ವಿನೋಬನಗರದಲ್ಲಿ ಅರುಣ್‌ ಕೊಲೆ, ಕಾರಣವೇನು? ಘಟನೆ ಬಗ್ಗೆ SP ಮೊದಲ ಪ್ರಕ್ರಿಯೆ

 ಶಿವಮೊಗ್ಗ  LIVE 

ಶಿವಮೊಗ್ಗ: ವಿನೋಬನಗರದ ತರಕಾರಿ ಮಂಡಿ ಬಳಿ ಕಳೆದ ರಾತ್ರಿ ನಡೆದ ಕೊಲೆ ಪ್ರಕರಣ ಸಂಬಂಧ ಆರೋಪಿಗಳ ಪತ್ತೆಗೆ ಮೂರು ತಂಡ (police teams) ರಚಿಸಲಾಗಿದೆ. ಶೀಘ್ರ ಮೂವರು ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ರಕ್ಷಣಾಧಿಕಾರಿ, ಘಟನೆ ಕುರಿತು ವಿವರಣೆ ನೀಡಿದ್ದಾರೆ.

ಎಸ್‌.ಪಿ ಏನೆಲ್ಲ ಹೇಳಿದರು?

ಅರುಣ್‌ (26) ಎಂಬಾತನ ಹತ್ಯೆಯಾಗಿದೆ. ಆತನ ಹೆಂಡತಿಯ ಸೋದರ ಮಾವ ಮತ್ತು ಆತನ ಇಬ್ಬರು ಸ್ನೇಹಿತರು ಸೇರಿ ಕೊಲೆ ಮಾಡಿದ್ದಾರೆ. ಅರುಣ್‌ ತನ್ನ ಬೈಕಿನಲ್ಲಿ ಬಂದು ಅಂಗಡಿಯೊಂದರ ಮುಂದೆ ನಿಂತಿದ್ದ. ಆಗ ಈ ಮೂವರು ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ. ಅರುಣ್‌ನನ್ನು ಆಸ್ಪತ್ರೆ ಕರೆದೊಯ್ದಾಗ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಹೇಳಿದರು.

SP-GK-Mithun-Kumar-speaks-about-Arun-murder-case.

ಇದನ್ನೂ ಓದಿ » ಶಿವಮೊಗ್ಗ ಜನಶತಾಬ್ದಿ ಸೇರಿ ಹಲವು ರೈಲುಗಳ ಪ್ರಯಾಣ ಅವಧಿ ಕಡಿತ, ಯಶವಂತಪುರ ರೈಲಿನ ವೇಳಾಪಟ್ಟಿ ಬದಲು

ವೈಯಕ್ತಿಕ ಸಮಸ್ಯೆಯೇ ಕಾರಣ

ಐದಾರು ವರ್ಷದ ಹಿಂದೆ ಅರುಣ್‌ ಮದುವೆಯಾಗಿದ್ದ. ದಂಪತಿಗೆ ಮಗು ಕೂಡ ಇದೆ. ಅರುಣ್‌ ಮತ್ತು ಆತನ ಪತ್ನಿ ಮಧ್ಯೆ ಬಹು ಸಮಯದಿಂದ ಭಿನ್ನಾಭಿಪ್ರಾಯ ಇತ್ತು. ಈತ ಮದ್ಯ ಸೇವಿಸಿ ಗಲಾಟೆ ಮಾಡುತ್ತಾನೆ ಎಂದು ಆತನ ವಿರುದ್ಧ ಗಲಾಟೆ ಆಗಿತ್ತು. ಕುಟುಂಬದವರೆಲ್ಲ ಸೇರಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡಿದ್ದರು. ಅದರ ಮುಂದುವರೆದ ಭಾಗವಾಗಿ ಈ ಕೊಲೆಯಾಗಿದೆ ಎಂದು ತಿಳಿಸಿದರು.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment