಳನ್ನು ನೀಡಿ ಸ್ಥಳಾವಕಾಶ ಮಾಡಿಕೊಡುತ್ತಿರುವುದು ಪತ್ತೆಯಾಗಿದೆ. ಪೊಲೀಸರು ಆರೋಪಿಯಿಂದ ಮದ್ಯ, ಪ್ಲಾಸ್ಟಿಕ್ ಲೋಟಗಳನ್ನು ವಶಕ್ಕೆ ಪಡೆದಿದ್ದಾರೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
