ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 16 DECEMBER 2022
ಶಿವಮೊಗ್ಗ : ಖಾಸಗಿ ಬಸ್ ನಿಲ್ದಾಣದಲ್ಲಿ (Private Bus Stand) ಅಪರಾಧ ಚಟುವಟಿಕೆ ತಡೆಯಲು ಪೊಲೀಸ್ ಇಲಾಖೆ ಬಿಗಿ ಕ್ರಮ ಕೈಗೊಂಡಿದೆ. ಬಸ್ ನಿಲ್ದಾಣದ ವಿವಿಧೆಡೆ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಈ ಕ್ಯಾಮರಾಗಳ ಮೂಲಕ ಪೊಲೀಸ್ ಇಲಾಖೆ ನಿರಂತರ ಮಾನಿಟರಿಂಗ್ ಮಾಡಲಿದೆ.
ಖಾಸಗಿ ಬಸ್ ನಿಲ್ದಾಣದಲ್ಲಿ (Private Bus Stand) ಅಪರಾಧ ಚಟುವಟಿಕೆ ಅವ್ಯಾಹತವಾಗಿತ್ತು. ಮೊಬೈಲ್, ಪರ್ಸ್, ಬ್ಯಾಗ್ ಕಳ್ಳತನ, ಗಾಂಜಾ ಅಮಲಿನಲ್ಲಿರುವವರ ಹಾವಳಿ, ಅನೈತಿಕ ಚಟುವಟಿಕೆ ನಡೆಯುತ್ತಿರುವ ವರದಿಯಾಗುತ್ತಿತ್ತು. ಈ ಕುರಿತು ದೊಡ್ಡಪೇಟೆ ಠಾಣೆಯಲ್ಲಿ ಆಗಾಗ ಪ್ರಕರಣಗಳು ಕೂಡ ದಾಖಲಾಗುತ್ತಿತ್ತು.
(Private Bus Stand)
ನಿಲ್ದಾಣಕ್ಕೆ ಬಂತು ಸಿಸಿ ಕ್ಯಾಮರಾ
ಖಾಸಗಿ ಬಸ್ ನಿಲ್ದಾಣಕ್ಕೆ ಜಿಲ್ಲೆ ಮತ್ತು ಹೊರ ಜಿಲ್ಲೆಯಿಂದ ಜನರು ಬಂದು ಹೋಗುತ್ತಾರೆ. ಪಕ್ಕದಲ್ಲಿಯೆ ಹೂವಿನ ಮಾರುಕಟ್ಟೆ ಸ್ಥಾಪಿಸಲಾಗಿದೆ. ಹಾಗಾಗಿ ಪ್ರತಿ ದಿನ ಸಾವಿರಾರು ಜನರು ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಓಡಾಡುತ್ತಾರೆ. ತಡರಾತ್ರಿಯು ಇಲ್ಲಿಂದ ಖಾಸಗಿ ಬಸ್ಸುಗಳು ಸಂಚರಿಸುತ್ತವೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಕೆಲವರು ಕಳ್ಳತನ, ಸುಲಿಗೆ, ಗಾಂಜಾ ಸೇದುವ ಅಡ್ಡೆ ಮಾಡಿಕೊಂಡಿದ್ದರು. ಇವುಗಳನ್ನು ನಿಗ್ರಹಿಸಲು ಪೊಲೀಸರು ಸಿಸಿ ಕ್ಯಾಮರಾ ಮೊರೆ ಹೋಗಿದ್ದಾರೆ.
ಪೊಲೀಸರಿಂದ ನೇರವಾಗಿ ಮಾನಿಟರಿಂಗ್
ಖಾಸಗಿ ಬಸ್ ನಿಲ್ದಾಣದಲ್ಲಿ ಅಳವಡಿಸಿರುವ ಸಿಸಿಟಿವಿಗಳನ್ನು ಪೊಲೀಸರೆ ನೇರವಾಗಿ ಮಾನಿಟರಿಂಗ್ ಮಾಡುತ್ತಿದ್ದಾರೆ. ನಿಲ್ದಾಣದಲ್ಲಿ ಯಾವುದೆ ಚಟುವಟಿಕೆ ಕಂಡು ಬಂದರೆ ಪೊಲೀಸರು ತಕ್ಷಣಕ್ಕೆ ಸ್ಥಳಕ್ಕೆ ತಲುಪಲು ಸಾಧ್ಯವಾಗುತ್ತದೆ. ಅಲ್ಲದೆ ಆರೋಪಿಗಳ ಬಂಧನಕ್ಕು ಅನುಕೂಲವಾಗಲಿದೆ.
‘ಖಾಸಗಿ ಬಸ್ ನಿಲ್ದಾಣದ ಕುರಿತು ಸಭೆ ನಡೆದಾಗ ಅನೈತಿಕ ಚಟುವಟಿಕೆ ಬಗ್ಗೆ ಮಾತು ಕೇಳಿ ಬಂದಿತ್ತು. ಈಗ 8 – 10 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಅದರ ಫೀಡ್ ನಮ್ಮ ಠಾಣೆಗೆ ಸಿಗಿಲಿದೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ತಿಳಿಸಿದರು.
ಇದನ್ನೂ ಓದಿ – ಮೈಸೂರಿನ ಮಕ್ಕಳಿದ್ದ ಬಸ್ ಸಿಗಂದೂರು ಬಳಿ ಅಪಘಾತ, ಇಡೀ ದ್ವೀಪ ನೆರವಿಗೆ ನಿಂತಿದ್ದು ಹೇಗೆ ಗೊತ್ತಾ?
ಸರ್ಕಾರಿ ಬಸ್ ನಿಲ್ದಾಣದಲ್ಲಿ KSRTCಯ ಪ್ರತ್ಯೇಕ ಭದ್ರತಾ ವ್ಯವಸ್ಥೆ ಇದೆ. ಆದರೆ ಖಾಸಗಿ ಬಸ್ ನಿಲ್ದಾಣದಲ್ಲಿ ಭದ್ರತೆ ಇಲ್ಲದಿರುವುದು ಅನೈತಿಕ ಚುಟುವಟಿಕೆಗಳು ನಡೆಯುತ್ತಿದ್ದವು. ಇವುಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಮುಂದಡಿ ಇಟ್ಟಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422