ಶಿವಮೊಗ್ಗದಲ್ಲಿ ಹಾಡಹಗಲೆ ಶಿಕ್ಷಕಿಯ ಪರ್ಸ್‌ ಕಸಿದು ಎಸ್ಕೇಪ್‌, ಎಲ್ಲಿ? ಹೇಗಾಯ್ತು ಘಟನೆ?

 ಶಿವಮೊಗ್ಗ  LIVE 

ಶಿವಮೊಗ್ಗ: ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಆಗಂತುಕರು ಶಿಕ್ಷಕಿಯ ಪರ್ಸ್‌ ಕಸಿದು ಪರಾರಿಯಾಗಿದ್ದಾರೆ (Purse Snatching). ಶರಾವತಿ ನಗರದಲ್ಲಿ ಶುಕ್ರವಾರ ಘಟನೆ ಸಂಭವಿಸಿದೆ.

ಖಾಸಗಿ ಶಾಲೆಯಲ್ಲಿ ಟೈಲರಿಂಗ್‌ ಶಿಕ್ಷಕಿಯಾಗಿರುವ (Teacher) ಆಯನೂರಿನ ನಾಗಮಣಿ ಅರಸ್‌ ಅವರ ಪರ್ಸ್‌ ಕಳ್ಳತನವಾಗಿದೆ. ನಾಗಮಣಿ ಅರಸ್‌ ಅವರು ಶಿವಮೊಗ್ಗದ ಸರ್ಕ್ಯೂಟ್‌ ಹೌಸ್‌ (Circuit House) ಎದುರು ಬಸ್‌ ಇಳಿದು ಬೆಳಗ್ಗೆ 11 ಗಂಟೆ ಹೊತ್ತಿಗೆ ಶಾಲೆ ಕಡೆಗೆ ನಡೆದು ಹೋಗುತ್ತಿದ್ದರು. ಆಗ ಬೈಕಿನಲ್ಲಿ ಬಂದ ಇಬ್ಬರು ಯುವಕರು, ನಾಗಮಣಿ ಅರಸ್‌ ಅವರ ಕೈಯಲ್ಲಿದ್ದ ಪರ್ಸ್‌ ಕಸಿದುಕೊಂಡು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

Sigandur-Janthre-2026-scaled.

Police-Jeep-in-Shimoga-city

ಇದನ್ನೂ ಓದಿ » ಡಾ.ಜಯಶ್ರೀ, ಪುತ್ರ ಆಕಾಶ್‌ ಆತ್ಮಹತ್ಯೆ ಕೇಸ್‌, ಗೊತ್ತಾಗಿದ್ದು ಹೇಗೆ? ‘ಸಾನಿಧ್ಯ’ ಮನೆ ಬಗ್ಗೆ ಜನ ಹೇಳಿದ್ದೇನು?

ಪರ್ಸ್‌ನಲ್ಲಿ (Purse Snatching) ಸ್ಯಾಮ್‌ಸಂಗ್‌ ಮೊಬೈಲ್‌, ₹11,500 ನಗದು, ಎಟಿಎಂ ಕಾರ್ಡ್‌, ರೇಷನ್‌ ಕಾರ್ಡ್‌, ಕನ್ನಡಕ ಇತ್ತು ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment