ಶಿವಮೊಗ್ಗದ ಲೇಔಟ್‌ ಮೇಲೆ ಪೊಲೀಸ್‌ ರೇಡ್‌, ಗಾಂಜಾ ಪ್ಯಾಕಿಂಗ್‌ ಮಾಡ್ತಿದ್ದ ಇಬ್ಬರು ಅರೆಸ್ಟ್‌

ಶಿವಮೊಗ್ಗ: ವಡ್ಡಿನಕೊಪ್ಪದ ನಿರ್ಮಾಣ ಹಂತದ ಲೇಔಟ್‌ವೊಂದರ ರಸ್ತೆಯಲ್ಲಿ ಗಾಂಜಾ ಪ್ಯಾಕಿಂಗ್ ಮಾಡುತ್ತಿದ್ದಾಗ ಪೊಲೀಸರು ದಾಳಿ (Raid) ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಆಶ್ರಯ ಬಡಾವಣೆಯ ಕಾರ್ತಿಕ್ (21) ಮತ್ತು ಕಡೇಕಲ್‌ನ ರಾಜು (24) ಬಂಧಿತರು. (ಈ ಸುದ್ದಿಯನ್ನು ಇನ್ನು 27 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಇದನ್ನೂ ಓದಿ » ಇನ್ಮುಂದೆ KSRTC ಬಸ್ಸುಗಳಲ್ಲಿ ಯದ್ವತದ್ವ ಲಗೇಜ್‌ ಕೊಂಡೊಯ್ಯುವಂತಿಲ್ಲ, ಜಾರಿಗೆ ಬಂದಿದೆ ಲಗೇಜ್‌ ನೀತಿ

ಆರೋಪಿಗಳು ಸಣ್ಣ ಸಣ್ಣ ಪೊಟ್ಟಣಗಳಲ್ಲಿ ಗಾಂಜಾ ತುಂಬುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ. ಅವರಿಂದ ₹1.70 ಲಕ್ಷ ಮೌಲ್ಯದ 5.780 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

Police-nabbed-two-in-a-layout-at-Shimoga

ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Police-nabbed-two-in-a-layout-at-Shimoga

Leave a Comment